For Quick Alerts
ALLOW NOTIFICATIONS  
For Daily Alerts

ವಿಸ್ತಾರವಾದ ಲ್ಯಾಪ್‌ಟಾಪ್, ಟ್ಯಾಬ್‌ಗಳಿಗೆ ಹೆಚ್ಚಿದ ಬೇಡಿಕೆ

|

ಕೋವಿಡ್-19 ಬಂದ ಮೇಲಂತೂ ಜಗತ್ತಿನ ಅನೇಕ ವ್ಯವಸ್ಥೆಗಳು ತನ್ನ ಸ್ವರೂಪವನ್ನೇ ಬದಲಾಯಿಸಿ ಬಿಟ್ಟಿವೆ, ಇದರಿಂದ ಶಿಕ್ಷಣ ವ್ಯವಸ್ಥೆ ಕೂಡ ಹೊರತಾಗಿಲ್ಲ. ಶಾಲೆಗಳು ಆನ್ ಲೈನ್ ಶಿಕ್ಷಣ ನೀಡುತ್ತಿರುವುದು ಮತ್ತು ಇ-ಲರ್ನಿಂಗ್ ಅವಕಾಶಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಕಲಿಕಾ ಪ್ರಕ್ರಿಯೆ ಕೂಡ ಪರಿಣಾಮಕಾರಿಯಾಗಿ ಬದಲಾಗಿದೆ.

ಆನ್‌ಲೈನ್ ಶಿಕ್ಷಣ ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್ ಸಾಧನಗಳೊಂದಿಗೆ ವಿಸ್ತಾರವಾದ ಸ್ಕ್ರೀನ್ ನ ಲ್ಯಾಪ್ ಟಾಪ್ ಗಳು ಮತ್ತು ಟ್ಯಾಬ್ ಗಳಿಗೆ ಬೇಡಿಕೆ ಹೆಚ್ಚಾಗಲು ಕಾರಣವಾಗಿದೆ. ಭಾರತೀಯ ದೇಶೀಯ ಇ-ಕಾಮರ್ಸ್ ಕಂಪನಿಯಾಗಿರುವ ಫ್ಲಿಪ್ ಕಾರ್ಟ್ ನ ಒಳನೋಟಗಳ ಪ್ರಕಾರ, ಕಳೆದ ಒಂದು ವರ್ಷದಲ್ಲಿ ಲ್ಯಾಪ್ ಟಾಪ್ ಗಳು ಮತ್ತು ಟ್ಯಾಬ್‌ಗಳಿಗೆ ಭಾರೀ ಬೇಡಿಕೆ ಬರುತ್ತಿದೆ.

ಲಾಕ್ ಡೌನ್ ಪೂರ್ವ ಮತ್ತು ನಂತರದ ಅವಧಿಯಲ್ಲಿ ಲ್ಯಾಪ್ ಟಾಪ್ ಗಳಿಗೆ ಶೇ.200 ಮತ್ತು ಟ್ಯಾಬ್ಲೆಟ್ ಗಳಿಗೆ ಶೇ.90 ರಷ್ಟು ಬೇಡಿಕೆ ಹೆಚ್ಚಾಗಿದೆ. ಇದಲ್ಲದೇ, ವಿಸ್ತಾರವಾದ ಸ್ಕ್ರೀನ್ ನ ಟ್ಯಾಬ್ಲೆಟ್ ಗಳಿಗೆ ಡಿಸೆಂಬರ್ 2020 ರೊಂದರಲ್ಲೇ ಬೇಡಿಕೆಯು ಶೇ.2 ರಿಂದ ಶೇ.11 ಕ್ಕೇರಿದೆ. ಇದರಲ್ಲಿ ಪ್ರಮುಖವಾಗಿ 10 ಇಂಚುಗಳ ಟ್ಯಾಬ್ಲೆಟ್ ಗಳಿಗೆ ಬೇಡಿಕೆ ಬಂದಿದೆ.

ವಿಸ್ತಾರವಾದ ಲ್ಯಾಪ್‌ಟಾಪ್, ಟ್ಯಾಬ್‌ಗಳಿಗೆ ಹೆಚ್ಚಿದ ಬೇಡಿಕೆ

ಗ್ರಾಹಕರು ಅದರಲ್ಲೂ ಪ್ರಮುಖವಾಗಿ ವಿದ್ಯಾರ್ಥಿಗಳು ಈ ಹಿಂದೆ 8 ಇಂಚುಗಳ ಟ್ಯಾಬ್ಲೆಟ್ ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆದರೆ, ಈಗ ದೊಡ್ಡ ಸ್ಕ್ರೀನ್ ನ ಟ್ಯಾಬ್ಲೆಟ್ ಗಳನ್ನು ಬಯಸುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಆನ್ ಲೈನ್ ತರಗತಿಯಲ್ಲಿ ಪಾಲ್ಗೊಳ್ಳಲು ಹೆಚ್ಚು ಸಮಯವನ್ನು ವ್ಯಯಿಸುತ್ತಿದ್ದಾರೆ. ಹೀಗಾಗಿ ಉತ್ತಮ ಮತ್ತು ಅನುಕೂಲಕರವಾದ ದೃಶ್ಯಾವಳಿಗಾಗಿ ಈ ದೊಡ್ಡ ಸ್ಕ್ರೀನ್ ನ ಟ್ಯಾಬ್ಲೆಟ್ ಗಳನ್ನು ಬಯಸುತ್ತಿದ್ದಾರೆ.

''ಸ್ವದೇಶಿ ಇ-ಕಾಮರ್ಸ್ ಮಾರುಕಟ್ಟೆಯಾಗಿ ಫ್ಲಿಪ್ ಕಾರ್ಟ್ ಗ್ರಾಹಕರ ಬಗ್ಗೆ ಸೂಕ್ಷ್ಮವಾದ ತಿಳುವಳಿಕೆಯನ್ನು ಹೊಂದಿದೆ ಹಾಗೂ ಅವರ ವಿಕಾಸದ ಅಗತ್ಯತೆಗಳನ್ನು ಪೂರೈಸುವ ಮಾರ್ಗಗಳನ್ನು ಕಂಡುಕೊಳ್ಳುತ್ತಾ ಬರುತ್ತದೆ. ಗ್ರಾಹಕರಿಗೆ ಕೆಲಸ ಮತ್ತು ಕಲಿಕೆಯ ಚಟುವಟಿಕೆಗಳಿಗೆ ಉತ್ತಮವಾದ ಉತ್ಪನ್ನಗಳನ್ನು ತರಲು ನಾವು ನಮ್ಮ ಬ್ರ್ಯಾಂಡ್ ಪಾಲುದಾರರೊಂದಿಗೆ ಕ್ಯುರೇಟೆಡ್ ಆಯ್ಕೆಯನ್ನು ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇವೆ. ಲ್ಯಾಪ್ ಟಾಪ್ ಗಳು, ಟ್ಯಾಬ್ಲೆಟ್ ಗಳು, ರೂಟರ್ ಗಳಂತಹ ಕಲಿಕಾ ಅಗತ್ಯತೆಗಳಿಗೆ ಬೇಡಿಕೆ ಪ್ರಮಾಣವು ಕಳೆದ ಒಂದು ವರ್ಷದಿಂದ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ'' ಎಂದು ಫ್ಲಿಪ್ ಕಾರ್ಟ್ ನ ಎಲೆಕ್ಟ್ರಾನಿಕ್ಸ್ ವಿಭಾಗದ ಹಿರಿಯ ನಿರ್ದೇಶಕ ರಾಕೇಶ್ ಕೃಷ್ಣನ್ ಹೇಳಿದ್ದಾರೆ.

ಗ್ರಾಹಕರ ಅನುಭವವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಫ್ಲಿಪ್ ಕಾರ್ಟ್ ತನ್ನ ಪ್ಲಾಟ್ ಫಾರ್ಮ್ ನಲ್ಲಿ ಜನವರಿ 24 ರಂದು ವಿಶ್ವ ಶಿಕ್ಷಣ ದಿನಾಚರಣೆ ಸಂದರ್ಭದಲ್ಲಿ ಲ್ಯಾಪ್ ಟಾಪ್ ಗಳು, ಟ್ಯಾಬ್ಲೆಟ್ ಗಳು ಮತ್ತು ಐಟಿ ಆಧಾರಿತ ಸಾಧನಗಳಾದ್ಯಂತ ಕ್ಯುರೇಟೆಡ್ ಕೊಡುಗೆಗಳನ್ನು ರಚಿಸಿದೆ ಮತ್ತು ಅದನ್ನು ಸುಲಭಗೊಳಿಸುವ ದಿಸೆಯಲ್ಲಿ ವಿದ್ಯಾರ್ಥಿ ಕ್ಲಬ್ ಕಾರ್ಯಕ್ರಮದಂತಹ ಉಪಕ್ರಮಗಳನ್ನು ಆರಂಭಿಸಿದೆ. ಈ ಮೂಲಕ ವಿದ್ಯಾರ್ಥಿಗಳು ತಮ್ಮ ಕಲಿಕಾ ಸಾಮಗ್ರಿಗಳನ್ನು ಕೈಗೆಟುಕುವ ರೀತಿಯಲ್ಲಿ ಪ್ರವೇಶಿಸಲು ಸಾಧ್ಯವಾಗಲಿದೆ.

Read more about: laptop flipkart
English summary

Online Class: Demand For Wider Screen Laptops And Tablets

Post Covid-19 Lockdown High Demand For Wider Screen Laptops And Tablets Says Flipkart
Story first published: Saturday, January 23, 2021, 14:36 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X