For Quick Alerts
ALLOW NOTIFICATIONS  
For Daily Alerts

ಒಂದು ಕಾಲದ ಶತಕೋಟ್ಯಧಿಪತಿ ಅನಿಲ್ ಅಂಬಾನಿ ಬಳಿ ಈಗ ಏನೂ ಉಳಿದಿಲ್ಲ!

|

ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಸಹೋದರ, ಅನಿಲ್ ಅಂಬಾನಿ ಪರ ವಕೀಲರು ಅನಿಲ್ ಅಂಬಾನಿ ಮೌಲ್ಯ ಕುಸಿದಿದೆ, ಅವರ ಬಳಿ ಹಣವಿಲ್ಲ ಎಂದು ಹೇಳಿದರೂ, ಚೀನಾ ಮೂಲದ ಬ್ಯಾಂಕುಗಳಿಗೆ ಪಡೆದ ಸಾಲಕ್ಕೆ ಆರು ವಾರದೊಳಗೆ 100 ಮಿಲಿಯನ್ ಡಾಲರ್‌ಗಳನ್ನು ನೀಡಬೇಕೆಂದು ಇಂಗ್ಲೆಂಡ್ ಕೋರ್ಟ್ ಆದೇಶಿಸಿದೆ.

 

ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಒಂದು ಕಾಲದಲ್ಲಿ ಶ್ರೀಮಂತ ಉದ್ಯಮಿಯಾಗಿದ್ದರು. ಆದರೆ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಆದ ಹಲವು ವಿನಾಶಕಾರಿ ತಿರುವುಗಳಿಂದ ಅವರು ಇಂದು ಶ್ರೀಮಂತ ಉದ್ಯಮಿಯಾಗಿ ಉಳಿದಿಲ್ಲ ಎಂದು ಲಂಡನ್ ನ ಕೋರ್ಟ್ ನಲ್ಲಿ ಅವರ ವಕೀಲರು ಹೇಳಿಕೆ ನೀಡಿದ್ದಾರೆ.

ಅನಿಲ್ ಅಂಬಾನಿ ಎಲ್ಲವನ್ನೂ ಕಳೆದುಕೊಂಡಿದ್ದಾರೆ!

ಅನಿಲ್ ಅಂಬಾನಿ ಎಲ್ಲವನ್ನೂ ಕಳೆದುಕೊಂಡಿದ್ದಾರೆ!

'2012ರ ನಂತರ ಅನಿಲ್ ಅಂಬಾನಿಯವರ ಹೂಡಿಕೆಗಳು ಮಾರುಕಟ್ಟೆಯಲ್ಲಿ ಕುಸಿಯಲಾರಂಭಿಸಿತು. ಸ್ಪೆಕ್ಟ್ರಮ್ ಹಂಚಿಕೆಯಲ್ಲಿ ಭಾರತ ಸರ್ಕಾರ ಮಾಡಿಕೊಂಡ ನೀತಿಗಳ ಬದಲಾವಣೆಯಿಂದ ದೇಶದ ಟೆಲಿಕಾಂ ವಲಯಕ್ಕೆ ಇನ್ನಿಲ್ಲದ ಹೊಡೆತ ಬಿದ್ದಿದೆ. 2012ರಲ್ಲಿ 7 ಶತಕೋಟಿ ಡಾಲರ್ ಗೂ ಅಧಿಕ ಇದ್ದ ಅನಿಲ್ ಅಂಬಾನಿ ಹೂಡಿಕೆ ಮೌಲ್ಯ ಇಂದು 89 ದಶಲಕ್ಷ ಡಾಲರ್ ಗೆ ಇಳಿದಿದೆ. ಅವರ ಬಾಧ್ಯತೆಗಳ ಲೆಕ್ಕ ತೆಗೆದುಕೊಂಡರೆ ಅವರ ವ್ಯವಹಾರ ಜಾಲ ಮೌಲ್ಯ ಶೂನ್ಯವಾಗಿರುತ್ತದೆ, ಒಂದು ಕಾಲದಲ್ಲಿ ಆಗರ್ಭ ಶ್ರೀಮಂತರಾಗಿದ್ದವರು ಇಂದು ಎಲ್ಲವನ್ನೂ ಕಳೆದುಕೊಂಡಿದ್ದಾರೆ, ಹೀಗಾಗಿ 700 ದಶಲಕ್ಷ ಡಾಲರ್ ನಷ್ಟು ಮೊತ್ತ ಅವರು ನ್ಯಾಯಾಲಯಕ್ಕೆ ಕಟ್ಟಲು ಸಾಧ್ಯವಿಲ್ಲ'' ಎಂದು ಯುಕೆ ಕೋರ್ಟ್ ನಲ್ಲಿ ಅಂಬಾನಿ ಬ್ಯಾರಿಸ್ಟರ್ ರಾಬರ್ಟ್ ಹೊವೆ ಹೇಳಿದ್ದಾರೆ.

ಅನಿಲ್ ಅಂಬಾನಿ ಮೇಲೆ ಕೋರ್ಟ್ ಕ್ರಮ ಏಕೆ?

ಅನಿಲ್ ಅಂಬಾನಿ ಮೇಲೆ ಕೋರ್ಟ್ ಕ್ರಮ ಏಕೆ?

ಬ್ಯಾಂಕುಗಳಿಂದ ತೆಗೆದುಕೊಂಡ ಸಾಲಗಳಿಗೆ ವೈಯಕ್ತಿಕ ಖಾತ್ರಿ ನೀಡಲು ಅನಿಲ್ ಅಂಬಾನಿ ಹಿಂದೇಟು ಹಾಕಿದಾಗ ಸಾಲದ ಒಪ್ಪಂದ ಮುರಿದ ಹಿನ್ನಲೆಯಲ್ಲಿ ಲಂಡನ್ ನ ಹೈಕೋರ್ಟ್ ತನ್ನ ಕಾನೂನು ವ್ಯಾಪ್ತಿಯಲ್ಲಿ ಅಂಬಾನಿ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ. ಆರು ವಾರದೊಳಗೆ 100 ಮಿಲಿಯನ್ ಡಾಲರ್‌ಗಳನ್ನು ನೀಡಬೇಕೆಂದು ಇಂಗ್ಲೆಂಡ್ ಕೋರ್ಟ್ ನಿರ್ದೇಶಿಸಿದೆ.

 

ಮುಕೇಶ್ ಅಂಬಾನಿ ಈಗ ವಿಶ್ವದ ಒಂಬತ್ತನೇ ಶ್ರೀಮಂತ ವ್ಯಕ್ತಿಮುಕೇಶ್ ಅಂಬಾನಿ ಈಗ ವಿಶ್ವದ ಒಂಬತ್ತನೇ ಶ್ರೀಮಂತ ವ್ಯಕ್ತಿ

ಅನಿಲ್ ಅಂಬಾನಿ ಯಾವ ಬ್ಯಾಂಕಿನಿಂದ, ಎಷ್ಟು ಸಾಲ ಪಡೆದಿದ್ದರು?
 

ಅನಿಲ್ ಅಂಬಾನಿ ಯಾವ ಬ್ಯಾಂಕಿನಿಂದ, ಎಷ್ಟು ಸಾಲ ಪಡೆದಿದ್ದರು?

ಮೂರು ರಾಜ್ಯ-ನಿಯಂತ್ರಿತ ಚೀನೀ ಬ್ಯಾಂಕುಗಳು ಈ ಹಿಂದೆ ಮೊಕದ್ದಮೆಯನ್ನು ಸಲ್ಲಿಸಿದವು. ಚೀನಾದ ಕೈಗಾರಿಕಾ ಮತ್ತು ವಾಣಿಜ್ಯ ಬ್ಯಾಂಕ್ ಲಿಮಿಟೆಡ್‌, ಚೀನಾ ಅಭಿವೃದ್ಧಿ ಬ್ಯಾಂಕ್, ಚೀನಾ ರಫ್ತು-ಆಮದು ಬ್ಯಾಂಕ್ 2012ರಲ್ಲಿ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯುನಿಕೇಶನ್ ಲಿಮಿಟೆಡ್‌ಗೆ 925.2 ಮಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ 6,603 ಕೋಟಿ 80 ಲಕ್ಷದ 400) ಸಾಲವನ್ನು ನೀಡಿದ್ದವು.

English summary

One Time Billionaire Says He's Nothing Now

The brother of Asia’s richest man was ordered to set aside $100 million in his dispute with three Chinese banks, even as he pleaded poverty.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X