For Quick Alerts
ALLOW NOTIFICATIONS  
For Daily Alerts

ಟೆಲಿಕಾಂ ಜಾಲ ಬಳಸುವ ವಾಟ್ಸಾಪ್ ಹಣ ಭರಿಸಬೇಕು: ಸಿಒಎಐ ಒತ್ತಾಯ

|

ನವದೆಹಲಿ, ನ. 23: ಟೆಲಿಕಾಂ ನೆಟ್ವರ್ಕ್ ಬಳಸುವ ವಾಟ್ಸಾಪ್, ಟೆಲಿಗ್ರಾಂ, ಸಿಗ್ನಲ್, ಗೂಗಲ್ ಮೀಟ್ ಇತ್ಯಾದಿ ಒಟಿಟಿ ಕಮ್ಯೂನಿಕೇಶನ್ ಸರ್ವಿಸ್ ಆ್ಯಪ್‌ಗಳು ಟೆಲಿಕಾಂ ಸಂಸ್ಥೆಗಳಿಗೆ ಹಣ ಭರಿಸಬೇಕು. ಈ ನಿಟ್ಟಿನಲ್ಲಿ ಕಾನೂನು ರೂಪಿಸುವಂತೆ ಭಾರತೀಯ ಸೆಲೂಲರ್ ಆಪರೇಟರ್ಸ್ ಸಂಸ್ಥೆ (ಸಿಒಎಐ) ಆಗ್ರಹಿಸಿದೆ. ನಿನ್ನೆ ಮಂಗಳವಾರ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಸಿಒಎಐನ ಮಹಾನಿರ್ದೇಶಕ ಎಸ್ ಪಿ ಕೋಚ್ಚರ್, ಒಟಿಟಿ ಕಮ್ಯೂನಿಕೇಶನ್ ಸರ್ವಿಸ್‌ಗಳಿಗೆ ಪರವಾನಿಗೆ ನೀಡುವುದು ಸೇರಿ ಕಾನೂನು ವ್ಯಾಪ್ತಿಗೆ ಬರುವಂತೆ ಒತ್ತಾಯಿಸಿದ್ದಾರೆ.

ಮುಂಬರುವ ಕೇಂದ್ರ ಬಜೆಟ್ ಹಿನ್ನೆಲೆಯಲ್ಲಿ ಟೆಲಿಕಾಂ ಆಪರೇಟರ್‌ಗಳ ಸಂಘ ಈ ಬೇಡಿಕೆಗಳನ್ನು ಮತ್ತು ಸಲಹೆಗಳನ್ನು ಸರ್ಕಾರದ ಮುಂದಿಡುತ್ತಿದೆ. ಡಾಟಾ ಟ್ರಾಫಿಕ್ ಉಪಯೋಗಿಸುವ ಒಟಿಟಿ ಕಮ್ಯೂನಿಕೇಶನ್ ಸರ್ವಿಸ್ ಕಂಪನಿಗಳು ಟೆಲಿಕಾಂ ಸಂಸ್ಥೆಗಳಿಗೆ ಎಷ್ಟು ಪರಿಹಾರ ಕೊಡಬೇಕು ಎಂಬಿತ್ಯಾದಿ ಅಂಶಗಳಿರುವ ಪ್ರಸ್ತಾವವನ್ನು ಮುಂಬರುವ ದಿನಗಳಲ್ಲಿ ಸರ್ಕಾರದ ಮುಂದಿಡಲಾಗುವುದು ಎಂದು ಹೇಳಿದ್ದಾರೆ.

ನಾರಿ ಸಾಮ್ರಾಜ್ಯ..! ಎನ್‌ಎಸ್‌ಇ ಟಾಪ್ ಕಂಪನಿಗಳ ಆಡಳಿತ ಮಂಡಳಿಯಲ್ಲಿ ಶೇ. 18 ಮಹಿಳೆಯರುನಾರಿ ಸಾಮ್ರಾಜ್ಯ..! ಎನ್‌ಎಸ್‌ಇ ಟಾಪ್ ಕಂಪನಿಗಳ ಆಡಳಿತ ಮಂಡಳಿಯಲ್ಲಿ ಶೇ. 18 ಮಹಿಳೆಯರು

ಮುಂದಿನ ದಿನಗಳಲ್ಲಿ ಬೇರೆ ವಿಭಾಗದ ಒಟಿಟಿಗಳೂ ಕೂಡ ಡಾಟಾ ಬಳಕೆ ಆಧಾರದ ಮೇಲೆ ಟೆಲಿಕಾಂ ಕಂಪನಿಗಳಿಗೆ ಆದಾಯ ಹಂಚಿಕೆ ಮಾಡುವ ಕ್ರಮ ಜಾರಿಗೆ ತರಬೇಕು ಎಂದು ಒತ್ತಾಯಿಸಿದ ಸಿಒಎಐ ಮಹಾನಿರ್ದೇಶಕರು, ಒಟಿಟಿ ಕಮ್ಯೂನಿಕೇಶನ್ ಸೇವೆ ನೀಡುಗರಾಗಲೀ, ಟೆಲಿಕಾಂ ಕಂಪನಿಗಳಾಗಲೀ ಕೆವೈಸಿಯನ್ನು ಹೊಂದುವುದು ಅತ್ಯಗತ್ಯ ಎಂದು ವಾದಿಸಿದ್ದಾರೆ.

ಟೆಲಿಕಾಂ ಜಾಲ ಬಳಸುವ ವಾಟ್ಸಾಪ್ ಹಣ ಭರಿಸಬೇಕು: ಸಿಒಎಐ ಒತ್ತಾಯ

ಕೇಂದ್ರ ಸರ್ಕಾರದ ನೂತನ ಟೆಲಿಕಾಂ ಕರಡು ನಿಯಮ ಮಸೂದೆಯಲ್ಲಿ ಒಟಿಟಿ ಕಮ್ಯೂನಿಕೇಶನ್ ಸರ್ವಿಸ್ ಬಗ್ಗೆ ಪ್ರಸ್ತಾಪ ಇದೆ. ವಾಟ್ಸಾಪ್ ಇತ್ಯಾದಿ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳು ಒಟಿಟಿ ಕಮ್ಯೂನಿಕೇಶನ್ ಪ್ಲಾಟ್‌ಫಾರ್ಮ್‌ಗೆ ಬರುತ್ತವೆ. ಟೆಲಿಕಾಂ ಕಂಪನಿಗಳಂತೆ ಇವುಗಳಿಗೂ ಲೈಸೆನ್ಸ್ ನೀಡುವಿಕೆ ಇತ್ಯಾದಿ ಕಾನೂನು ಪರಿಧಿಗೆ ತರಬೇಕೆನ್ನುವ ಅಭಿಪ್ರಾಯ ಇದೆ.

ಆದರೆ, ಈ ವಿಚಾರದಲ್ಲಿ ಉದ್ಯಮ ವಲಯದಲ್ಲಿ ಭಿನ್ನ ಸ್ವರವೂ ಇದೆ. ಡಿಜಿಟಲ್ ಥಿಂಕ್ ಟ್ಯಾಂಕ್ ಎಂದು ಪರಿಗಣಿಸಲಾಗಿರುವ ಬ್ರಾಡ್‌ಬ್ಯಾಂಡ್ ಇಂಡಿಯಾ ಫೋರಂ (ಬಿಐಎಫ್) ಒಟಿಟಿ ಸೇವೆ ನೀಡುಗರನ್ನು ಕಾನೂನು ವ್ಯಾಪ್ತಿಗೆ ತರುವುದಕ್ಕೆ ವಿರೋಧಿಸಿದೆ. ಒಂದು ವೇಳೆ ಈ ಹೆಜ್ಜೆ ಇಟ್ಟರೆ ಸಾಮಾಜಿಕ ಆರ್ಥಿಕ ವ್ಯವಸ್ಥೆಗೆ ಮತ್ತು ಸೃಜನಶೀಲತೆಗೆ ಧಕ್ಕೆ ಆಗಬಹುದು ಎಂದು ಎಚ್ಚರಿಸಿದೆ.

English summary

OTT Communication Services Must compensate Telecom Operators for Data Traffic: COAI

Telecom operators body COAI on Tuesday made a strong pitch for OTT (over-the-top) communication services to directly compensate telcos for data traffic they are driving onto the networks.
Story first published: Wednesday, November 23, 2022, 7:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X