For Quick Alerts
ALLOW NOTIFICATIONS  
For Daily Alerts

ಪ್ರೈಸ್ ವಾರ್ ಗೆ ಮುನ್ನುಡಿ ಬರೆಯುತ್ತಿದೆ ಓಲಾ ಎಲೆಕ್ಟ್ರಿಕ್ ವೆಹಿಕಲ್ !

By ರಂಗಸ್ವಾಮಿ ಮೂಕನಹಳ್ಳಿ
|

ಓಲಾ ಎಲೆಕ್ಟ್ರಿಕ್ ವೆಹಿಕಲ್ ಸಿಗ್ಮೆಂಟಿಗೆ ಕಾಲಿಟ್ಟ ದಿನದಿಂದ ಒಂದಲ್ಲ ಒಂದು ಹೊಸ ವಿಷಯಕ್ಕೆ ಎಲೆಕ್ಟ್ರಿಕ್ ವೆಹಿಕಲ್ ಜಗತ್ತಿನಲ್ಲಿ ಸದ್ದು ಮಾಡುತ್ತಲೆ ಇದೆ. ಅದ್ಬುತ ಬುಕಿಂಗ್ ಪಡೆದುಕೊಂಡು ಜೋಶ್ ದಾಖಲೆಯನ್ನ ಸೃಷ್ಟಿ ಮಾಡಿದ್ದು ಇಂದಿಗೆ ಹಳೆಯ ವಿಷಯ. ಮುಂದಿನ ತಿಂಗಳು ಅಂದರೆ ಅಕ್ಟೋಬರ್ ತಿಂಗಳಿನಿಂದ ವಾಹನವನ್ನ ಗ್ರಾಹಕರಿಗೆ ತಲುಪಿಸಲು ಸಿದ್ದ ಎನ್ನುವ ವಿಷಯ ಕೂಡ ಅಚ್ಚರಿ ಹುಟ್ಟಿಸಿದೆ.

 

ಇದರ ಜೊತೆಗೆ ಓಲಾದ ಬೇಸಿಕ್ ಮಾಡೆಲ್ ಲಕ್ಷ ರುಪಾಯಿಗೆ ಕೇವಲ ಒಂದು ರೂಪಾಯಿ ಕಡಿಮೆಯಿದೆ. ಇದರ ಬೆಲೆ ಒಂದು ಲಕ್ಷ ಮೂವತ್ತು ಸಾವಿರ ರೂಪಾಯಿಯಷ್ಟಿದೆ . ಈ ಬೆಲೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ನೀಡುವ ಸಬ್ಸಿಡಿಯನ್ನ ತೆಗೆದ ನಂತರದ್ದು ! ಮಹಾರಾಷ್ಟ್ರ ಮತ್ತು ಗುಜರಾತ್ ಗಳಲ್ಲಿ ಈ ಬೆಲೆಗೆ ಸಿಗುತ್ತದೆ, ಏಕೆಂದರೆ ಈ ರಾಜ್ಯಗಳಲ್ಲಿ ಹೆಚ್ಚು ಸಬ್ಸಿಡಿಯನ್ನ ನೀಡುತ್ತಿದ್ದಾರೆ. ಬೆಂಗಳೂರು , ಕರ್ನಾಟಕದಲ್ಲಿ ಇದರ ಬೆಲೆ ಇನ್ನಷ್ಟು ಹೆಚ್ಚಾಗಿರುತ್ತದೆ. ಕರ್ನಾಟಕದಲ್ಲಿ ಗ್ರಾಹಕರಿಗೆ ವಿದ್ಯುತ್ ವೆಹಿಕಲ್ ಮೇಲೆ ಯಾವುದೇ ರೀತಿಯ ಸಬ್ಸಿಡಿ ನೀಡಿಲ್ಲ. ಹೂಡಿಕೆ ಮಾಡುವವರಿಗೆ ಹೆಚ್ಚಿನ ಸವಲತ್ತು ನೀಡಿರುವ ಕಾರಣ ,ಗ್ರಾಹಕರಿಗೆ ವಿದ್ಯುತ್ ಸ್ಕೂಟರ್ ಮೇಲೆ ಯಾವುದೇ ರಿಯಾಯತಿ ಇಲ್ಲ. ಕೇಂದ್ರ ಸರಕಾರ ನೀಡುವ ಹತ್ತು ಸಾವಿರ ರಿಯಾಯತಿ ಮಾತ್ರ ಇಲ್ಲೂ ಸಿಗಲಿದೆ.

 
ಪ್ರೈಸ್ ವಾರ್ ಗೆ ಮುನ್ನುಡಿ ಬರೆಯುತ್ತಿದೆ ಓಲಾ ಎಲೆಕ್ಟ್ರಿಕ್ ವೆಹಿಕಲ್

ಉಳಿದಂತೆ ಹೀರೋ ಎಲೆಕ್ಟ್ರಿಕಲ್ , ಬಜಾಜ್ , ಅಥೇರ್ , ಓಕಿನಾವಾ , ಪ್ಯೂರ್ ಇವಿ , ಟಿವಿಎಸ್ ಮೋಟಾರ್ಸ್ ಎಲ್ಲರೂ ಎಲೆಕ್ಟ್ರಿಕ್ ವೆಹಿಕಲ್ ನಲ್ಲಿ ಆಗಲೇ ಪ್ರವೇಶವನ್ನ ಪಡೆದುಕೊಂಡಿದ್ದಾರೆ. ಇವೆರೆಲ್ಲರ ವೆಹಿಕಲ್ ಗಳ ಬೆಲೆ 70 ಸಾವಿರದಿಂದ ಒಂದು ಲಕ್ಷ ಹದಿನೈದು ಸಾವಿರದ ಆಸುಪಾಸಿನಲ್ಲಿದೆ. ಓಲಾ ಇವೆತ್ತಿನ ಟೆಕ್ನಾಲಜಿಯನ್ನ ಹೆಚ್ಚು ಬಳಕೆ ಮಾಡಿಕೊಂಡು ಇಂದಿನ ಯುವ ಗ್ರಾಹಕರಿಗೆ ಬೇಕಾದ ವಿನ್ಯಾಸವನ್ನ ಸಿದ್ಧಪಡಿಸಿದೆ. ಇದರ ಜೊತೆಗೆ ತನ್ನ ವೆಹಿಕಲ್ ಗಳ ಬೆಲೆಯನ್ನ ತನ್ನ ಇತರ ಪೈಪೋಟಿ ನೀಡುವ ಸಂಸ್ಥೆಗಳಿಗಿಂತ ಬಹಳ ಹೆಚ್ಚು ಮಾಡಿದೆ . ವಸ್ತುಸ್ಥಿತಿ ಹೀಗಿದ್ದೂ ಗ್ರಾಹಕ ಓಲಾ ಎಲೆಕ್ಟ್ರಿಕ್ ವೆಹಿಕಲ್ ಗೆ ಮುಗಿ ಬಿದ್ದಿದ್ದಾನೆ.

2025 ರಿಂದ 2030 ರ ವೇಳೆಗೆ ದ್ವಿಚಕ್ರ ವಾಹನ ಮಾರುಕಟ್ಟೆ ಚಿತ್ರಣ ಪೂರ್ಣ ಬದಲಾಗಿ ಹೋಗುತ್ತದೆ. ಈ ಸನ್ನಿವೇಶ ಇತರ ಎಲೆಕ್ಟ್ರಿಕ್ ವೆಹಿಕಲ್ ಉತ್ಪಾದಕರು ಕೂಡ ಹೊಸ ವಿನ್ಯಾಸ ಬಳಸಿ ಬೆಲೆ ಹೆಚ್ಚಿಸುವ ದಾರಿ ಹಿಡಿಯಲು ಪ್ರೇರೆಣೆ ನೀಡಿದೆ. ಹೊಸ ಪ್ರೈಸ್ ವಾರ್ ಗೆ ಸಿದ್ಧತೆಯಾಗುತ್ತಿದೆ.

ಭಾರತ ಜಗತ್ತಿನ ಎಲೆಕ್ಟ್ರಿಕ್ ವೆಹಿಕಲ್ ತಯಾರಿಕಾ ಘಟಕವಾಗಿ ಹೊರಹೊಮ್ಮುವ ಸಾಧ್ಯತೆಗಳು ನಿಚ್ಚಳವಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಇನ್ನಷ್ಟು ಸಬ್ಸಿಡಿಯನ್ನ ನೀಡುವುದು ಮತ್ತು ಜನ ಹೆಚ್ಚು ಎಲೆಕ್ಟ್ರಿಕ್ ವೆಹಿಕಲ್ ಕೊಳ್ಳುವುದು ಮಾಡಿದರೆ , ಇಂದಿನ ಬೆಲೆಗಳು ಕೂಡ ಕಡಿಮೆಯಾಗುವ ಸಾಧ್ಯತೆಗಳು ಕೂಡ ಇದೆ.

English summary

Ola's entry triggers price war in electric two-wheeler segment

Ola’s entry into the electric two-wheeler space has triggered a price war in the segment. Know more.
Story first published: Wednesday, September 22, 2021, 10:39 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X