For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ 1,500 ಉದ್ಯೋಗಿಗಳನ್ನು ವಜಾಗೊಳಿಸಲಿದೆ ನೋಕಿಯಾ

|

ಫಿನ್ಲೆಂಡ್‌ನ ಟೆಲಿಕಾಂ ಸಮೂಹ ನೋಕಿಯಾ ಮುಂದಿನ ದಿನಗಳಲ್ಲಿ ಜಾಗತಿಕ ವೆಚ್ಚ ಕಡಿತಗಳ ಭಾಗವಾಗಿ ಭಾರತದಲ್ಲಿ ಸುಮಾರು 1,500 ಉದ್ಯೋಗಿಗಳನ್ನು ವಜಾಗೊಳಿಸಲಿದೆ. ಜಾಗತಿಕವಾಗಿ ಮುಂದಿನ ಎರಡು ವರ್ಷಗಳಲ್ಲಿ 10,000 ಉದ್ಯೋಗ ಕಡಿತಗೊಳಿಸಲಿದೆ.

 

ಈ ವೆಚ್ಚ ಕಡಿತದಿಂದಾಗಿ ಟೆಲಿಕಾಂ ಬೆಲ್‌ವೆಥರ್ ಸಂಶೋಧನೆ ಮತ್ತು ಅಭಿವೃದ್ಧಿ ಸಾಮರ್ಥ್ಯಗಳತ್ತ ಹೂಡಿಕೆಯನ್ನು ಕಂಪನಿಯು ಉದ್ದೇಶಿಸಿದೆ.

 
ಭಾರತದಲ್ಲಿ 1,500 ಉದ್ಯೋಗಿಗಳನ್ನು ವಜಾಗೊಳಿಸಲಿದೆ ನೋಕಿಯಾ

''ಪುನರ್ರಚನೆ ಯೋಜನೆಗಳು ನೋಕಿಯಾದ ಜಾಗತಿಕ ಕಾರ್ಯಾಚರಣೆಗಳ ಜೊತೆಗೆ ಅದರ ಭಾರತದ ಕಾರ್ಯಾಚರಣೆಗಳ ಮೇಲೂ ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ಸಮಾಲೋಚನೆ ಪ್ರಕ್ರಿಯೆಗಳು ಶೀಘ್ರದಲ್ಲೇ ಪ್ರಾರಂಭವಾಗುವ ಸಾಧ್ಯತೆಯಿದೆ" ಎಂದು ನೋಕಿಯಾ ವಕ್ತಾರರು ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದ್ದಾರೆ.

2 ವರ್ಷದಲ್ಲಿ 10,000 ಉದ್ಯೋಗ ಕಡಿತಗೊಳಿಸಲಿರುವ ನೋಕಿಯಾ2 ವರ್ಷದಲ್ಲಿ 10,000 ಉದ್ಯೋಗ ಕಡಿತಗೊಳಿಸಲಿರುವ ನೋಕಿಯಾ

ಏಷ್ಯಾ-ಪೆಸಿಫಿಕ್ ಪ್ರದೇಶದ ತನ್ನ 20,511 ಉದ್ಯೋಗಿಗಳಲ್ಲಿ, ನೋಕಿಯಾ ಭಾರತದಲ್ಲಿ 15,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ನೋಕಿಯಾದ ಕಾರ್ಯಾಚರಣೆಗಳು ಭಾರತದ ಐದು ಪ್ರಮುಖ ಸ್ಥಳಗಳಲ್ಲಿ ಕೇಂದ್ರೀಕೃತವಾಗಿವೆ. ಬೆಂಗಳೂರು, ಚೆನ್ನೈ, ಗುರಗಾಂವ್, ಮುಂಬೈ ಮತ್ತು ನೋಯ್ಡಾದಲ್ಲಿ ನೋಕಿಯಾ ತನ್ನ ಪ್ರಮುಖ ಕಚೇರಿಗಳನ್ನು ಒಳಗೊಂಡಿದೆ.

English summary

Nokia To Cut 1500 Jobs In India: 10,000 Jobs Globally Over Next 2 Years

As part of its global cost restructuring plans, Finnish telecom giant Nokia will lay off around 1,500 employees in India.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X