For Quick Alerts
ALLOW NOTIFICATIONS  
For Daily Alerts

ಕೋಟಿಗಟ್ಟಲೆ ಮೌಲ್ಯದ ಅಕ್ಕಿ ಕಳ್ಳಸಾಗಣೆ ದಂಧೆಯ ಅಂತರರಾಷ್ಟ್ರೀಯ ಜಾಲ ಖೆಡ್ಡಾಗೆ

|

ಸಾರ್ವಜನಿಕ ವಿತರಣೆ ವ್ಯವಸ್ಥೆ (ಪಿಡಿಎಸ್) ಅಡಿಯಲ್ಲಿ ನೀಡಲಾಗುವ ಅಕ್ಕಿ ಮತ್ತಿತರ ವಸ್ತುಗಳು ಕಳ್ಳಸಾಗಣೆ ಆಗಿರುವುದನ್ನು ಕೇಳಿರುತ್ತೀರಿ. ಭಾರತದಲ್ಲೇ ಮುಕ್ತ ಮಾರುಕಟ್ಟೆಗೆ ಕಳ್ಳ ಸಾಗಣೆ ಮಾಡಿ, ಲಾಭಕ್ಕೆ ಮಾರಿಕೊಳ್ಳುವ ಸಂಗತಿ ಕೂಡ ಹೊಸದಲ್ಲ.

ಆದರೆ, ಆಂಧ್ರಪ್ರದೇಶದಲ್ಲಿ ಅಂತರರಾಷ್ಟ್ರೀಯ ಕಳ್ಳಸಾಗಣೆದಾರರ ಗುಂಪು ಕಾನೂನುಬಾಹಿರವಾಗಿ ಕೋಟ್ಯಂತರ ರುಪಾಯಿ ಮೌಲ್ಯದ ಪಿಡಿಎಸ್ ಅಕ್ಕಿಯನ್ನು ಆಫ್ರಿಕಾ, ಮಲೇಷ್ಯಾ, ಬಾಂಗ್ಲಾದೇಶ್ ಮತ್ತಿತರ ದೇಶಗಳಿಗೆ ಸಾಗಣೆ ಮಾಡುತ್ತಿದ್ದುದು ಕಂಡುಬಂದಿದೆ.

ಈಚೆಗೆ ಪೊಲೀಸರು ಅಂಥದ್ದೊಂದು ತಂಡವನ್ನು ಪತ್ತೆ ಹಚ್ಚಿದ್ದಾರೆ. ಬಿಳಿ ಬಣ್ಣದ ಪಡಿತರ ಚೀಟಿ ಇರುವವರಿಗಾಗಿನ ಅಕ್ಕಿಯನ್ನು ಪತ್ತೆ ಹಚ್ಚಲಾಗಿದೆ. ಅದನ್ನು ಕಾನೂನುಬಾಹಿರವಾಗಿ ಪ್ರಕಾಶಂ ಜಿಲ್ಲೆಯಿಂದ ರಫ್ತು ಮಾಡಲಾಗುತ್ತಿತ್ತು. ಕಳೆದ ಎರಡು ವರ್ಷಗಳಿಂದ 38 ಕೋಟಿ ರುಪಾಯಿ ಮೌಲ್ಯದ ಅಕ್ಕಿಯನ್ನು ಕಳೆದ ಎರಡು ವರ್ಷಗಳಲ್ಲಿ ಸಾಗಣೆ ಮಾಡಿರುವುದು ತಿಳಿದುಬಂದಿದೆ.

150 ಕೋಟಿ ರುಪಾಯಿಗೂ ದೊಡ್ಡ ಮೊತ್ತದ ಹಗರಣ

150 ಕೋಟಿ ರುಪಾಯಿಗೂ ದೊಡ್ಡ ಮೊತ್ತದ ಹಗರಣ

ಕಾನೂನುಬಾಹಿರವಾಗಿ ಸಾಗಣೆ ಮಾಡುವಾಗ ಬಂದರುಗಳಲ್ಲಿ ಸಿಕ್ಕಿಬಿದ್ದಿರುವುದು ಇದರಲ್ಲಿ ಒಳಗೊಂಡಿಲ್ಲ. ಒಂದು ವೇಳೆ ಅದನ್ನು ಲೆಕ್ಕಕ್ಕೆ ತೆಗೆದುಕೊಂಡಲ್ಲಿ ಇದು 150 ಕೋಟಿ ರುಪಾಯಿಗೂ ದೊಡ್ಡ ಮೊತ್ತದ ಹಗರಣ ಆಗುತ್ತದೆ. ಪೊಲೀಸ್ ಅಧಿಕಾರಿಗಳು ಹೇಳುವ ಪ್ರಕಾರ, ಲಾಭದ ಪ್ರಮಾಣ ಹೆಚ್ಚಿರುವ ಕಾರಣಕ್ಕೆ ಕಳ್ಳಸಾಗಣೆದಾರರ ಪಾಲಿಗೆ ಇದು ಆಕರ್ಷಕವಾಗಿ ಕಾಣುತ್ತದೆ.

4.5 ಲಕ್ಷ ಕೇಜಿಯಷ್ಟು ಪಿಡಿಎಸ್ ಅಕ್ಕಿ ಕಳ್ಳ ಸಾಗಣೆ

4.5 ಲಕ್ಷ ಕೇಜಿಯಷ್ಟು ಪಿಡಿಎಸ್ ಅಕ್ಕಿ ಕಳ್ಳ ಸಾಗಣೆ

ನಾವು ಈ ತನಕ ಒಂದು ಲಕ್ಷ ಕೇಜಿ ಪಿಡಿಎಸ್ ಅಕ್ಕಿಯನ್ನು ವಶಕ್ಕೆ ಪಡೆದಿದ್ದೇವೆ. ಇನ್ನಷ್ಟು ಆಡಿಟ್ ಮಾಡಿದಾಗ ಗೊತ್ತಾಗಿದ್ದೇನೆಂದರೆ, 4.5 ಲಕ್ಷ ಕೇಜಿಯಷ್ಟು ಪಿಡಿಎಸ್ ಅಕ್ಕಿ, ಅಂದರೆ 38 ಕೋಟಿ ರುಪಾಯಿ ಮೌಲ್ಯದ್ದನ್ನು ನಾನಾ ದೇಶಗಳಿಗೆ ರಫ್ತು ಮಾಡಲಾಗಿದೆ ಎಂದು ಪ್ರಕಾಶಂ ಜಿಲ್ಲೆಯ ಎಸ್.ಪಿ. ಸಿದ್ಧಾರ್ಥ್ ಕೌಶಲ್ ತಿಳಿಸಿದ್ದಾರೆ.

ಕಳ್ಳಸಾಗಣೆಗೆ ಸಂಬಂಧಿಸಿದಂತೆ 32 ಜನರ ಬಂಧನ

ಕಳ್ಳಸಾಗಣೆಗೆ ಸಂಬಂಧಿಸಿದಂತೆ 32 ಜನರ ಬಂಧನ

ಕಳ್ಳಸಾಗಣೆಗೆ ಸಂಬಂಧಿಸಿದಂತೆ ಈ ತನಕ 32 ಜನರನ್ನು ಬಂಧಿಸಲಾಗಿದೆ. ಅವರಿಗೆ ರೈಸ್ ಮಿಲ್ ಮಾಲೀಕರು, ಪಿಡಿಎಸ್ ಬ್ರೋಕರ್ ಗಳು, ಸಾಗಣೆದಾರರು ಮತ್ತು ರಫ್ತುದಾರರ ಜತೆ ನಂಟಿರುವುದರ ಬಗ್ಗೆ ಶಂಕೆ ಇದೆ. ಮೊದಲಿಗೆ ಈ ಕಳ್ಳಸಾಗಣೆದಾರರು ರೈಸ್ ಮಿಲ್ ನವರಿಂದ ಅಕ್ಕಿ ಪಡೆಯುತ್ತಿದ್ದರು. ಆ ನಂತರ ಪಾಲಿಶ್ ಆಗಿ, ಪ್ಯಾಕ್ ಮಾಡಿಸಿ, ಲೇಬಲ್ ಆಗುತ್ತಿತ್ತು.

ಕಳ್ಳಸಾಗಣೆ ದಂಧೆಯಲ್ಲಿ ರಫ್ತು ಕಂಪೆನಿಗಳು

ಕಳ್ಳಸಾಗಣೆ ದಂಧೆಯಲ್ಲಿ ರಫ್ತು ಕಂಪೆನಿಗಳು

ಅವುಗಳನ್ನು ಪನ್ ವೇಲ್, ಚೆನ್ನೈ, ಕಾಕಿನಾಡ ಮತ್ತು ಕೃಷ್ಣಪಟ್ಣಂ ಬಂದರಿಗೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಮಹಾರಾಷ್ಟ್ರ, ಗುಜರಾತ್, ದೆಹಲಿ, ಛತ್ತೀಸ್ ಗಢ ಮತ್ತು ಮಧ್ಯಪ್ರದೇಶದಲ್ಲಿ ಇರುವ ರಫ್ತು ಕಂಪೆನಿಗಳು ಈ ಕಳ್ಳಸಾಗಣೆ ದಂಧೆಯಲ್ಲಿ ಭಾಗಿ ಆಗಿವೆ ಎಂದು ಕೌಶಲ್ ಹೇಳಿದ್ದಾರೆ.

English summary

PDS Rice Smugglers International Racket Busted By Andhra Plice

International racket of PDS rice smuggling busted, smugglers arrested by Andhra Pradesh police.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X