For Quick Alerts
ALLOW NOTIFICATIONS  
For Daily Alerts

ಪಾಕಿಸ್ತಾನ ರಾಜಕೀಯ, ಅರ್ಥವ್ಯವಸ್ಥೆಯ ಜುಟ್ಟು, ಜನಿವಾರ ಚೀನಾ ಕೈಲಿ

|

ಪಾಕಿಸ್ತಾನದ ರಾಜಕೀಯ ಹಾಗೂ ಆರ್ಥಿಕ ವ್ಯವಹಾರದ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ಚೀನಾ ವರ್ಷಗಳಿಂದ ನಿರಂತರ ಪ್ರಯತ್ನಿಸುತ್ತಲೇ ಇದೆ. 2016ನೇ ಇಸವಿಯಿಂದ ಚೀನಾ- ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ (CPEC) ಯೋಜನೆಯನ್ನು ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಪಾಕಿಸ್ತಾನದ ಕಡೆಗೆ ದಬ್ಬುತ್ತಲೇ ಇದ್ದಾರೆ.

G20 ರಾಷ್ಟ್ರಗಳೊಂದಿಗೆ 33,500 ಕೋಟಿ ರುಪಾಯಿ ಸಾಲ ಕೇಳಿದ ಪಾಕ್G20 ರಾಷ್ಟ್ರಗಳೊಂದಿಗೆ 33,500 ಕೋಟಿ ರುಪಾಯಿ ಸಾಲ ಕೇಳಿದ ಪಾಕ್

CPEC ಮೂಲಕ ಪಾಕಿಸ್ತಾನದ ಮೂಲಸೌಕರ್ಯ ಹಾಗೂ ವಿದ್ಯುತ್ ಉತ್ಪಾದನೆ ಯೋಜನೆಗಳು ನೇರವಾಗಿ ಚೀನಾ ಹತೋಟಿಗೆ ಬಂದುಬಿಡುತ್ತದೆ. ಚೀನಾದ ಪ್ರಸ್ತಾವವನ್ನು ಮೊದಲಿಗೆ ನವಾಜ್ ಷರೀಫ್ ಸರ್ಕಾರ ತಿರಸ್ಕರಿಸಿತ್ತು. ಆದರೆ ಅಂತಿಮವಾಗಿ ಪ್ರಧಾನಿ ಇಮ್ರಾನ್ ಖಾನ್ ಒಪ್ಪಿಕೊಂಡರು.

ಸೈನ್ಯದ ಕೈಗೊಂಬೆ ಇಮ್ರಾನ್ ಖಾನ್

ಸೈನ್ಯದ ಕೈಗೊಂಬೆ ಇಮ್ರಾನ್ ಖಾನ್

ಏಷ್ಯಾ ಟೈಮ್ಸ್ ನಲ್ಲಿ ಅಲಿ ಸಲ್ಮಾನ್ ಅಂದಾನಿ ಲೇಖನವೊಂದನ್ನು ಪ್ರಕಟಿಸಿದ್ದಾರೆ. ಅದರಲ್ಲಿ ಪ್ರಸ್ತಾವ ಮಾಡಿರುವಂತೆ, ಇಮ್ರಾನ್ ಖಾನ್ ಪಾಕಿಸ್ತಾನ ಸೈನ್ಯದ ಕೈಗೊಂಬೆ ಆಗಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಆಸೆಯನ್ನು ಪೂರೈಸಲು, ಪಾಕಿಸ್ತಾನ ಯೋಜನಾ ಸಚಿವಾಲಯದ ಮೇಲೆ ಹಿಡಿತಕ್ಕೆ ಕಾನೂನಿನಲ್ಲೇ ಬದಲಾವಣೆ ತರಬಲ್ಲರು ಎಂದಿದ್ದಾರೆ. ಪಾಕಿಸ್ತಾನದ ಯೋಜನೆ, ಅಭಿವೃದ್ಧಿ ಮತ್ತು ವಿಶೇಷ ಅಭಿಯಾನದ ಸಚಿವಾಲಯವು ಸರ್ಕಾರದ ಪ್ರಮುಖ ಸಂಸ್ಥೆ. ಅಲ್ಲಿನ ಹಿರಿಯ ಅಧಿಕಾರಿಗಳು ಚೀನಾದ ಅಧ್ಯಕ್ಷ ಕ್ಸಿ ಅವರ ರಾಕ್ಷಸ ಸ್ವರೂಪದ CPEC ಯೋಜನೆ ಬಗ್ಗೆ ಅಳೆದು ತೂಗಲು ಮತ್ತು ತಡೆಯಲು ಅವಕಾಶ ಇದೆ. ಏಕೆಂದರೆ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅವರು ಭಾಗಿಯಾದ ಎಲ್ಲ ರಹಸ್ಯ ಒಪ್ಪಂದಗಳ ಬಗ್ಗೆ ಮಾಹಿತಿ ಪಡೆಯಲು ಅವಕಾಶ ಇದೆ. ಆದ್ದರಿಂದ ನಿರ್ಧಾರ ತೆಗೆದುಕೊಳ್ಳಬಹುದಾಗಿರುತ್ತದೆ.

ಪಾಕಿಸ್ತಾನ ಪ್ರಧಾನಿ, ಅಧ್ಯಕ್ಷರಾದರೂ ದಂಡ ವಿಧಿಸಬಹುದು

ಪಾಕಿಸ್ತಾನ ಪ್ರಧಾನಿ, ಅಧ್ಯಕ್ಷರಾದರೂ ದಂಡ ವಿಧಿಸಬಹುದು

CPEC ಅಧಿಕಾರಿಗಳು ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ ಪ್ರತಿನಿಧಿಗಳಾಗಿರುತ್ತಾರೆ. ಪಾಕಿಸ್ತಾನದಲ್ಲಿ ಯೋಜನೆ ರೂಪಿಸಲು, ಅವುಗಳನ್ನು ಜಾರಿಗೆ ತರಲು, ವಿಸ್ತರಣೆಗೆ, ನಿಯಂತ್ರಣಕ್ಕೆ, ಸಂವಹನಕ್ಕೆ, ನಿಗಾ ವಹಿಸಲು ಮತ್ತು ಯೋಜನೆ ಮೌಲ್ಯಮಾಪನಕ್ಕೆ ಹೊಣೆ ಹೊತ್ತಿದ್ದಾರೆ. ಈ CPEC ಅಧಿಕಾರಿಗಳಿಗೆ ಸಾಂವಿಧಾನಿಕ ಹಕ್ಕಿರುತ್ತದೆ. CPECಗೆ ಸಂಬಂಧಿಸಿದಂತೆ ಚಟುವಟಿಕೆಗಳಲ್ಲಿ ಪ್ರತ್ಯಕ್ಷವಾಗಿ- ಪರೋಕ್ಷವಾಗಿ ಒಳಗೊಂಡವರು, ಪಾಕಿಸ್ತಾನದ ಪ್ರಧಾನಮಂತ್ರಿ, ಅಧ್ಯಕ್ಷರು ಸೇರಿದಂತೆ ಯಾವುದೇ ಸಾರ್ವಜನಿಕ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ತಡೆಯೊಡ್ಡಿದರೆ, ನಿರ್ದಿಷ್ಟ ಆದೇಶಕ್ಕೆ ವಿರೋಧ ಮಾಡಿದರ ಅಂಥವರ ಮೇಲೆ ದಂಡ ವಿಧಿಸಬಹುದಾಗಿದೆ.

ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಆದೇಶ ಪಾಲಿಸಬೇಕು

ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಆದೇಶ ಪಾಲಿಸಬೇಕು

CPEC ಅಥಾರಿಟಿ ಮಸೂದೆ 2020ರ ಪ್ರಕಾರ ಪಾಕಿಸ್ತಾನದ ಪ್ರಧಾನಿಗೇ CPEC ಯೋಜನೆಯಲ್ಲಿ ಸೀಮಿತವಾದ ಅಧಿಕಾರ ಇದೆ. ಸ್ವತಃ ಇಮ್ರಾನ್ ಖಾನ್ ಕೂಡ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಆದೇಶಗಳನ್ನು ಪಾಲಿಸಬೇಕು. ಯಾವೆಲ್ಲ ದೇಶಗಳು ಚೀನಾ ನೀಡಿದ ಸಾಲದ ಬಲೆಗೆ ಬೀಳುತ್ತವೋ ಅವುಗಳ ಮೇಲೆ ಕ್ಸಿ ಸವಾರಿ ಆರಂಭಿಸುತ್ತಾರೆ. ಇನ್ನು ಪಾಕಿಸ್ತಾನ ಈಗಾಗಲೇ ಬ್ಯಾಲೆನ್ಸ್ ಆಫ್ ಪೇಮೆಂಟ್ ಸಂಕಷ್ಟ ಎದುರಿಸುತ್ತಿದೆ.

ಬಡ ದೇಶಗಳ ಪಾಲಿನ ನಿಧಾನ ವಿಷ

ಬಡ ದೇಶಗಳ ಪಾಲಿನ ನಿಧಾನ ವಿಷ

ಪಾಕಿಸ್ತಾನ ಹಾಗೂ ಇತರ ಬಡ ಆರ್ಥಿಕತೆ ದೇಶಗಳಿಗೆ ವಿದೇಶಿ ಕರೆನ್ಸಿ ಕೊರತೆ ಆಗುವಂತೆ ನೋಡಿಕೊಳ್ಳುವ ಕ್ಸಿ, ಕ್ರಮೇಣ ಆ ದೇಶಗಳ ಪಾಲಿಗೆ ನಿಧಾನ ವಿಷವಾಗುತ್ತಾರೆ. ಕೊನೆಗೆ ಆ ದೇಶಗಳ ರಾಜಕೀಯ ಹಾಗೂ ಅರ್ಥ ವ್ಯವಸ್ಥೆಯನ್ನು ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ ನಿಯಂತ್ರಿಸುತ್ತದೆ. ಇದೀಗ ಪಾಕಿಸ್ತಾನದ ಸಾರ್ವಭೌಮತೆ, ಜನರ ಸ್ವಾತಂತ್ರ್ಯ ಹಾಗೂ ಭೌಗೋಳಿಕ ಸಮಗ್ರತೆಯನ್ನು ಒತ್ತೆ ಇಟ್ಟು ಕ್ಸಿ ಕನಸನ್ನು ಪೂರ್ತಿ ಮಾಡಲು ಮುಂದಾಗಿದೆ.

English summary

Now Pakistan Political, Economic System Under China Control

China president Xi Jin Ping trying to control Pakistan political and economy control through CPEC. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X