For Quick Alerts
ALLOW NOTIFICATIONS  
For Daily Alerts

ಬೋನಿನಂತೆ ಇರುವ ಮನೆಗಳು, ಬಾಡಿಗೆ ಮಾತ್ರ ತಿಂಗಳಿಗೆ 17 ರಿಂದ 22 ಸಾವಿರ ರುಪಾಯಿ

|

ಬೋನಿನಲ್ಲಿ ಪ್ರಾಣಿಗಳನ್ನು ಇಟ್ಟಿರುವುದನ್ನು ನೀವು ನೋಡಿರಬಹುದು. ಆದರೆ ಈ ಜಗತ್ತಿನಲ್ಲಿ ಒಂದು ಸ್ಥಳ ಇದೆ. ಅಲ್ಲಿ ಕಬ್ಬಿಣದ ಬೋನಿನಲ್ಲಿ ಜನರೇ ವಾಸಿಸುತ್ತಾರೆ. ಅಂಥ ದೇಶ ಯಾವುದು ಮತ್ತು ಏಕೆ ಎಂಬ ಪ್ರಶ್ನೆ ಹಾಗೂ ಕುತೂಹಲ ನಿಮಗೆ ಮೂಡಬಹುದು. ಆ ದೇಶದ ಹೆಸರು ಹಾಂಕಾಂಗ್. ವಿಪರೀತ ಬಡತನ- ದುಬಾರಿ ಬಾಡಿಗೆ ಕಾರಣಕ್ಕೆ ಅಲ್ಲಿ ಕಬ್ಬಿಣದ ಬೋನಿನಲ್ಲಿ ಜನರು ವಾಸಿಸುತ್ತಾರೆ.

ಬೋನಿನಂತಹ ಮನೆಯಲ್ಲಿ ವಾಸಿಸಲು 17 ರಿಂದ 22 ಸಾವಿರ

ಬೋನಿನಂತಹ ಮನೆಯಲ್ಲಿ ವಾಸಿಸಲು 17 ರಿಂದ 22 ಸಾವಿರ

ಕಬ್ಬಿಣದ ಬೋನಿನಂತಿರುವ ಈ ಮನೆಗಳಲ್ಲಿ ಒಂದು ತಿಂಗಳಿಗೆ 1800ರಿಂದ 2400 ಹಾಂಕಾಂಗ್ ಡಾಲರ್ (ಭಾರತದ ರುಪಾಯಿಗಳಲ್ಲಿ 17ರಿಂದ 22 ಸಾವಿರ) ಬಾಡಿಗೆ ಕೂಡ ನೀಡಲಾಗುತ್ತದೆ. ಇವು ಬೋನು ಅಂತ ಹೊರಗಿನವರು ಕರೆಯಬಹುದು. ಆದರೆ ಇವರಿಗೆ ಮಾತ್ರ ಇವು ಮನೆಗಳು. ಈ ಬೋನಿನ ಮನೆಗಳಲ್ಲಿ ಸರಿಯಾದ ಸುರಕ್ಷತೆ ಇರುವುದಿಲ್ಲ. ಹಳೇ ಕಟ್ಟಡಗಳಲ್ಲಿ ಬೆಂಕಿ ಅವಘಡ ಸಂಭವಿಸಿದರೆ ರಕ್ಷಣಾ ವ್ಯವಸ್ಥೆಯೂ ಇರುವುದಿಲ್ಲ.

ಒಂದೇ ಅಪಾರ್ಟ್‌ಮೆಂಟ್‌ನಲ್ಲಿವೆ ಇಂತಹ ಅನೇಕ ಬೋನಿನ ಮನೆಗಳು

ಒಂದೇ ಅಪಾರ್ಟ್‌ಮೆಂಟ್‌ನಲ್ಲಿವೆ ಇಂತಹ ಅನೇಕ ಬೋನಿನ ಮನೆಗಳು

ಇಂಥ ಬೋನಿನ ಮನೆಗಳು ಅಪಾರ್ಟ್ ಮೆಂಟ್ ನೊಳಗೆ ಬೇಕಾದಷ್ಟು ಇರುತ್ತವೆ. ಒಂದು ಕಡೆ ನೂರಾರು ಮಂದಿ ಇರುತ್ತಾರೆ. ಒಂದು ಅಪಾರ್ಟ್ ಮೆಂಟ್ ನಲ್ಲಿ ಒಂದೋ ಎರಡೋ ಶೌಚಾಲಯ ಇರುತ್ತದೆ. ಅಂದ ಹಾಗೆ ಹೀಗೆ ಅಪಾರ್ಟ್ ಮೆಂಟ್ ಗಳಲ್ಲಿ ಕಬ್ಬಿಣದ ಬೋನಿನ ಮನೆಗಳನ್ನು ಬಾಡಿಗೆಗೆ ಕೊಡುವುದು ಸಹ ಇಲ್ಲಿ ತಪ್ಪೇನಲ್ಲ. ಆದರೆ ಅದಕ್ಕೆ ವಿಶೇಷ ಪರವಾನಗಿ ಪಡೆದಿರಬೇಕು, ಅಷ್ಟೇ.

ಶವ ಪೆಟ್ಟಿಗೆ ಆಕಾರದ ಬೋನುಗಳು

ಶವ ಪೆಟ್ಟಿಗೆ ಆಕಾರದ ಬೋನುಗಳು

ಶವ ಪೆಟ್ಟಿಗೆ ಆಕಾರದಲ್ಲಿ ಈ ಕಬ್ಬಿಣದ ಬೋನುಗಳು ಇರುತ್ತವೆ. ಇವುಗಳ ಅಳತೆ ಒಂದು ಕ್ಯಾಬಿನ್ ನಷ್ಟು ಇರುತ್ತದೆ. ಮಲಗುವುದಕ್ಕೆ ಈ ಬಾಡಿಗೆದಾರರು ಹಾಸಿಗೆ ಬದಲಿಗೆ ಬಿದಿರಿನ ಹಾಸುಗಳನ್ನು ಬಳಸುತ್ತಾರೆ. ಈ ಬೋನಿನ ಮನೆಗಳಲ್ಲಿ ಖಾಸಗಿತನದ ಮಾತೇ ಇಲ್ಲ. ಏಕೆಂದರೆ ಒಂದಕ್ಕೂ ಮತ್ತೊಂದಕ್ಕೂ ಬಹಳ ಹತ್ತಿರ ಇರುತ್ತದೆ.

ಇನ್ನು ಆಧುನಿಕ ವ್ಯವಸ್ಥೆ ಏನು ಗೊತ್ತಾ? ಆ ಕಬ್ಬಿಣದ ಬೋನಿನಂಥ ಕ್ಯಾಬಿನ್ ನೊಳಗೂ ಎರಡು- ಮೂರು ವಿಭಾಗಗಳು ಇರುತ್ತವೆ. ಸಣ್ಣ ಮರದ ತುಂಡುಗಳನ್ನೋ ಅಥವಾ ಕಾಗದದ ಬೋರ್ಡ್ ಗಳನ್ನೋ ಬಳಸಿ ವಿಂಗಡಣೆ ಮಾಡಿರಲಾಗುತ್ತದೆ.

ವಿಪರೀತ ಬಡತನದಲ್ಲಿ ಇರುವ ಜನರು ಇಂಥ ಕಡೆ ಬಾಡಿಗೆಗೆ ವಾಸ ಮಾಡುತ್ತಾರೆ. ಇಂಥ ಕಡೆ ವಾಸ ಮಾಡುವುದರಿಂದ ಮಾನಸಿಕ ಕ್ಷೋಭೆಗೆ ಗುರಿ ಆಗುತ್ತಾರೆ. ಇಂಥ ಕಡೆ ಇರುವ ವಯಸ್ಸಾದವರಂತೂ ತಮ್ಮ ಸಾವು ಯಾವಾಗ ಬರುತ್ತದೋ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

English summary

People Living In Iron Cage Rent Rs 17 To 22,000 Per Month In Hong Kong

Hong Kong is the country poverty more. Here is the details of cost of living
Story first published: Saturday, May 16, 2020, 11:47 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X