For Quick Alerts
ALLOW NOTIFICATIONS  
For Daily Alerts

ಈಗ, ಮೂರೇ ದಿನಗಳಲ್ಲಿ ಮೊಬೈಲ್ ಸಂಖ್ಯೆ ಪೋರ್ಟಿಂಗ್

By ಮಂಜುಳಾ
|

ಟೆಲಿಕಾಂ ಸೆಕ್ಟರ್ ರೆಗ್ಯೂಲೇಟರ್ ವಿಭಿನ್ನವಾದ ಪೋರ್ಟಿಂಗ್ ಸಿಸ್ಟಂ ಜಾರಿಗೆ ತರಲು ಮುಂದಾಗಿದೆ. ಈ ಹೊಸ ಸಿಸ್ಟಂ ಪ್ರಕಾರ, ಮೊಬೈಲ್ ಸಂಸ್ಥೆಗಳಿಗೆ ಹೊಸ ಷರತ್ತನ್ನು ವಿಧಿಸಲಾಗಿದೆ. ಈ ಮೂಲಕ, ಪ್ರಾಂತೀಯ ಸೇವಾಕ್ಷೇತ್ರ (Regional Service area) ವ್ಯಾಪ್ತಿಯಲ್ಲಿ ಬರುವ ಮೊಬೈಲ್ ಪೋರ್ಟಿಂಗ್ ಸೇವೆಯನ್ನು ಮೂರು ಕೆಲಸದ (ವರ್ಕಿಂಗ್ ಡೇ) ದಿನದೊಳಗೆ ಸಂಪೂರ್ಣಗೊಳಿಸಬೇಕು. ಅಲ್ಲದೇ, ಒಂದು ವಲಯದಿಂದ ಇನ್ನೊಂದು ವಲಯಕ್ಕೆ ಪೋರ್ಟಿಂಗ್ ಕೆಲಸವನ್ನು ಒಂದು ವಾರದ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎನ್ನುವ ನಿಯಮವನ್ನು ಟೆಲೆಕಾಂ ಸೆಕ್ಟರ್, ಮೊಬೈಲ್ ಸಂಸ್ಥೆಗಳಿಗೆ ಹಾಕಿದೆ.

ಟ್ರಾಯ್ ಮೊಬೈಲ್ ಸಂಖ್ಯೆಯ ಪೊರ್ಟಿಬಿಲಿಟಿ (ಎಂಎನ್ ಪಿ) ಪ್ರಕ್ರಿಯೆಯನ್ನು ಪರಿಷ್ಕರಿಸಿದೆ. ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮಂಗಳವಾರ ನೀಡಿದ ಸಾರ್ವಜನಿಕ ಪ್ರಕಟಣೆಯಲ್ಲಿ ಚಂದಾದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ಪೋರ್ಟ್ ಮಾಡಲು ಅರ್ಹರಾದಾಗ ಮಾತ್ರ ಯುಪಿಸಿ ಜಾರಿಗೆ ಬರುತ್ತದೆ ಎಂದು ಹೇಳಿದೆ. ಅಲ್ಲದೇ, ಪರಿಷ್ಕೃತ ಪ್ರಕ್ರಿಯೆಯನ್ನು ಡಿಸೆಂಬರ್ 16ರಿಂದ ಜಾರಿಗೆ ತರಲಾಗುವುದು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಈಗ, ಮೂರೇ ದಿನಗಳಲ್ಲಿ ಮೊಬೈಲ್ ಸಂಖ್ಯೆ ಪೋರ್ಟಿಂಗ್

ಈ ನಿಯಮದಂತೆ, ಸದ್ಯ ಹೊಂದಿರುವ ಪೋಸ್ಟ್ ಪೈಡ್ ಮೊಬೈಲ್ ಸಂಪರ್ಕದ ಬಿಲ್ ಪಾವತಿಯನ್ನು, ಪೋರ್ಟ್ ಮಾಡುವ ಮೊದಲು ಪಾವತಿ ಮಾಡಿರಬೇಕು.

ಇನ್ನೊಂದು ನಿಯಮದ ಪ್ರಕಾರ, ಹಾಲೀ ನೆಟ್ವರ್ಕ್ ಅನ್ನು ಸಕ್ರಿಯಗೊಳಿಸುವ ಕೆಲಸ 90 ದಿನದ ಕಾಲ ಮಿತಿಯೊಳಗೆ ಆಗಿರಬೇಕು. ಮೂರನೆಯ ಷರತ್ತಿನ ಪ್ರಕಾರ, ಪೋರ್ಟ್ ಮಾಡುವ ಮುನ್ನ, ಚಂದಾದಾರರು ಯಾವ ಸಂಸ್ಥೆಯ ಸೇವೆಯಿಂದ ಹೊರಬರಲು ಬಯಸುತ್ತಾರೋ, ಆ ಸಂಸ್ಥೆಯ ಎಕ್ಸಿಟ್ ನಿಯಮಗಳನ್ನು ಉಲ್ಲಂಘಿಸಬಾರದು. ಮೊಬೈಲ್ ಸಂಖ್ಯೆಯನ್ನು ಪೋರ್ಟ್‌ ಮಾಡುವುದನ್ನು ಯಾವ ನ್ಯಾಯಾಲಯವು ನಿಷೇಧಿಸುವುದಿಲ್ಲ ಮತ್ತು ಪೋರ್ಟ್ ಮಾಡುವುದು ಕಾನೂನಿನ ಉಲ್ಲಂಘನೆಯಲ್ಲ.

ಈಗ, ಅಸ್ತಿತ್ವದಲ್ಲಿರುವ ಎಮ್ ಎನ್ ಪಿ ವ್ಯವಸ್ಥೆಯು ಡಿಸೆಂಬರ್ 16ರಿಂದ ಜಾರಿಗೆ ಬರುತ್ತಿದೆ. ಹಾಗಾಗಿ, ಡಿಸೆಂಬರ್ 10 ರಿಂದ ಡಿಸೆಂಬರ್ 15 ರವರೆಗೆ ಈ ಸೇವೆ ಲಭ್ಯವಿರುವುದಿಲ್ಲ. ಮತ್ತು ಈ ಅವಧಿಯಲ್ಲಿ ಪೋರ್ಟಿಂಗ್ ಕೋಡ್ ಅನ್ನು ಸಹ ನೀಡಲಾಗುವುದಿಲ್ಲ. ಆದರೆ, ಈಗಾಗಲೇ ಸಲ್ಲಿಸಿದ ಪೋರ್ಟಿಂಗ್ ಅರ್ಜಿಗಳನ್ನು ಪರಿಗಣಿಸಲಾಗುವುದು ಎಂದು ಟ್ರಾಯ್ ಮಂಗಳವಾರ (ಡಿ 10) ತಿಳಿಸಿದೆ.

English summary

Now, Mobile Number Porting In Service Area Just In 3 Days

TRAI has revised the mobile number portability process just in 3 days
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X