For Quick Alerts
ALLOW NOTIFICATIONS  
For Daily Alerts

2 ವರ್ಷದಲ್ಲಿ 10,000 ಉದ್ಯೋಗ ಕಡಿತಗೊಳಿಸಲಿರುವ ನೋಕಿಯಾ

|

ಸ್ವೀಡನ್‌ನ ಎರಿಕ್ಸನ್ ಮತ್ತು ಚೀನಾದ ಹುವಾಯಿಗೆ ಸ್ಪರ್ಧೆಯೊಡ್ಡಲು ಪ್ರಯತ್ನಿಸುತ್ತಿರುವ ಫಿನ್ಲೆಂಡ್‌ನ ಟೆಲಿಕಾಂ ಸಮೂಹ ನೋಕಿಯಾ ಮುಂದಿನ ಎರಡು ವರ್ಷಗಳಲ್ಲಿ 10,000 ಉದ್ಯೋಗಗಳನ್ನು ಕಡಿತಗೊಳಿಸುವ ಯೋಜನೆಯನ್ನು ಪ್ರಕಟಿಸಿದೆ. ಈ ಮೂಲಕ ವೆಚ್ಚ ತಗ್ಗಿಸಲು ಯೋಜಿಸಿರುವುದಾಗಿ ಅತ್ಯಂತ ಹಳೆಯ ಟೆಲಿಕಾಂ ಕಂಪನಿಯು ಹೇಳಿದೆ.

''ಕಂಪನಿಯ ಹಿಂದಿನ ನಿರ್ವಹಣೆಯಡಿಯಲ್ಲಿ ಉತ್ಪನ್ನದಲ್ಲಿ ಆದ ತಪ್ಪು ಹೆಜ್ಜೆಗಳಿಂದ ಚೇತರಿಸಿಕೊಳ್ಳಲು ಬದಲಾವಣೆಗಳನ್ನು ಮಾಡುತ್ತಿರುವುದಾಗಿ'' 2020ರಲ್ಲಿ ಅಧಿಕಾರ ವಹಿಸಿಕೊಂಡ ಮುಖ್ಯ ಕಾರ್ಯನಿರ್ವಾಹಕ ಪೆಕ್ಕಾ ಲುಂಡ್‌ಮಾರ್ಕ್ ಹೇಳಿದ್ದಾರೆ.

2 ವರ್ಷದಲ್ಲಿ 10,000 ಉದ್ಯೋಗ ಕಡಿತಗೊಳಿಸಲಿರುವ ನೋಕಿಯಾ

ಅಕ್ಟೋಬರ್‌ನಲ್ಲಿ ತನ್ನ ಹೊಸ ಕಾರ್ಯತಂತ್ರವನ್ನು ಘೋಷಿಸಿದ ಪೆಕ್ಕಾ ಲುಂಡ್‌ಮಾರ್ಕ್ ನಾಲ್ಕು ವ್ಯಾಪಾರ ಗುಂಪನ್ನು ಹೊಂದಿರುವುದಾಗಿ ಮತ್ತು ಕಂಪನಿಯು 5 ಜಿ ಯಲ್ಲಿ ಮುನ್ನಡೆ ಸಾಧಿಸಲು "ಏನು ಬೇಕಾದರೂ ಮಾಡುತ್ತದೆ" ಎಂದು ತಿಳಿಸಿದ್ದಾರೆ.

ಕಂಪನಿಯು ತನ್ನ ದೀರ್ಘಕಾಲಿಕ ಯೋಜನೆಗಳನ್ನು ಪ್ರಸ್ತುತಪಡಿಸುತ್ತಿದ್ದು, ಹಣಕಾಸಿನ ಗುರಿಗಳನ್ನು ನಿಗದಿಪಡಿಸುತ್ತದೆ ಎಂದು ಲುಂಡ್‌ಮಾರ್ಕ್ ಹೇಳಿದ್ದಾರೆ. 2030ರ ವೇಳೆಗೆ ಸುಮಾರು 600 ಮಿಲಿಯನ್ ಯೂರೋಗಳಷ್ಟು ($715) ಪುನರ್‌ರಚನೆ ಮತ್ತು ಸಂಬಂಧಿತ ಶುಲ್ಕಗಳನ್ನು ನಿರೀಕ್ಷಿಸುತ್ತಿದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

English summary

Nokia To Cut Upto 10K Jobs Over Next 2 Years

Nokia on Tuesday announced plans to cut up to 10,000 jobs within two years to trim costs and invest more in research capabilities
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X