For Quick Alerts
ALLOW NOTIFICATIONS  
For Daily Alerts

ಕಾರ್ವಿ ಸಂಸ್ಥೆಯ ಲೈಸೆನ್ಸ್‌ ರದ್ದುಗೊಳಿಸಿದ BSE, NSE

|

ಷೇರು ಪೇಟೆಯ ನಿಯಮಗಳನ್ನು ಪಾಲಿಸದೆ ಗ್ರಾಹಕರ ಷೇರುಗಳನ್ನು ದುರ್ಬಳಕೆ ಮಾಡಿಕೊಂಡಿದ್ದ ಷೇರು ದಲ್ಲಾಳಿ ಸಂಸ್ಥೆ ಕಾರ್ವಿ ಸ್ಟಾಕ್‌ ಬ್ರೋಕಿಂಗ್ ಲಿಮಿಟೆಡ್‌ನ(ಕೆಎಎಸ್‌ಬಿಲ್‌) ವಹಿವಾಟು ಲೈಸೆನ್ಸ್ ರದ್ದುಗೊಂಡಿದೆ. ಕಾರ್ವಿ ವಿರುದ್ಧ ಮುಂಬೈ ಷೇರುಪೇಟೆ (BSE) ಮತ್ತು ರಾಷ್ಟ್ರೀಯ ಷೇರುಪೇಟೆ (NSE) ಕ್ರಮ ಕೈಗೊಂಡಿದೆ.

ನವೆಂಬರ್ 22ರಂದು ಷೇರು ದಲ್ಲಾಳಿ ವಹಿವಾಟಿಗೆ(ಟ್ರೇಡಿಂಗ್) ಹೊಸ ಗ್ರಾಹಕರನ್ನು ಸೇರಿಸಿಕೊಳ್ಳಬಾರದು ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ(ಸೆಬಿ) ನಿಷೇಧ ಹೇರಿತ್ತು. ಗ್ರಾಹಕರ ಷೇರುಗಳನ್ನು ದುರ್ಬಳಕೆ ಮಾಡಿಕೊಂಡಿದ ಹಿನ್ನೆಲೆಯಲ್ಲಿ ಗ್ರಾಹಕರು ನೀಡಿದ್ದ ಪವರ್‌ ಆಫ್ ಅಟಾರ್ನಿ(ಪಿಒಎ) ಬಳಕೆಗೆ ನಿರ್ಬಂಧಿಸಿತ್ತು.

ಕಾರ್ವಿ ಸಂಸ್ಥೆಯ ಲೈಸೆನ್ಸ್‌ ರದ್ದುಗೊಳಿಸಿದ BSE, NSE

ಕಾರ್ವಿ ಸ್ಟಾಕ್‌ ಬ್ರೋಕಿಂಗ್ ಲಿಮಿಟೆಡ್‌(ಕೆಎಎಸ್‌ಬಿಲ್‌) ತನ್ನ 95 ಸಾವಿರ ಗ್ರಾಹಕರ 2,300 ಕೋಟಿ ಮೊತ್ತದ ಷೇರುಗಳನ್ನು ಅಡಮಾನ ಇಟ್ಟು 600 ಕೋಟಿ ರುಪಾಯಿಗಳಷ್ಟು ಸಾಲ ಪಡೆದಿತ್ತು. ಗ್ರಾಹಕರ ಷೇರುಗಳನ್ನು ದುರ್ಬಳಕೆ ಮಾಡಿಕೊಂಡ ಮತ್ತು ನಿಯಮ ಉಲ್ಲಂಘಿಸಿದ ಷೇರುಗಳನ್ನು ಅಡಮಾನ ಇರಿಸಿ ಸಾಲ ಪಡೆದುಕೊಂಡಿರುವ ಬಗ್ಗೆ ರಾಷ್ಟ್ರೀಯ ಷೇರುಪೇಟೆ(NSE) ಸೆಬಿಗೆ ವರದಿ ಸಲ್ಲಿಸಿತ್ತು.

ಸೆಬಿ ಸರಿಯಾದ ಸಮಯದಲ್ಲಿ ಈ ಕ್ರಮ ಕೈಗೊಂಡಿದ್ದರಿಂದಾಗಿ ಕೆಎಎಸ್‌ಬಿಲ್‌ ಅಕ್ರಮವಾಗಿ ತನ್ನ ಸ್ವಂತ ಖಾತೆಗೆ ವರ್ಗಾಯಿಸಿಕೊಂಡಿದ್ದ ಮತ್ತು ಅಡಮಾನ ಇರಿಸಿದ್ದ ಷೇರುಗಳನ್ನು 83 ಸಾವಿರದಷ್ಟು ಹೂಡಿಕೆದಾರರು ಮರಳಿ ಪಡೆಯಲಿದ್ದಾರೆ. ಉಳಿದವರು ತಮ್ಮ ಬಾಕಿ ಪಾವತಿ ನಂತರ ಪಡೆಯಲಿದ್ದಾರೆ.

English summary

NSE, BSE Suspend Karvy Stock Broking's License

After Miss using customers shares Karvy stock broking's licence Suspend by NSE, BSE and MCX
Story first published: Tuesday, December 3, 2019, 9:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X