For Quick Alerts
ALLOW NOTIFICATIONS  
For Daily Alerts

ತೈಲ ಬಿಕ್ಕಟ್ಟು ಪರಿಹಾರಕ್ಕಾಗಿ ಸೋಮವಾರ ತುರ್ತು ಸಭೆ ಕರೆದ ಒಪೆಕ್

|

ತೈಲ ಬಿಕ್ಕಟ್ಟು ಪರಿಹಾರಕ್ಕಾಗಿ ಸೌದಿ ಅರೇಬಿಯಾ ನೇತೃತ್ವದಲ್ಲಿನ ಕಚ್ಚಾ ತೈಲ ರಫ್ತು ದೇಶಗಳ ಸಂಘಟನೆ(ಒಪೆಕ್) ಮತ್ತು ಅದರ ಮಿತ್ರ ದೇಶಗಳು ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ತುರ್ತು ಸಭೆ ನಡೆಸಲಿವೆ.

 

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆಯು ನೆಲಕಚ್ಚಿದ್ದು ಎರಡು ಮೂರಂಶದಷ್ಟು ಕುಸಿದಿರುವುದಕ್ಕೆ ಕಡಿವಾಣ ಹಾಕಲು ಈ ತುರ್ತು ಸಭೆ ಕರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ವಿಚಾರ ಖಚಿತವಾಗುತ್ತಿದ್ದಂತೆ ಬ್ರೆಂಟ್ ಕಚ್ಛಾ ತೈಲದ ದರ 10 ಪರ್ಸೆಂಟ್ ಏರಿಕೆ ಕಂಡಿದೆ.

ತೈಲ ಬಿಕ್ಕಟ್ಟು ಪರಿಹಾರಕ್ಕಾಗಿ ತುರ್ತು ಸಭೆ ಕರೆದ ಒಪೆಕ್

ಇತ್ತೀಚೆಗಷ್ಟೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೌದಿ ಅರೇಬಿಯಾ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಜೊತೆ ದೂರವಾಣಿ ಸಂಭಾಷಣೆ ನಡೆಸಿದ ಬಳಿಕ ಈ ಸಭೆ ಕರೆಯಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಆದರೆ ಈ ಸಭೆಯಲ್ಲಿ ಯಾವ ರಾಷ್ಟ್ರಗಳು ಭಾಗವಹಿಸಲಿವೆ ಎಂದು ಖಚಿತವಾಗಿಲ್ಲ.

ಸೋಮವಾರ ನಡೆಯಲಿರುವ ಸಭೆಯಲ್ಲಿ ತೈಲ ಉತ್ಪಾದನೆ ಪ್ರಮಾಣವನ್ನು ಪ್ರತಿ ದಿನಕ್ಕೆ 1 ಕೋಟಿ ಬ್ಯಾರೆಲ್ ತಗ್ಗಿಸುವ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ. ಕೊರೊನಾವೈರಸ್‌ನಿಂದಾಗಿ ವಿಶ್ವದಾದ್ಯಂತ ತೈಲ ಬೇಡಿಕೆ ಕುಸಿದಿದೆ. ಈ ಕಾರಣಕ್ಕೆ ಉತ್ಪಾದನೆ ಹಾಗೂ ಪೂರೈಕೆ ತಗ್ಗಿಸಲು ರಷ್ಯಾ ನಿರಾಕರಿಸಿತ್ತು.

English summary

OPEC Emergency Meeting On Monday

OPEC will meet on Monday with Russia and other oil producers in the hope of agreeing supply cuts and end oil war
Story first published: Saturday, April 4, 2020, 15:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X