For Quick Alerts
ALLOW NOTIFICATIONS  
For Daily Alerts

ಚೀನಾ ಅಲ್ಲ, ಚೆನ್ನೈನಲ್ಲೇ ಆಪಲ್ ಐಫೋನ್ ಉತ್ಪಾದನೆ

|

ಕೇಂದ್ರ ಸರ್ಕಾರ ಆತ್ಮನಿರ್ಭರ್ ಭಾರತ್ ಅಭಿಯಾನಕ್ಕೆ ಪ್ರಮುಖ ವಿಜಯವೊಂದು ದೊರೆತಿದೆ. ಆಪಲ್ ಕಂಪೆನಿಯು ಐಫೋನ್ 11 ಅನ್ನು ಚೆನ್ನೈನಲ್ಲಿ ಇರುವ ಫಾಕ್ಸ್ ಕಾನ್ ಘಟಕದಲ್ಲಿ ಆರಂಭಿಸಿದೆ. ಇದೇ ಮೊದಲ ಬಾರಿಗೆ ಆಪಲ್ ಕಂಪೆನಿಯ ಮೇಲ್ ಸ್ತರದ ಮೊಬೈಲ್ ಫೋನ್ ಮಾಡೆಲ್ ವೊಂದನ್ನು ಭಾರತದಲ್ಲಿ ಉತ್ಪಾದಿಸಲಾಗುತ್ತಿದೆ.

ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಶುಕ್ರವಾರದಂದು ಟ್ವಿಟ್ಟರ್ ನಲ್ಲಿ ಈ ಬಗ್ಗೆ ಘೋಷಣೆ ಮಾಡಿದರು. ಮೇಕ್ ಇನ್ ಇಂಡಿಯಾಗೆ ಮಹತ್ತರವಾದ ಉತ್ತೇಜನ ಇದು. ಆಪಲ್ ನಿಂದ ಐಫೋನ್ 11ರ ಉತ್ಪಾದನೆಯನ್ನು ಭಾರತದಲ್ಲಿ ಆರಂಭಿಸಲಾಗಿದೆ. ಮೇಲ್ ಸ್ತರದ ಫೋನ್ ಮಾಡೆಲ್ ಅನ್ನು ಮೊದಲ ಬಾರಿಗೆ ಭಾರತಕ್ಕೆ ತರಲಾಗಿದೆ ಎಂದಿದ್ದಾರೆ.

ಚೀನಾದಲ್ಲಿರುವ ತೈಲ ಕಂಪೆನಿಗಳಿಗೆ ಭಾರತದ ಗಾಳ: ಬಿಪಿಸಿಎಲ್ ಸೇರಿ ಇತರ ಕಂಪೆನಿ ಸೇಲ್ಚೀನಾದಲ್ಲಿರುವ ತೈಲ ಕಂಪೆನಿಗಳಿಗೆ ಭಾರತದ ಗಾಳ: ಬಿಪಿಸಿಎಲ್ ಸೇರಿ ಇತರ ಕಂಪೆನಿ ಸೇಲ್

ಇದಕ್ಕೂ ಮೊದಲು ಅಮೆರಿಕದ ಕುಪರ್ಟಿನೋ ಮೂಲದ ಆಪಲ್ ಐಫೋನ್ XR ಜೋಡಣೆಯನ್ನು 2019ರಲ್ಲಿ ಭಾರತದಲ್ಲಿ ಆರಂಭಿಸಿತ್ತು. 2017ರಲ್ಲಿ ಬೆಂಗಳೂರು ಘಟಕದಲ್ಲಿ ಐಫೋನ್ SE ಉತ್ಪಾದನೆ ಶುರು ಮಾಡಿತ್ತು. ಇನ್ನು ಐಫೋನ್ SE 2020 ಮಾಡೆಲ್ ಅನ್ನು ಬೆಂಗಳೂರು ಸಮೀಪದ ವಿಸ್ಟ್ರಾನ್ ನಲ್ಲಿ ಆರಂಭಿಸಲು ಯೋಜನೆ ಹಾಕಿಕೊಂಡಿದೆ.

ಚೀನಾ ಅಲ್ಲ, ಚೆನ್ನೈನಲ್ಲೇ ಆಪಲ್ ಐಫೋನ್ ಉತ್ಪಾದನೆ

ಈ ತಿಂಗಳ ಆರಂಭದಲ್ಲಿ ಫಾಕ್ಸ್ ಕಾನ್ ಕಂಪೆನಿಯು ಭಾರತದಲ್ಲಿ 100 ಕೋಟಿ USD ಹೂಡಿಕೆ ಮಾಡುವ ಬಗ್ಗೆ ಯೋಜನೆ ಹೊರಬಿದ್ದಿತ್ತು. ಈ ಫಾಕ್ಸ್ ಕಾನ್ ಕಾರ್ಖಾನೆಯಲ್ಲಿ ಐಫೋನ್ ಮಾಡೆಲ್ ಗಳ ಜೋಡಣೆ ಆಗುತ್ತದೆ. ಫಾಕ್ಸ್ ಕಾನ್ ನಂತರ ಐಫೋನ್ ಜೋಡಣೆ ಮಾಡುವ ಎರಡನೇ ಅತಿ ದೊಡ್ಡ ಸಂಸ್ಥೆ ಪೆಗಟ್ರಾನ್. ಅದು ಕೂಡ ಭಾರತದಲ್ಲಿ ಹೂಡಿಕೆ ಮಾಡುತ್ತದೆ ಎಂಬ ವರದಿ ಇದೆ. ಭವಿಷ್ಯದಲ್ಲಿ ಸ್ಥಳೀಯವಾಗಿ ಅಂಗ ಸಂಸ್ಥೆಗಳನ್ನು ಶುರು ಮಾಡಬಹುದು.

English summary

Now Apple iPhone Manufacturing In Chennai

Aatma Nirbhar Bharat: Now Apple iPhone manufacturing in Chennai. Announced by commerce minister Piyush Goyal.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X