For Quick Alerts
ALLOW NOTIFICATIONS  
For Daily Alerts

ಶೈಕ್ಷಣಿಕ ಸಾಲ ಮನ್ನಾ ಆಗುತ್ತಾ? ಏನಂತಾರೆ FM ನಿರ್ಮಲಾ ಸೀತಾರಾಮನ್

|

ದೊಡ್ಡ ಮಟ್ಟದ ಕನಸನ್ನು ಹೊತ್ತ ವಿದ್ಯಾರ್ಥಿಗಳು ಶೈಕ್ಷಣಿಕ ಕೋರ್ಸ್‌ಗಳಿಗೆ ಹಣವನ್ನು ಭರಿಸಲಾಗದೆ ಶೈಕ್ಷಣಿಕ ಸಾಲ(Education Loan) ಮಾಡಿಸುವುದು ಸಾಮಾನ್ಯ. ಕೆಲವೊಮ್ಮೆ ಈ ಸಾಲವನ್ನು ತೀರಿಸುವುದು ಕಷ್ಟಸಾಧ್ಯವಾಗಿರುತ್ತದೆ. ಸಾಲ ಮನ್ನಾ ಆದರೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಆದರೆ ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಶೈಕ್ಷಣಿಕ ಸಾಲ ಮನ್ನಾ ಕುರಿತು ಯಾವುದೇ ಪ್ರಸ್ತಾಪ ಕೇಂದ್ರದ ಮುಂದೆ ಇಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

 

ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿರ್ಮಲಾ ಸೀತಾರಾಮನ್, ದೇಶದ ಸದ್ಯದ ಮಂದಗತಿಯ ಆರ್ಥಿಕ ಪರಿಸ್ಥಿತಿಯಲ್ಲಿ ಶೈಕ್ಷಣಿಕ ಸಾಲ ಮನ್ನಾ ಮಾಡುವ ಯಾವುದೇ ಪ್ರಸ್ತಾಪ ಕೇಂದ್ರದ ಮುಂದಿಲ್ಲ ಎಂದಿದ್ದಾರೆ.

 
ಶೈಕ್ಷಣಿಕ ಸಾಲ ಮನ್ನಾ ಆಗುತ್ತಾ? ಏನಂತಾರೆ FM ನಿರ್ಮಲಾ ಸೀತಾರಾಮನ್

ಪಬ್ಲಿಕ್ ಸೆಕ್ಟರ್ ಬ್ಯಾಂಕ್‌ಗಳ ಅಂಕಿ-ಅಂಶಗಳ ಪ್ರಕಾರ 2016-17ರವರೆಗೆ ಶೈಕ್ಷಣಿಕ ಸಾಲದ ಮೊತ್ತ 67,685.59 ಕೋಟಿ ರುಪಾಯಿಯಿಂದ 75,450.68 ಕೋಟಿ ರುಪಾಯಿಗೆ ಏರಿಕೆ ಆಗಿದೆ. ಸಾರ್ವಜನಿಕ ಬ್ಯಾಂಕುಗಳು(ಪಿಎಸ್‌ಬಿ) ವರದಿ ಮಾಡಿದಂತೆ ಶಿಕ್ಷಣ ಸಾಲವನ್ನು ಮರುಪಾವತಿಸಲು ಸಾಧ್ಯವಾಗದೇ ಯಾವುದೇ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿಲ್ಲ ಎಂದು ಪಿಎಸ್‌ಬಿ ವರದಿಯಲ್ಲಿ ತಿಳಿಸಿದೆ.

ಬ್ಯಾಂಕುಗಳು ಸಾಲವನ್ನು ಮರುಪಡೆಯಲು ಯಾವುದೇ ರೀತಿಯ ಒತ್ತಡ ತಂತ್ರಕ್ಕೆ ಮುಂದಾಗದೆ ಸಂವೇದನಾಶೀಲರಾಗಿ ವರ್ತಿಸುತ್ತಿವೆ ಎಂದು ಅವರು ಲಿಖಿತ ಉತ್ತರದಲ್ಲಿ ನೀಡಿದ್ದಾರೆ. ಇದರ ಜೊತೆಗೆ ಶಿಕ್ಷಣ ಸಾಲ ಮನ್ನಾ ಮಾಡುವ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ ಎಂದಿದ್ದಾರೆ.

English summary

No Proposal For Education Loans Waiver Said FM

ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಶೈಕ್ಷಣಿಕ ಸಾಲ ಮನ್ನಾ ಕುರಿತು ಯಾವುದೇ ಪ್ರಸ್ತಾಪ ಕೇಂದ್ರದ ಮುಂದೆ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X