For Quick Alerts
ALLOW NOTIFICATIONS  
For Daily Alerts

ಪೇಟಿಎಂ ಷೇರು ಶೇಕಡ 6ರಷ್ಟು ಕುಸಿತ, ಕಾರಣವೇನು?

|

ಡಿಜಿಟಲ್ ಪೇಮೆಂಟ್ ಆಪ್‌ಗಳ ಪೈಕಿ ಪೇಟಿಎಂ ಪ್ರಮುಖ ಆಪ್ ಆಗಿದೆ. ಈ ಆಪ್ ಶುಕ್ರವಾರ ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ ಅನುಭವಿಸಿದೆ. ಶುಕ್ರವಾರದ ವಹಿವಾಟಿನಲ್ಲಿ ಈವರೆಗೆ ಪೇಟಿಎಂ ಷೇರು ಸುಮಾರು ಶೇಕಡ 6.2ರಷ್ಟು ಕುಸಿತ ಕಂಡಿದೆ. ಇದಕ್ಕೆ ಪ್ರಮುಖ ಕಾರಣ ಏನು ಎಂಬುವುದನ್ನು ನಾವು ಇಲ್ಲಿ ವಿವರಿಸಿದ್ದೇವೆ.

 

ಡಿಜಿಟಲ್ ಲೆಂಡಿಂಗ್ ಆಪ್ಸ್‌ ಬಗ್ಗೆ ಕೇಂದ್ರ ಬ್ಯಾಂಕ್ ಮಾರ್ಗಸೂಚಿ ಬಳಿಕ ಹಾಗೂ ಈ ಹಿಂದೆ ಪೇಟಿಎಂನ ಸಿಇಒ ಆಗಿದ್ದ ವಿಜಯ್ ಶೇಖರ್ ಶರ್ಮಾರನ್ನು ಪೇಟಿಎಂ ಸಿಇಒ ಆಗಿ ಮರು ನೇಮಕಾತಿ ಮಾಡಿದ ಬೆನ್ನಲ್ಲೇ ಷೇರುಪೇಟೆಯಲ್ಲಿ ಪೇಟಿಎಂ ಕುಸಿದಿದೆ. ಇನ್ಸಿಟ್ಯೂಷನಲ್ ಇನ್ವೆಸ್ಟರ್ ಅಡ್ವೈಸರಿ ಸರ್ವೀಸಸ್ ಅಥವಾ ಐಐಎಎಸ್‌ ಮತ್ತೆ ಪೇಟಿಎಂನ ಸಿಇಒ ಆಗಿ ವಿಜಯ್ ಶೇಖರ್ ಶರ್ಮಾರನ್ನು ನೇಮಕ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದೆ.

"ಪೇಟಿಎಂನ ಸಿಇಒ ಆಗಿದ್ದ ವೇಳೆ ವಿಜಯ್ ಶೇಖರ್ ಶರ್ಮಾ ಸಂಸ್ಥೆಯ ಲಾಭವನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಹಲವಾರು ಕಾರ್ಯಗಳನ್ನು ಮಾಡಿದ್ದಾರೆ. ಆದರೆ ಯಾವುದೂ ಕೂಡಾ ಯಶಸ್ವಿಯಾಗಿಲ್ಲ. ಹಾಗಿರುವಾಗಿ ಬೋರ್ಡ್ ಈ ವಿಚಾರದಲ್ಲಿ ವೃತ್ತಿಪರತೆಗೆ ಅಧಿಕ ಆದ್ಯತೆ ನೀಡಬೇಕು," ಎಂದು ಆಗಸ್ಟ್ 9ರ ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ.

ಪೇಟಿಎಂನ ಪೋಷಕ ಸಂಸ್ಥೆಯಾದ ವನ್97 ಕಮ್ಯೂನಿಕೇಷನ್ಸ್ ಲಿಮಿಟೆಡ್ ಚೀನಾದ ಆಲಿಬಾಬಾ ಗ್ರೂಪ್‌ ಹೋಲ್ಡಿಂಗ್‌ ಬೆಂಬಲಿತವಾಗಿದೆ. ಇದರ ಸಹ ಸಂಸ್ಥೆಯಾದ ಆಂಟ್ ಗ್ರೂಪ್ ಸುಮಾರು 6.44 ಬಿಲಿಯನ್ ರೂಪಾಯಿ (80.83 ಮಿಲಿಯನ್ ಡಾಲರ್) ನಷ್ಟವನ್ನು ಕಂಡಿದೆ. ಜೂನ್‌ನ ಕೊನೆ ತ್ರೈಮಾಸಿಕದಲ್ಲಿ ಈ ನಷ್ಟವನ್ನು ಕಂಡಿದೆ. ಆದರೆ ಸೆಪ್ಟೆಂಬರ್ 2023ರ ಒಳಗೆ ಲಾಭವನ್ನು ಗಳಿಸಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ವಿಜಯ್ ಶೇಖರ್ ಶರ್ಮಾ ವೇತನದ ಬಗ್ಗೆ ಕಳವಳ

ವಿಜಯ್ ಶೇಖರ್ ಶರ್ಮಾ ವೇತನದ ಬಗ್ಗೆ ಕಳವಳ

ಇನ್ನು ಐಐಎಎಸ್‌ ವಿಜಯ್ ಶೇಖರ್ ಶರ್ಮಾಗೆ ಪೇಟಿಎಂನಲ್ಲಿ ನೀಡಲಾಗುವ ವೇತನದ ಬಗ್ಗೆಯು ಕಳವಳವನ್ನು ವ್ಯಕ್ತಪಡಿಸಸಿದೆ. ವಿಜಯ್ ಶೇಖರ್ ಶರ್ಮಾರ ಒಟ್ಟು ವೇತನ ಸುಮಾರು 2023ರಲ್ಲಿ 7.96 ಬಿಲಿಯನ್ ರೂಪಾಯಿ ಆಗಲಿದೆ. ಇದು ಎಲ್ಲ ಎಸ್‌&ಪಿ ಬಿಎಸ್‌ಇ ಸೆನ್ಸೆಕ್ಸ್ ಕಂಪನಿಗಳ ಪೈಕಿ ಓರ್ವ ಸಿಇಒಗೆ ನೀಡಲಾಗುವ ಅತೀ ಅಧಿಕ ವೇತನವಾಗಿದೆ. ಅಧಿಕ ಲಾಭವನ್ನು ಪಡೆದ ಸಂಸ್ಥೆಗಳು ಕೂಡಾ ಇಷ್ಟು ವೇತನವನ್ನು ನೀಡುತ್ತಿಲ್ಲ ಎಂಬುವುದು ಇನ್ಸಿಟ್ಯೂಷನಲ್ ಇನ್ವೆಸ್ಟರ್ ಅಡ್ವೈಸರಿ ಸರ್ವೀಸಸ್ ವಾದವಾಗಿದೆ.

ಕೇಂದ್ರ ಬ್ಯಾಂಕ್ ಮಾರ್ಗಸೂಚಿಯಿಂದ ಏನು ಪ್ರಭಾವ?

ಕೇಂದ್ರ ಬ್ಯಾಂಕ್ ಮಾರ್ಗಸೂಚಿಯಿಂದ ಏನು ಪ್ರಭಾವ?

ಈ ಎಲ್ಲಾ ಕಾರಣದಿಂದಾಗಿ ಪೇಟಿಎಂ ಷೇರು ಇಳಿಕೆ ಕಾಣುತ್ತಿರುವ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತೆ ಪೇಟಿಎಂ ಹೇಳಿಕೆಯೊಂದನ್ನು ನೀಡಿದೆ. ಗುರುವಾರ ಪೇಟಿಎಂ ತನ್ನ ಹೂಡಿಕೆದಾರರಿಗೆ, "ಡಿಜಿಟಲ್ ಲೆಂಡಿಂಗ್ ಆಪ್ಸ್ ಸಂಬಂಧಿಸಿದ ಕೇಂದ್ರ ಬ್ಯಾಂಕ್‌ನ ಮಾರ್ಗಸೂಚಿಯು ಈಗ ಖರೀದಿ ಮಾಡಿ ಮತ್ತೆ ಪಾವತಿ ಮಾಡುವ (buy-now-pay-later) ವ್ಯವಸ್ಥೆಯ ಮೇಲೆ ಪರಿಣಾಮ ಉಂಟು ಮಾಡಬಹುದು," ಎಂದು ಹೇಳಿದೆ.

ಷೇರುಪೇಟೆಗೆ ಎಂಟ್ರಿಯೇ ನಿರಾಶಾದಾಯಕ
 

ಷೇರುಪೇಟೆಗೆ ಎಂಟ್ರಿಯೇ ನಿರಾಶಾದಾಯಕ

ಈ ಹಿಂದೆ ದೇಶದ ಪ್ರಮುಖ ಡಿಜಿಟಲ್‌ ಪಾವತಿ ಸಂಸ್ಥೆ ಪೇಟಿಎಂ ಮಾರುಕಟ್ಟೆ ಪ್ರವೇಶ ಮಾಡಿದಾಗ ಭಾರೀ ನಷ್ಟವನ್ನು ಕಂಡಿತ್ತು. ಷೇರುಪೇಟೆ ಪದಾರ್ಪಣೆ ಮಾಡಿದ ಆರಂಭದಲ್ಲೇ ಪೇಟಿಎಂಗೆ ನಿರಾಶೆ ಮೂಡಿತ್ತು. 15 ನಿಮಿಷದಲ್ಲೇ ಷೇರು ಪಾತಾಳಕ್ಕೆ ಇಳಿದಿತ್ತು. ಪೇಟಿಎಂ ಐಪಿಒ ಮೊದಲ ಬಾರಿಯೇ ಶೇಕಡ 28 ರಷ್ಟು ಕುಸಿತ ಕಂಡಿತ್ತು. ಪೇಟಿಎಂನ ಪೋಷಕ ಸಂಸ್ಥೆಯಾದ ಒನ್ 97 ಕಮ್ಯುನಿಕೇಷನ್ಸ್ ಎನ್‌ಎಸ್‌ಇ ದಲ್ಲಿ 1,950 ರೂಪಾಯಿ ದರದಲ್ಲಿ ಹಾಗೂ ಬಿಎಸ್‌ಇಯಲ್ಲಿ 1955 ರೂಪಾಯಿ ದರದಲ್ಲಿ ಆರಂಭಿಕ ವಹಿವಾಟಿನೊಂದಿಗೆ ನಿರಾಶೆ ಮೂಡಿಸಿತ್ತು. ಪೇಟಿಎಂ ಷೇರು ಮಾರುಕಟ್ಟೆ ಪ್ರವೇಶವು 2,150 ರೂಪಾಯಿಯೊಂದಿಗೆ ಆರಂಭವಾಗಿತ್ತು. ಆದರೆ 200 ರೂಪಾಯಿ (ಶೇ 9.3) ರಿಯಾಯಿತಿಯೊಂದಿಗೆ 1955 ರೂಪಾಯಿಯಲ್ಲಿ ಟ್ರೇಡಿಂಗ್ ಆರಂಭಿಸಿತ್ತು.

English summary

Paytm Shares Crash 6 percent, Reason Behind the Stock Slip Explained in Kannada

Paytm slips 6% on questions over CEO reappointment, regulatory fears. Reason Behind the Stock Slip Explained in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X