For Quick Alerts
ALLOW NOTIFICATIONS  
For Daily Alerts

ಕಚ್ಚಾ ತೈಲ ದರ ಎರಡು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಏಕಾಗಿದೆ?

|

ಜಾಗತಿಕ ಕಚ್ಚಾ ತೈಲ ದರವು ಇಂದು ಮೇ 27 ರಂದು ಎರಡು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ. ಬ್ರೆಂಟ್ ಕಚ್ಚಾ ತೈಲ ಒಂದು ತಿಂಗಳ ಅವಧಿಯಲ್ಲಿ ಅತೀ ಏರಿಕೆಯನ್ನು ಕಂಡಿದೆ. ಬ್ರೆಂಟ್ ಕಚ್ಚಾ ತೈಲದ ಪ್ರತಿ ಬ್ಯಾರೆಲ್‌ಗೆ 117.31 ಡಾಲರ್ ಆಗಿದೆ.

ಇನ್ನು ಇದೇ ಸಂದರ್ಭದಲ್ಲಿ ಕಚ್ಚಾ ತೈಲ ದರವು 118.17 ಡಾಲರ್‌ಗೆ ಕೂಡಾ ಏರಿದೆ. ಈ ನಿಟ್ಟಿನಲ್ಲಿ ಈ ವಾರದಲ್ಲೇ ಇಂಧನ ಬೆಲೆಗಳು ಮತ್ತೆ ಏರಿಕೆ ಆಗುವ ಸಾಧ್ಯತೆ ಇದೆ. ಲಭ್ಯ ಮಾಹಿತಿ ಪ್ರಕಾರ ಈ ವಾರದಲ್ಲಿಯೇ ತೈಲ ಬೆಲೆಗಳು ಶೇಕಡಾ 4 ರಷ್ಟು ಏರಿಕೆಯಾಗಲಿವೆ.

Petrol And Diesel Price Today: ಮೇ.27: ಕಚ್ಚಾತೈಲ ಏರಿಕೆ: ನಿಮ್ಮ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ದರ ತಿಳಿಯಿರಿPetrol And Diesel Price Today: ಮೇ.27: ಕಚ್ಚಾತೈಲ ಏರಿಕೆ: ನಿಮ್ಮ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ದರ ತಿಳಿಯಿರಿ

ಸದ್ಯ ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ. ಈ ಯುದ್ಧ ಆರಂಭವಾದ ಬಳಿಕ ರಫ್ತು, ಆಮದು ಬಿಕ್ಕಟ್ಟಿನಿಂದಾಗಿ ಹಲವಾರು ವಸ್ತುಗಳ ಬೆಲೆಯು ಗಗನಕ್ಕೆ ಏರಿದೆ. ರಷ್ಯಾ ಉಕ್ರೇನ್ ಯುದ್ಧದಿಂದಾಗಿ ಜಾಗತಿಕ ತೈಲ ಬೆಲೆಗಳು ಹೆಚ್ಚಿನ ಒತ್ತಡದಲ್ಲಿವೆ. ಹಾಗಾದರೆ ಜಾಗತಿಕ ತೈಲ ದರ ಏರಿಕೆ ಏಕಾಗಿದೆ, ಇದಕ್ಕೆ ಮುಖ್ಯ ಕಾರಣವೇನು ಎಂದು ತಿಳಿಯಲು ಮುಂದೆ ಓದಿ...

 ಅತೀ ಹೆಚ್ಚು ತೈಲ ಪೂರೈಕೆದಾರ ರಾಷ್ಟ್ರ ರಷ್ಯಾ

ಅತೀ ಹೆಚ್ಚು ತೈಲ ಪೂರೈಕೆದಾರ ರಾಷ್ಟ್ರ ರಷ್ಯಾ

ರಷ್ಯಾವು ಜಗತ್ತಿಗೆ ತೈಲದ ಅತಿದೊಡ್ಡ ಪೂರೈಕೆದಾರ ರಾಷ್ಟ್ರಗಳಲ್ಲಿ ಒಂದಾಗಿದೆ. ಸರಕುಗಳ ಪೂರೈಕೆಯಲ್ಲಿ ಕಪ್ಪು ಸಮುದ್ರವು ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದರೆ ಪ್ರಸ್ತುತ ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ. ಫೆಬ್ರವರಿಯಲ್ಲಿ ಆರಂಭವಾದ ಯುದ್ಧವು ಇನ್ನೂ ಕೂಡಾ ನಿಂತಿಲ್ಲ. ಯುದ್ಧ ಆರಂಭವಾದ ಬಳಿಕ ಈ ಪ್ರದೇಶದಲ್ಲಿ ವ್ಯಾಪಾರ ಮಾರ್ಗಗಳನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ತೈಲ ಬೆಲೆಯು ಅಭೂತಪೂರ್ವ ಏರಿಕೆಗೆ ಕಾರಣವಾಗಿದೆ. 2022ರಲ್ಲೇ ತೈಲ ಬೆಲೆ ಶೇ.50ರಷ್ಟು ಏರಿಕೆಯಾಗಿದೆ.

 ರಷ್ಯಾದ ತೈಲದ ಮೇಲೆ ಇಯು ನಿಷೇಧ

ರಷ್ಯಾದ ತೈಲದ ಮೇಲೆ ಇಯು ನಿಷೇಧ

ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಹಲವಾರು ರಾಷ್ಟ್ರಗಳು ರಷ್ಯಾದ ಮೇಲೆ ನಿರ್ಬಧವನ್ನು ಹೇರಿದೆ. ರಷ್ಯಾದ ತೈಲವನ್ನು ನಿಷೇಧಿಸಲು ಯುರೋಪಿಯನ್ ಒಕ್ಕೂಟವು ಎಲ್ಲಾ 27 ಸದಸ್ಯರಿಂದ ಸರ್ವಾನುಮತದ ಬೆಂಬಲವನ್ನು ಕೋರಿದೆ. ಇದರಿಂದಾಗಿ ಬಹಳಷ್ಟಯ ದೇಶಗಳಲ್ಲಿ ಪೂರೈಕೆ ಆಯ್ಕೆಗಳನ್ನು ಸೀಮಿತಗೊಳಿಸಿದೆ. ಬೆಲೆಗಳನ್ನು ಹೆಚ್ಚಿಸಿದೆ.

 ಬೇಡಿಕೆಯಲ್ಲಿ ಹೆಚ್ಚಳ

ಬೇಡಿಕೆಯಲ್ಲಿ ಹೆಚ್ಚಳ

ಯುಎಸ್‌ಎ ಸೇರಿದಂತೆ ಹೆಚ್ಚಿನ ಪಾಶ್ಚಿಮಾತ್ಯ ದೇಶಗಳಲ್ಲಿ ಬೇಸಿಗೆ ಸಂದರ್ಭದಲ್ಲಿ ಕಚ್ಚಾ ತೈಲದ ಬೇಡಿಕೆಯು ತೀವ್ರಮಟ್ಟಕ್ಕೆ ಏರುತ್ತದೆ. ಈ ಅವಧಿಯನ್ನು ಪೀಕ್ ಡ್ರೈವಿಂಗ್ ಸೀಸನ್ ಎಂದು ಕರೆಯಲಾಗುತ್ತದೆ. ಹೆಚ್ಚುತ್ತಿರುವ ಬೇಡಿಕೆ ನಡುವೆ ಪೂರೈಕೆ ಆಯ್ಕೆಗಳು ಸೀಮಿತವಾಗಿದೆ. ಈ ಹಿನ್ನೆಲೆಯಿಂದಾಗಿ ಮುಂಬರುವ ದಿನಗಳಲ್ಲಿ ತೈಲ ಬೆಲೆಯಲ್ಲಿ ಇನ್ನಷ್ಟು ಒತ್ತಡ ಸೃಷ್ಟಿ ಆಗುವ ನಿರೀಕ್ಷೆ ಇದೆ.

 ಬಿಗಿಯಾದ ನೀತಿ

ಬಿಗಿಯಾದ ನೀತಿ

ಜಗತ್ತಿನಾದ್ಯಂತ ಹಣದುಬ್ಬರ ತೀವ್ರ ಅಧಿಕವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರೀಯ ಬ್ಯಾಂಕ್‌ಗಳು ಹಣದುಬ್ಬರದ ನಿಯಂತ್ರಣಕ್ಕೆ ಮುಂದಾಗಿದೆ. ಕೇಂದ್ರ ಬ್ಯಾಂಕುಗಳು ಹಣದುಬ್ಬರ ನಿಯಂತ್ರಣ ಮಾಡುವ ಕ್ರಮದ ಭಾಗವಾಗಿ ಆರ್ಥಿಕ ನೀತಿಯನ್ನು ಬಿಗಿ ಮಾಡುತ್ತಿದೆ. ಇನ್ನು ಜಾಗತಿಕ ಬ್ಯಾಂಕುಗಳು ಇನ್ನೂ ಕೂಡಾ ಕಠಿಣ ನಿಲುವು ತಾಳುವ ನಿರೀಕ್ಷೆ ಇದೆ. ಆರ್‌ಬಿಐ ಮತ್ತು ಫೆಡ್ ಈಗಾಗಲೇ ದರ ಏರಿಕೆಯನ್ನು ಘೋಷಿಸಿದೆ. ಮತ್ತೆ ದರ ಏರಿಕೆಯ ಸುಳಿವನ್ನು ಗವರ್ನರ್ ಶಕ್ತಿಕಾಂತ್ ದಾಸ್ ನೀಡಿದ್ದಾರೆ. ಇದರಿಂದಾಗಿ ತೈಲ ಬೆಲೆಯೂ ಏರಿಕೆಯಾಗುತ್ತಿದೆ.

English summary

Oil Prices Climb on Two Month High Due to Tighter Supply as Demand Rises

Oil Price Today: The oil prices reduced marginally after reaching an all-time high in February and March. However, they have started to rise again. It can be attributed to various reasons. Some of them are listed here
Story first published: Friday, May 27, 2022, 12:24 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X