For Quick Alerts
ALLOW NOTIFICATIONS  
For Daily Alerts

ಇರಾನ್- ಅಮೆರಿಕಾ ಉದ್ವಿಗ್ನ ಪರಿಸ್ಥಿತಿ, ದಿನಬಳಕೆ ವಸ್ತುಗಳ ಬೆಲೆ ಏರಿಕೆ!

|

ಇರಾನ್ ಹಾಗೂ ಅಮೆರಿಕಾ ನಡುವೆ ಯುದ್ಧದ ಪರಿಸ್ಥಿತಿ ಉದ್ಭವಿಸಿದೆ. ಉಭಯ ರಾಷ್ಟ್ರಗಳು ಮುಗಿಬೀಳಲು ರೆಡಿಯಾದಂತಿದ್ದು ಇದರ ಪರಿಣಾಮವು ಅಂತರಾಷ್ಟ್ರೀಯ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದಾಗಿ ಕಚ್ಛಾ ತೈಲ ದರ ಬೆಲೆ ಏರಿಕೆ ಜೊತೆಗೆ ದಿನಬಳಕೆ ವಸ್ತುಗಳ ಮೇಲೂ ಪರಿಣಾಮ ಬೀಳಲಿದೆ.

 

ಕಳೆದ ಕೆಲವು ದಿನಗಳಿಂದ ಕಚ್ಛಾ ತೈಲ ದರವು ಏರುತ್ತಲೆ ಸಾಗಿದೆ. ಬುಧವಾರ ಕಚ್ಛಾ ತೈಲ ದರ ಬ್ಯಾರೆಲ್‌ಗೆ 70 ಅಮೆರಿಕನ್ ಡಾಲರ್ ಮುಟ್ಟಿದೆ. ಭಾರತವು ತಾನು ಬಳಸುವ 80 ಪರ್ಸೆಂಟ್‌ನಷ್ಟು ಪೆಟ್ರೋಲಿಯಂ ಉತ್ಪನ್ನಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಹೀಗಾಗಿ ತೈಲ ದರ ಏರಿಕೆಯು ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಲಿದೆ. ಜೊತೆಗೆ ಆಟೋಮೊಬೈಲ್ ಉದ್ಯಮದ ಮೇಲು ಹೆಚ್ಚಿನ ಪರಿಣಾಮ ಬೀರಲಿದೆ.

 
ಇರಾನ್ ಅಮೆರಿಕಾ ಉದ್ವಿಗ್ನ ಪರಿಸ್ಥಿತಿ, ದಿನಬಳಕೆ ವಸ್ತುಗಳ ಬೆಲೆ ಏರಿಕೆ

ಕಚ್ಛಾ ತೈಲ ದರ ಏರಿಕೆಯಿಂದಾಗಿ ಇಂದಿನ ಷೇರು ಮಾರುಕಟ್ಟೆಯು ಸ್ವಲ್ಪ ಮಟ್ಟಿಗೆ ಕುಸಿಯಿತು. ಸೆನ್ಸೆಕ್ಸ್ 52 ಅಂಶಗಳು ಕುಸಿತ ಕಂಡು 40,817.74ಕ್ಕೆ ತಲುಪಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 28 ಅಂಶಗಳು ಇಳಿಕೆಯಾಗಿ 12,025.35 ಅಂಶಗಳಿಗೆ ತಲುಪಿದೆ. ಇದರ ಜೊತೆಗ ಪೆಟ್ರೋಲಿಯಂ, ಆಟೋಮೊಬೈಲ್, ರಾಸಾಯನಿಕಗಳು, ಪ್ಯಾಕಿಂಗ್ ಸಾಮಗ್ರಿಗಳು, ದಿನಬಳಕೆ ವಸ್ತುಗಳು ಸೇರಿದಂತೆ ಹಲವು ಉದ್ಯಮಗಳು ಕುಸಿತ ಕಂಡಿವೆ.

ತೈಲ ಬೆಲೆ ಏರಿಕೆಯು ದಿನಬಳಕೆ ವಸ್ತುಗಳ ಉತ್ಪಾದನೆ, ಸಾಗಾಟ ಹಾಗೂ ಮಾರಾಟದ ಮೇಲೆಯೂ ಪರಿಣಾಮ ಬೀರುವುದರಿಂದ ನಾವು ಬಳಸುವ ದಿನನಿತ್ಯದ ಸರಕುಗಳ ಬೆಲೆಯು ತುಟ್ಟಿಯಾಗಲಿದೆ.

English summary

Oil Price Rise Will Impact Daily Products

Price of daily use products will increase after crude oil was hiked in international market
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X