For Quick Alerts
ALLOW NOTIFICATIONS  
For Daily Alerts

ಬಜೆಟ್ 2022 ಮುಂದೂಡುವ ಅಗತ್ಯವಿಲ್ಲ: ಚುನಾವಣಾ ಆಯೋಗ ಮುಖ್ಯಸ್ಥ

|

ಕೇಂದ್ರ ಬಜೆಟ್ ಇಡೀ ಭಾರತಕ್ಕೆ, ಕೇವಲ ಯಾವ ರಾಜ್ಯದಲ್ಲಿ ಚುನಾವಣೆ ನಡೆಯಲಿದೆಯೋ ಆ ರಾಜ್ಯಕ್ಕೆ ಮೀಸಲಾಗಿರುವುದು ಅಲ್ಲ ಎಂದು ತಿಳಿಸಿರುವ ಚುನಾವಣಾ ಆಯೋಗವು ಫೆಬ್ರವರಿ 1 ರಂದು ನಡೆಯಲಿರುವ ಕೇಂದ್ರ ಬಜೆಟ್‌ ಅನ್ನು ಮುಂದೂಡುವ ಅಗತ್ಯವಿಲ್ಲ ಎಂದು ಶನಿವಾರ ಹೇಳಿದೆ.

 

ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರ ಚುನಾವಣೆಗೆ ಒಳಪಡುವ ಐದು ರಾಜ್ಯಗಳ ಚುನಾವಣಾ ದಿನಾಂಕಗಳನ್ನು ಚುನಾವಣಾ ಆಯೋಗ ಮುಖ್ಯಸ್ಥ ಸುಶೀಲ್ ಚಂದ್ರ ಘೋಷಣೆ ಮಾಡಿದ ಬಳಿಕ, ಬಜೆಟ್ ಮಂಡನೆಯಲ್ಲಿ ಹಸ್ತಕ್ಷೇಪ ಮಾಡಲಾರೆವು ಎಂದು ತಿಳಿಸಿದ್ದಾರೆ. ಹಾಗೆಯೇ ಈ ಬಜೆಟ್‌ ಇಡೀ ದೇಶಕ್ಕೆ ಸಂಬಂಧಿಸಿದ್ದು, ಮುಂದೂಡುವ ಅಗತ್ಯ ಇಲ್ಲ ಎಂದಿದ್ದಾರೆ.

 

ಜ.9: ಕಚ್ಚಾತೈಲ ಬೆಲೆ ಏರಿಕೆ; ಭಾರತದಲ್ಲಿ ಇಂಧನ ಬೆಲೆ ಬದಲಾಗಿಲ್ಲಜ.9: ಕಚ್ಚಾತೈಲ ಬೆಲೆ ಏರಿಕೆ; ಭಾರತದಲ್ಲಿ ಇಂಧನ ಬೆಲೆ ಬದಲಾಗಿಲ್ಲ

"ಬಜೆಟ್ ಎಂಬುವುದು ಪ್ರತಿ ವರ್ಷ ನಡೆಯಬೇಕಾದ ಒಂದು ವ್ಯವಸ್ಥೆಯಾಗಿದೆ. ಅದಕ್ಕಾಗಿ ಸದನದಲ್ಲಿ ಹೇಳಿಕೆಯನ್ನು ನೀಡಬೇಕಾಗುತ್ತದೆ. ಚುನಾವಣಾ ಆಯೋಗವು ಬಜೆಟ್ ಮಂಡನೆಯಲ್ಲಿ ಹಸ್ತಕ್ಷೇಪ ಮಾಡಲು ಇಷ್ಟಪಡುವುದಿಲ್ಲ. ಏಕೆಂದರೆ ಅದು ಈ ಐದು ರಾಜ್ಯಗಳಿಗೆ ಸೀಮಿತವಾಗಿರದೆ ಇಡೀ ದೇಶಕ್ಕೆ ಸಂಬಂಧಿಸಿದ್ದು ಆಗಿದೆ," ಎಂದು ಚುನಾವಣಾ ಆಯೋಗ ಮುಖ್ಯಸ್ಥ ಸುಶೀಲ್ ಚಂದ್ರ ತಿಳಿಸಿದ್ದಾರೆ.

 ಬಜೆಟ್ ಮುಂದೂಡುವ ಅಗತ್ಯವಿಲ್ಲ: ಚುನಾವಣಾ ಆಯೋಗ ಮುಖ್ಯಸ್ಥ

ಬಜೆಟ್‌ನಿಂದ ತೊಂದರೆ ಆಗದು: ಚುನಾವಣಾ ಆಯೋಗ ಮುಖ್ಯಸ್ಥ

"ಬಜೆಟ್‌ ಎಂಬುವುದು ವೆಚ್ಚಗಳ ಹಂಚಿಕೆ ಮತ್ತು ಆದಾಯ ಹೆಚ್ಚಿಸುವ ಕ್ರಮವಾಗಿದೆ. ಹಾಗಿರುವಾಗ ಬಜೆಟ್‌ನಿಂದ ಯಾವುದೇ ತೊಂದರೆ ಹೇಗೆ ಆಗುತ್ತದೆ. ಬಜೆಟ್ ಮಂಡನೆಯಿಂದ ಎಲ್ಲ ಪಾಲುದಾರರಿಗೆ ಅವಕಾಶ ಲಭಿಸಲಿದೆ. ಬಜೆಟ್‌ನಿಂದ ತೊಂದರೆ ಆಗದು. ಚುನಾವಣೆ ಸಂದರ್ಭದಲ್ಲಿ ಸಂಸತ್ ಅಧಿವೇಶನ ನಡೆಯುವ ಸಾಧ್ಯತೆ ಇದೆ. ಬಜೆಟ್ ಅಧಿವೇಶನದ ದಿನಾಂಕಗಳು ಇನ್ನಷ್ಟೇ ಪ್ರಕಟವಾಗಬೇಕಿದೆ," ಎಂದು ಕೂಡಾ ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತಾ ಚುನಾವಣಾ ಆಯೋಗ ಮುಖ್ಯಸ್ಥರು ಹೇಳಿದ್ದಾರೆ. ಫೆಬ್ರವರಿ 1 ರಂದು ಬಜೆಟ್ ಮಂಡನೆ ಮಾಡಲಾಗುತ್ತದೆ. ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನಕ್ಕೆ ಅಧಿಸೂಚನೆ ಹೊರಡಿಸುವ ದಿನವಾದ ಜನವರಿ 14ರಂದು ಚುನಾವಣಾ ಪ್ರಕ್ರಿಯೆ ಆರಂಭವಾಗಲಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ಪಂಜಾಬ್, ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ತಮ್ಮ ನಾಲ್ಕನೇ ಬಜೆಟ್ ಅನ್ನು ಮಂಡಿಸಲು ಸಿದ್ಧರಾಗಿದ್ದಾರೆ. ಅದಕ್ಕೆ ಇನ್ನು ಕೆಲವೇ ವಾರಗಳು ಇದೆ. ಈ ನಡುವೆ 2022 ರ ಬಜೆಟ್‌ನಲ್ಲಿ ಏನೆಲ್ಲಾ ಘೋಷಣೆ ಆಗಬಹುದು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಕಳೆದ ವರ್ಷ, ಹಣಕಾಸು ಸಚಿವರು ಬಜೆಟ್‌ ಘೋಷಣೆ ಮಾಡುವ ಮೂಲಕ ಕೆಲವೊಂದು ಸರಳ ನೀತಿಗಳನ್ನು ಜಾರಿಗೆ ತಂದಿದ್ದರು. ಸ್ವಾವಲಂಬಿ ಆರೋಗ್ಯಕರ ಭಾರತ ಯೋಜನೆಯಿಂದ ವಾಹನ ಸ್ಕ್ರ್ಯಾಪಿಂಗ್ ನೀತಿಯವರೆಗೆ ಸಾಮಾನ್ಯ ಜನರಿಗೆ ಹಲವಾರು ಘೋಷಣೆಗಳನ್ನು ಮಾಡಿದ್ದಾರೆ. ಮುಂಬರುವ ಯೋಜನೆಯಲ್ಲಿಯೂ ಹಲವಾರು ಯೋಜನೆಗಳನ್ನು ಮಾಡುವ ಸಾಧ್ಯತೆ ಇದೆ. ದೇಶದಲ್ಲಿ ಉದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಜಾರಿ ಮಾಡುವ ಸಾಧ್ಯತೆ ಇದೆ. ಇದಲ್ಲದೆ, ಸರ್ಕಾರವು ತೆರಿಗೆದಾರರಿಗೆ ತೆರಿಗೆ ವಿನಾಯಿತಿಯನ್ನು ನಿಗದಿಪಡಿಸಬಹುದು ಎಂಬ ನಿರೀಕ್ಷೆಯು ಇದೆ. ಕಳೆದ ಬಜೆಟ್‌ನಲ್ಲಿ ಸರ್ಕಾರವು ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ, ಅಂದರೆ ತೆರಿಗೆದಾರರಿಗೆ ಯಾವುದೇ ಮಹತ್ವದ ಪರಿಹಾರವನ್ನು ಘೋಷಿಣೆ ಮಾಡಿಲ್ಲ. ಆದರೆ ಮುಂಬರುವ ಬಜೆಟ್‌ನಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ.

English summary

No Need to Defer Budget 2022 Says CEC After Announcing Election Dates

No Need to Defer Budget 2022 Says CEC After Announcing Election Dates.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X