For Quick Alerts
ALLOW NOTIFICATIONS  
For Daily Alerts

ಲಂಡನ್‌ನಲ್ಲಿ ಶುರುವಾಗಲಿದೆ ಓಲಾ ಓಟ : ಉಬರ್ ಲೈಸೆನ್ಸ್ ಕಟ್

|

ವಿಶ್ವದ ಬಹುದೊಡ್ಡ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವಾ ಸಂಸ್ಥೆ ಉಬರ್ ಪರವಾನಗಿ ರದ್ದಾದ ಬಳಿಕ ಲಂಡನ್‌ನಲ್ಲಿ ಭಾರತದ ಓಲಾ ಕಂಪನಿ ತನ್ನ ಕಾರ್ಯಾಚರಣೆ ಆರಂಭಿಸಿದೆ. ಬೆಂಗಳೂರು ಮೂಲದ ಕಂಪನಿಯಾದ ಓಲಾ 10 ಸಾವಿರಕ್ಕೂ ಅಧಿಕ ಖಾಸಗಿ ಬಾಡಿಗೆ ವಾಹನ ಚಾಲಕರನ್ನು ಮಂಗಳವಾರ ಕೆಲಸಕ್ಕೆ ಆಹ್ವಾನಿಸಿದೆ.

ಆ್ಯಪ್ ಮೂಲಕ ಟ್ಯಾಕ್ಸಿ ಸೇವೆ ನೀಡುತ್ತಿರುವ ಉಬರ್ ಸಂಸ್ಥೆಗೆ ಲಂಡನ್‌ನಲ್ಲಿ ಕಾರ್ಯಾಚರಿಸಲು ನೀಡಿದ್ದ ಪರವಾನಗಿ ನವೀಕರಿಸಲು ಅಲ್ಲಿನ ಸಾರಿಗೆ ಸಂಸ್ಥೆ ನಿರಾಕರಿಸಿತ್ತು. ನಕಲಿ ಗುರುತುಗಳನ್ನು ಹೊಂದಿರುವ ಚಾಲಕರು ಉಬರ್ ಸಂಸ್ಥೆಯ ಅಡಿಯಲ್ಲಿ ಸುಮಾರು 14,000 ಟ್ರಿಪ್‌ಗಳನ್ನು ಮಾಡಿದ್ದರಿಂದ ಪರವಾನಗಿಯನ್ನು ರದ್ದುಪಡಿಸಲಾಗಿತ್ತು. ಸುರಕ್ಷತೆ ಹಾಗೂ ಭದ್ರತೆಯ ಕಾರಣಗಳಿಂದಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಲಂಡನ್‌ನಲ್ಲಿ ಶುರುವಾಗಲಿದೆ ಓಲಾ ಓಟ : ಉಬರ್ ಲೈಸೆನ್ಸ್ ಕಟ್

ಉಬರ್ ಪರವಾನಗಿ ರದ್ದಾಗಿದ್ದೇ ತಡ ಓಲಾ ಸಂಸ್ಥೆಯು ಲಂಡನ್‌ನಾದ್ಯಂತ ಟ್ಯಾಕ್ಸಿ ಸೇವೆಯನ್ನು ಒದಗಿಸಲು ಸಿದ್ಧತೆ ನಡೆಸಿದೆ. ಇದಕ್ಕಾಗಿ ಹತ್ತಾರು ಸಾವಿರ ಖಾಸಗಿ ಬಾಡಿಗೆ ವಾಹನ ಚಾಲಕರಿಗೆ ಆಹ್ವಾನಿಸಿದ್ದು, ಟ್ಯಾಕ್ಸಿ ಸೇವೆ ನೀಡಲು ಮುಂದಾಗಿದೆ. ಈಗಾಗಲೇ ಇಂಗ್ಲೆಂಡ್‌ನ ಬರ್ಮಿಂಗ್‍ಹ್ಯಾಮ್, ಬ್ರಿಸ್ಟಲ್ ಮತ್ತು ಲಿವರ್‌ಪೂಲ್ ನಗರಗಳಲ್ಲಿ ಓಲಾ ಕಾರ್ಯನಿರ್ವಹಿಸುತ್ತಿದೆ.

ಭಾರತದಲ್ಲಿ ಉಬರ್‌ಗೆ ಸಮಾನ ಸ್ಫರ್ಧೆಯನ್ನು ನೀಡಿದ್ದ ಭವಿಶ್ ಅಗರ್ವಾಲ್ ನೇತೃತ್ವದ ಓಲಾ ಸಂಸ್ಥೆಯು ಇಂಗ್ಲೆಂಡ್ ಹೊರತುಪಡಿಸಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗೂ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಿದೆ.

English summary

Ola Starts Hiring Drive For London Launch After Uber's Licence Lost

After Uber lost its commercial licence in londan, its indian rival ola cabs began registering drivers on tuesday
Story first published: Wednesday, November 27, 2019, 16:22 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X