For Quick Alerts
ALLOW NOTIFICATIONS  
For Daily Alerts

NSE ಅಕ್ರಮ ಫೋನ್ ಟ್ಯಾಪಿಂಗ್ ಕೇಸ್: 4 ದಿನ ಇಡಿ ಕಸ್ಟಡಿಗೆ ಚಿತ್ರಾ

|

ಭಾರತದ ಅತಿದೊಡ್ಡ ಸ್ಟಾಕ್ ಎಕ್ಸ್‌ಚೇಂಜ್‌(ಎನ್‌ಎಸ್‌ಇ)ಯ ಗೌಪ್ಯ ಮಾಹಿತಿ ಹಂಚಿಕೆ, ಷೇರು ಪರಭಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಅತಿದೊಡ್ಡ ಸ್ಟಾಕ್ ಎಕ್ಸ್‌ಚೇಂಜ್‌ ಎನ್‌ಎಸ್‌ಇಯ ಮಾಜಿ ಮುಖ್ಯಸ್ಥರು ಚಿತ್ರಾ ರಾಮಕೃಷ್ಣ ಪ್ರಕರಣ ಎದುರಿಸುತ್ತಿದ್ದಾರೆ. ಈಗ NSE ಅಕ್ರಮ ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ತಮ್ಮ ವಶಕ್ಕೆ ಪಡೆದುಕೊಂಡಿದೆ. ದೆಹಲಿ ಕೋರ್ಟ್ ಇಂದು ನಾಲ್ಕು ದಿನಗಳ ಮಟ್ಟಿಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಚಿತ್ರಾರನ್ನು ಕಳಿಸಿದೆ.

ಎನ್‌ಎಸ್‌ಇ ಫೋನ್ ಟ್ಯಾಪಿಂಗ್ ಮಾಡಿದ ಆರೋಪ ಮೇಲೆ ಎನ್‌ಎಸ್‌ಇ ಮಾಜಿ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣ, ರವಿ ನಾರಾಯಣ್, ಮುಂಬೈನ ಮಾಜಿ ಪೊಲೀಸ್ ಆಯುಕ್ತ ಸಂಜಯ್ ಪಾಂಡೆ ವಿರುದ್ಧ ಸಿಬಿಐ ಹೊಸದಾಗಿ ಪ್ರಕರಣ ದಾಖಲಿಸಿಕೊಂಡಿದೆ. 2009ರಿಂದ 2017ರ ಅವಧಿಯಲ್ಲಿ ಎನ್‌ಎಸ್‌ಇ ಫೋನ್ ಟ್ಯಾಪಿಂಗ್ ನಡೆದಿದೆ ಎಂದು ಆರೋಪಿಸಲಾಗಿದೆ.

ಮಾಜಿ ಮುಖ್ಯಸ್ಥರಾದ ಚಿತ್ರಾ ರಾಮಕೃಷ್ಣ ಹಿಮಾಲಯದ ಓರ್ವ ಯೋಗಿಯೊಂದಿಗೆ ಗೌಪ್ಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ಈ ಹಿಂದೆ ವರದಿ ಆಗಿತ್ತು. ಈ ಯೋಗಿಯೇ ಆನಂದ್ ಸುಬ್ರಮಣಿಯನ್ ಎಂದು ಹೇಳಲಾಗಿದೆ.

NSE ಫೋನ್ ಟ್ಯಾಪಿಂಗ್: ಚಿತ್ರಾ ವಿರುದ್ಧ ಹೊಸ ಕೇಸ್ ದಾಖಲಿಸಿದ ಸಿಬಿಐNSE ಫೋನ್ ಟ್ಯಾಪಿಂಗ್: ಚಿತ್ರಾ ವಿರುದ್ಧ ಹೊಸ ಕೇಸ್ ದಾಖಲಿಸಿದ ಸಿಬಿಐ

ಭಾರತದ ಅತಿದೊಡ್ಡ ಸ್ಟಾಕ್ ಎಕ್ಸ್‌ಚೇಂಜ್‌ ಎನ್‌ಎಸ್‌ಇಯ ಮಾಜಿ ಮುಖ್ಯಸ್ಥರು ಚಿತ್ರಾ ರಾಮಕೃಷ್ಣ ಹಿಮಾಲಯದ ಓರ್ವ ಯೋಗಿಯೊಂದಿಗೆ ಗೌಪ್ಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆ ಯೋಗಿಯ ಸಲಹೆಯನ್ನು ಪಡೆದು ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂದು ಮಾರುಕಟ್ಟೆ ನಿಯಂತ್ರಕ ಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ತಿಳಿಸಿದೆ ಎಂದು reuters ವರದಿ ಮಾಡಿದೆ.

NSE ಅಕ್ರಮ ಫೋನ್ ಟ್ಯಾಪಿಂಗ್ ಕೇಸ್: 4 ದಿನ ಇಡಿ ಕಸ್ಟಡಿಗೆ ಚಿತ್ರಾ

4 ಲಕ್ಷ ಕೋಟಿ ಅಮೆರಿಕನ್ ಡಾಲರ್ ಮಾರುಕಟ್ಟೆ ಮೌಲ್ಯದ ಭಾರತದ ಅತಿ ದೊಡ್ಡ ಷೇರು ವಿನಿಮಯ ಕೇಂದ್ರ ಎನ್​ಎಸ್​ಇ (NSE)ಗೆ ಮಾಜಿ ಸಿಇಒ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದ ಚಿತ್ರಾ ರಾಮಕೃಷ್ಣ ತಾನು ನೋಡದ, ತನಗೆ ಪರಿಚಯವೇ ಇಲ್ಲದ ಹಿಮಾಲಯದ ಯೋಗಿಯೋರ್ವರ ಸಲಹೆಯನ್ನು ಪಡೆದುಕೊಂಡೇ ನಿರ್ಧಾರವನ್ನು ಕೈಗೊಳ್ಳುತ್ತಿದ್ದರು. NSEಯ ಪ್ರಮುಖ ವ್ಯವಹಾರ ಯೋಜನೆಗಳು ಮತ್ತು ಅಜೆಂಡಾ ಸೇರಿದಂತೆ ಹಲವಾರು ವಿಚಾರಗಳನ್ನು ಆ ಅಪರಿಚಿತ ಯೋಗಿಯೊಂದಿಗೆ ಹಂಚಿಕೊಂಡಿದ್ದಾರೆ ಎಂಬ ವಿಚಾರವನ್ನು ಸೆಬಿ ಬಹಿರಂಗಪಡಿಸಿತ್ತು. ಚಿತ್ರಾ ರಾಮಕೃಷ್ಣ ಅವರು 2013 ಮತ್ತು 2016 ರ ನಡುವೆ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (ಎನ್‌ಎಸ್‌ಇ) ನ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಒ ಆಗಿದ್ದರು ಮತ್ತು "ವೈಯಕ್ತಿಕ ಕಾರಣಗಳನ್ನು" ಉಲ್ಲೇಖಿಸಿ ರಾಜೀನಾಮೆ ನೀಡಿದ್ದರು.

1986 ಬ್ಯಾಚ್ ಅಧಿಕಾರಿ ಸಂಜಯ್ ಪಾಂಡೆ ಜೂನ್ 30 ರಂದು ನಿವೃತ್ತರಾಗಿದ್ದಾರೆ. ಇದಕ್ಕೂ ಮೊದಲು ನಾಲ್ಕು ತಿಂಗಳ ಕಾಲ ಮುಂಬೈ ಪೊಲೀಸ್ ಕಮಿಷನರ್, ಮಹಾರಾಷ್ಟ್ರದ ಹಾಲಿ ಪೊಲೀಸ್ ಮಹಾನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದರು. ಜುಲೈ 5 ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ದೆಹಲಿ ಕಚೇರಿಯಲ್ಲಿ ವಿಚಾರಣೆಗೆ ಕರೆಸಿಕೊಳ್ಳಲಾಗಿತ್ತು.

ಪಾಂಡೆ ಹುಟ್ಟು ಹಾಕಿದ್ದ ಐಸೆಕ್ ಸರ್ವೀಸ್ ಮೂಲಕ ಎನ್ಎಸ್ಇ ಉದ್ಯೋಗಿಗಳ ಮೇಲೆ ನಿಗಾ ಇಡಲಾಗುತ್ತಿತ್ತು. ಈ ರೀತಿ ಗುಪ್ತ ಕಾರ್ಯಾಚರಣೆ ಮಾಡಲು ಎನ್ಎಸ್ಇ ಮಾಜಿ ಮುಖ್ಯಸ್ಥರಿಂದಲೇ ಆದೇಶ ಬಂದಿತ್ತು ಎಂಬ ಆರೋಪವಿದೆ. ಸಂಸ್ಥೆಯಲ್ಲಿ ಅವ್ಯವಹಾರ ನಡೆದರೆ ತಕ್ಷಣದ ಅಲರ್ಟ್ ನೀಡಬೇಕಾದ್ದು, ಐಸೆಕ್ ಸರ್ವೀಸ್ ಮುಖ್ಯ ಕಾರ್ಯವಾಗಿತ್ತು. ಆದರೆ, ಅದನ್ನು ಬಿಟ್ಟು ಉದ್ಯೋಗಿಗಳ ಮೇಲೆ ನಿಗಾ ಇಡಲಾಗುತ್ತಿತ್ತು ಎಂದು ಸಿಬಿಐ ಹಾಗೂ ಇಡಿ ತನ್ನ ವರದಿಯಲ್ಲಿ ತಿಳಿಸಿವೆ.

English summary

NSE illegal phone tapping: Former NSE chief Chitra Ramakrishnan to four-day custodial interrogation

NSE illegal phone tapping: Delhi court on Thursday sent former NSE MD Chitra Ramakrishnan to a four-day custodial interrogation in an alleged illegal phone tapping and snooping case
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X