For Quick Alerts
ALLOW NOTIFICATIONS  
For Daily Alerts

ಒಎನ್ ಜಿಸಿ ಷೇರುಗಳು 15 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿತ

|

ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ (ಒಎನ್ ಜಿಸಿ) 15 ವರ್ಷಗಳ ಕನಿಷ್ಠ ಮಟ್ಟವಾದ 78.05 ರುಪಾಯಿಗೆ ತಲುಪುವ ಮೂಲಕ ಸೋಮವಾರದಂದು 12 ಪರ್ಸೆಂಟ್ ಗಳ ಇಳಿಕೆ ಕಂಡಿದೆ. ಸೌದಿ ಅರೇಬಿಯಾವು ತೈಲ ದರ ಸಮರವನ್ನು ಘೋಷಣೆ ಮಾಡಿದ್ದು, ಕಚ್ಚಾ ತೈಲ ದರ 20 ಪರ್ಸೆಂಟ್ ಗೂ ಹೆಚ್ಚು ಇಳಿಕೆ ಕಂಡಿದೆ.

ಒಎನ್ ಜಿಸಿ ಷೇರು ಬೆಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ 37 ಪರ್ಸೆಂಟ್ ಇಳಿಕೆ ಕಂಡಿದ್ದು, ಬಿಎಸ್ ಇ ಸೆನ್ಸೆಕ್ಸ್ ಸೂಚ್ಯಂಕದಲ್ಲಿ 13 ಪರ್ಸೆಂಟ್ ಕುಸಿದಿದೆ. ಅನಿಲ ಬೆಲೆಯಲ್ಲಿ ಇಳಿಕೆ, ಬ್ರೆಂಟ್ ದರದಲ್ಲಿ ಕುಸಿತ ಸೇರಿಕೊಂಡು, ಒಎನ್ ಜಿಸಿ ಷೇರಿನ ಬೆಲೆ ಇಳಿಯುವುದಕ್ಕೆ ಕಾರಣವಾಗಿವೆ. 2004ರ ಆಗಸ್ಟ್ ನಂತರ ಇದೇ ಮೊದಲ ಬಾರಿಗೆ ಒಎನ್ ಜಿಸಿ ಬಂಡವಾಳ ಮೌಲ್ಯ 1 ಲಕ್ಷ ಕೋಟಿ ರುಪಾಯಿ ಒಳಗೆ ಇಳಿದಿದ್ದು, ಬಂಡವಾಳ ಮೌಲ್ಯ 98,818 ಕೋಟಿ ಮುಟ್ಟಿದೆ.

ಒಎನ್ ಜಿಸಿ ಷೇರುಗಳು 15 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿತ

ಒಟ್ಟಾರೆ ಬಂಡವಾಳ ಶ್ರೇಯಾಂಕದ ಪಟ್ಟಿಯಲ್ಲಿ ಕೋಲ್ ಇಂಡಿಯಾ, ಎನ್ ಟಿಪಿಸಿ, ಟೈಟಾನ್ ಕಂಪೆನಿ, ಎಚ್ ಡಿಎಫ್ ಸಿ ಲೈಫ್ ಇನ್ಷೂರೆನ್ಸ್ ಕಂಪೆನಿಗಳಿಗಿಂತಲೂ ಒಎನ್ ಜಿಸಿ ಕೆಳಗಿದೆ. ಸೌದಿ ಒಪೆಕ್ ರಾಷ್ಟ್ರಗಳು ರಷ್ಯಾದೊಂದಿಗೆ ನಡೆಸಿದ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾವು ತೈಲ ದರ ಸಮರವನ್ನು ಘೋಷಿಸಿದೆ.

English summary

ONGC Shares Touched 15 Year Low Price

ONGC share touched 15 year low price of 78 rupees on Monday. Here is the complete details.
Story first published: Monday, March 9, 2020, 18:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X