For Quick Alerts
ALLOW NOTIFICATIONS  
For Daily Alerts

ಫೇಸ್‌ಬುಕ್‌ನ ಮಾಲೀಕ ಸಂಸ್ಥೆ ಮೆಟಾದಿಂದ 11 ಸಾವಿರ ಉದ್ಯೋಗಿಗಳು ವಜಾ

|

ವಿಶ್ವಾದ್ಯಂತ ಟೆಕ್ಕೀ ಸಂಸ್ಥೆಗಳಿಂದ ಉದ್ಯೋಗಿಗಳನ್ನು ವಜಾಗೊಳಿಸುವ ಟ್ರೆಂಡ್ ಹೆಚ್ಚಾಗುತ್ತಿದೆ. ಫೇಸ್‌ಬುಕ್‌ನ ಮಾಲೀಕ ಸಂಸ್ಥೆ ಮೆಟಾ ಪ್ಲಾಟ್‌ಫಾರ್ಮ್ಸ್ ಬರೋಬ್ಬರಿ 11 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕಿರುವ ಸುದ್ದಿ ರಾಚಿದೆ. ಅಲ್ಲದೇ ಹೊಸ ನೇಮಕಾತಿ ಪ್ರಕ್ರಿಯೆಯನ್ನು ಅನಿರ್ದಿಷ್ಟಾವಧಿಯವರೆಗೂ ಸ್ಥಗಿತಗೊಳಿಸಿದೆ.

 

ಕೆಲಸ ಕಳೆದುಕೊಂಡ 11 ಸಾವಿರ ಉದ್ಯೋಗಿಗಳು ಮೆಟಾದ ಒಟ್ಟು ಸಿಬ್ಬಂದಿಯ ಶೇ. 13ರಷ್ಟಿದ್ದರು. 2004ರಿಂದ ಮೆಟಾ ಪ್ಲಾಟ್‌ಫಾರ್ಮ್ಸ್‌ನ ಇತಿಹಾಸದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಸಿಬ್ಬಂದಿ ಕಡಿತ ಮಾಡಲಾಗಿರಲಿಲ್ಲ.

 

ರಾತ್ರೋರಾತ್ರಿ ಶೇ. 94ರಷ್ಟು ಆಸ್ತಿ ಕಳೆದುಕೊಂಡ 30 ವರ್ಷದ ಬಿಲಿಯನೇರ್ರಾತ್ರೋರಾತ್ರಿ ಶೇ. 94ರಷ್ಟು ಆಸ್ತಿ ಕಳೆದುಕೊಂಡ 30 ವರ್ಷದ ಬಿಲಿಯನೇರ್

"ಇದು ಪ್ರತಿಯೊಬ್ಬರಿಗೂ ಕಠಿಣವೆನಿಸುವ ನಿರ್ಧಾರ. ಇದರಿಂದ ಬಾಧಿತರಾದವರ ಬಗ್ಗೆ ನನಗೆ ಬಹಳ ವಿಷಾದ ಇದೆ" ಎಂದು ಮೆಟಾ ಪ್ಲಾಟ್‌ಫಾರ್ಮ್ಸ್‌ನ ಸಿಇಒ ಮಾರ್ಕ್ ಜುಕರ್‌ಬರ್ಗ್ ಹೇಳಿದ್ದಾರೆ.

ಜಾಗತಿಕ ಆರ್ಥಿಕ ಮುಗ್ಗಟ್ಟು ಇರುವ ಕಾರಣ ಡಿಜಿಟಲ್ ಆ್ಯಡ್ ಮಾರುಕಟ್ಟೆ ಕಳೆಗುಂದಿದ್ದು ಫೇಸ್‌ಬುಕ್, ಇನ್ಸ್‌ಟಾಗ್ರಾಮ್ ಇತ್ಯಾದಿ ಸೋಷಿಯಲ್ ಮೀಡಿಯಾಗಳ ಆದಾಯಕ್ಕೆ ಸಂಚಕಾರ ಬಿದ್ದಂತಾಗಿದೆ. ಮೆಟಾ ಪ್ಲಾಟ್‌ಫಾರ್ಮ್ಸ್ ಮಾಲಕತ್ವದಲ್ಲಿ ಫೇಸ್‌ಬುಕ್, ಇನ್ಸ್‌ಟಾಗ್ರಾಮ್, ವಾಟ್ಸಾಪ್ ಇವೆ. ಆನ್‌ಲೈನ್ ಜಾಹೀರಾತುಗಳೇ ಬಹುತೇಕ ಆದಾಯ ಮೂಲ ಇರುವ ಮೀಡಿಯಾಗಳಿವು. ಹೀಗಾಗಿ, ಮೆಟಾ ಸಂಸ್ಥೆ ತನ್ನ ವೆಚ್ಚವನ್ನು ಕಡಿಮೆಗೊಳಿಸಲು ಸಿಬ್ಬಂದಿ ಸಂಖ್ಯೆ ಕಡಿಮೆ ಮಾಡದೇ ಬೇರೆ ದಾರಿ ಇರಲಿಲ್ಲ ಎನ್ನಲಾಗುತ್ತಿದೆ.

ಟೆಸ್ಲಾ ಷೇರು ಪ್ರಪಾತಕ್ಕೆ; ವಿಶ್ವದ ಅತಿದೊಡ್ಡ ಶ್ರೀಮಂತನೆಂಬ ಪಟ್ಟ ಕಳೆದುಕೊಳ್ಳುತ್ತಾರಾ ಮಸ್ಕ್?ಟೆಸ್ಲಾ ಷೇರು ಪ್ರಪಾತಕ್ಕೆ; ವಿಶ್ವದ ಅತಿದೊಡ್ಡ ಶ್ರೀಮಂತನೆಂಬ ಪಟ್ಟ ಕಳೆದುಕೊಳ್ಳುತ್ತಾರಾ ಮಸ್ಕ್?

ಮೆಟಾ ಇಂಡಿಯಾ?

ಮೆಟಾದ ಭಾರತ ವಿಭಾಗದಲ್ಲಿ 300-400 ಮಂದಿ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಎಷ್ಟು ಮಂದಿಯನ್ನು ಕೆಲಸದಿಂದ ತೆಗೆಯಲಾಗಿದೆ ಎಂಬುದು ಗೊತ್ತಾಗಿಲ್ಲ. ಇತ್ತೀಚೆಗಷ್ಟೇ ಮೆಟಾ ಇಂಡಿಯಾದ ಎಂಡಿಯಾಗಿದ್ದ ಅಜಿತ್ ಮೋಹನ್ ರಾಜೀನಾಮೆ ನೀಡಿ ಸ್ನ್ಯಾಪ್ ಎಂಬ ಇಂಥದ್ದೇ ಸೋಷಿಯಲ್ ಮೀಡಿಯಾ ಕಂಪನಿ ಸೇರಿದ್ದರು. ಸದ್ಯ ಮೆಟಾ ಇಂಡಿಯಾವನ್ನು ಮನೀಶ್ ಚೋಪ್ರಾ ಮುನ್ನಡೆಸುತ್ತಿದ್ದಾರೆ.

ಫೇಸ್‌ಬುಕ್‌ನ ಮಾಲೀಕ ಸಂಸ್ಥೆ ಮೆಟಾದಿಂದ 11 ಸಾವಿರ ಉದ್ಯೋಗಿಗಳು ವಜಾ

ಈಗ ಮೆಟಾದ ಸಿಬ್ಬಂದಿ ಕಡಿತದ ಕ್ರಮ ಅದರ ಭಾರತದ ವ್ಯವಹಾರಗಳ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಅಜಿತ್ ಮೋಹನ್ ನೇತೃತ್ವದಲ್ಲಿದ್ದಾಗ ಭಾರತದಲ್ಲಿ ಫೇಸ್‌ಬುಕ್‌ಗೆ ಒಳ್ಳೆಯ ಆದಾಯ ಬಂದಿದೆ. 2021-22ರ ಹಣಕಾಸು ವರ್ಷದಲ್ಲಿ ಮೆಟಾದ ನಿವ್ವಳ ಲಾಭ ಬಹುತೇಕ ದ್ವಿಗುಣಗೊಂಡು 297 ಕೋಟಿ ರೂ ತಲುಪಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಅದು 128.2 ಕೋಟಿ ರೂ ನಿವ್ವಳ ಲಾಭ ಪಡೆದಿತ್ತು.

2021-22ರ ಹಣಕಾಸು ವರ್ಷದಲ್ಲಿ ಮೆಟಾದ ಒಟ್ಟಾರೆ ಆದಾಯ 2,324 ಕೋಟಿ ರೂಪಾಯಿ ಇದೆ. ಹಿಂದಿನ ವರ್ಷದಲ್ಲಿ 1,485.1 ಕೋಟಿ ರೂ ಆದಾಯ ಹೊಂದಿದ್ದ ಮೆಟಾ ಒಂದು ವರ್ಷದಲ್ಲಿ ಶೇ. 56.5ರಷ್ಟು ಆದಾಯ ಹೆಚ್ಚಲ ಕಂಡಿದೆ. ಭಾರತದಲ್ಲಿ ಜಾಹೀರಾತುಗಳಿಂದ ಬಂದ ಒಟ್ಟು ಆದಾಯ ಶೇ. 74ರಷ್ಟು ಹೆಚ್ಚಾಗಿದೆ.

ಯಾಕೆ ಲೇ ಆಫ್?

ಭಾರತದಲ್ಲಿ ಫೇಸ್‌ಬುಕ್, ಇನ್ಸ್‌ಟಾಗ್ರಾಮ್‌ಗೆ ಲಾಭ ಬಂದಿರಬಹುದು. ಆದರೆ, ಜಾಗತಿಕವಾಗಿ ಆ ಸ್ಥಿತಿ ಇಲ್ಲ. ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ಬಂದ ಬಳಿಕ ಮೆಟಾ ಸಾಕಷ್ಟು ವ್ಯವಹಾರ ನಷ್ಟ ಅನುಭವಿಸಿದೆ.

"ಇ-ಕಾಮರ್ಸ್ ಬಮದ ಬಳಿಕ ವಿಪರೀತ ಎನಿಸುವಷ್ಟು ಆದಾಯ ಹೆಚ್ಚಳವಾಯಿತು. ಕೋವಿಡ್ ಬಿಕ್ಕಟ್ಟು ಅಂತ್ಯಗೊಂಡ ಬಳಿಕ ಈ ಬೆಳವಣಿಗೆ ಹೀಗೆ ಇರುತ್ತದೆ ಎಂದು ಎಲ್ಲರಂತೆ ನಾವೂ ನಿರೀಕ್ಷಿಸಿದ್ದೆವು. ಆದರೆ, ಹಾಗಾಗಲಿಲ್ಲ... ಆನ್‌ಲೈನ್ ಕಾಮರ್ಸ್ ಮುಂಚಿದ್ದ ಸ್ಥಿತಿಗೆ ಬಂದಿದ್ದಲ್ಲದೇ, ಆರ್ಥಿಕ ದುಸ್ಥಿತಿ, ಸ್ಪರ್ಧೆ ಹೆಚ್ಚಳ, ಜಾಹೀರಾತು ನಷ್ಟ ಇತ್ಯಾದಿಗಳಿಂದ ನಾವು ಅಂದುಕೊಂಡಿದ್ದಕ್ಕಿಂತ ಆದಾಯ ಕಡಿಮೆ ಆಗಿದೆ. ನಾನು ತಪ್ಪಾಗಿ ಎಣಿಕೆ ಮಾಡಿದ್ದೆ, ಅದರ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ" ಎಂದು ಮಾರ್ಕ್ ಜುಕರ್‌ಬರ್ಗ್ ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್ ಸಾಂಕ್ರಾಮಿಕ ಸ್ಥಿತಿ ಮುಗಿದ ಬಳಿಕ ಮತ್ತೆ ಆದಾಯ ಯಥಾಪ್ರಕಾರ ಹೆಚ್ಚೆಚ್ಚು ಹರಿದುಬರುವ ನಿರೀಕ್ಷೆಯಲ್ಲಿದ್ದ ಮೆಟಾ ಆ ಹಂತದಲ್ಲಿ ಬಹಳಷ್ಟು ಹೂಡಿಕೆಗಳನ್ನು ಮಾಡಿತ್ತು. ಈ ಬಂಡವಾಳ ವಾಪಸ್ ಬರಬಹುದು ಎಂಬ ಅದರ ಎಣಿಕೆ ಸುಳ್ಳಾಗಿ ಹೋಗಿದೆ. ಈಗ ಮೆಟಾ ತನ್ನ ಸಿಬ್ಬಂದಿ ವರ್ಗ ಕಡಿತಗೊಳಿಸುವ ಮುನ್ನ ವೆಚ್ಚ ಕಡಿತಕ್ಕೆ ಬೇರೆ ಮಾರ್ಗೋಪಾಯಗಳನ್ನೂ ಅನುಸರಿಸಿತ್ತು. ವೇತನಕಡಿತ, ತಂಡಗಳ ಪುನಾರಚನೆ, ಬಜೆಟ್ ಕಡಿತ, ರಿಯಲ್ ಎಸ್ಟೇಟ್ ವೆಚ್ಚ ಕಡಿತ ಇತ್ಯಾದಿ ಹಲವು ಕ್ರಮಗಳನ್ನು ಕೈಗೊಂಡಿತೆನ್ಲಾಗಿದೆ.

"ನಾವು ಕೈಗೊಂಡ ಈ ಕ್ರಮಗಳು ನಿರೀಕ್ಷಿತ ಫಲ ಕೊಡಲು ಸಾಲದಾಗಿವೆ. ಹೀಗಾಗಿ, ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕುವ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ" ಎಂದು ಮಾರ್ಕ್ ಜುಕರ್‌ಬರ್ಕ್ ಸ್ಪಷ್ಟಪಡಿಸಿದ್ಧಾರೆ.

English summary

Over 11000 Facebook Employees Lost Jobs, Know Reasons

Meta Platforms Inc, the parent company of facebook is reportedly sacked over 11,000 employees as measure to make its revenue loss across the world.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X