For Quick Alerts
ALLOW NOTIFICATIONS  
For Daily Alerts

ಏಳು ತಿಂಗಳ ಬಳಿಕ ಪೆಟ್ರೋಲ್ ಬೆಲೆ ಇಳಿಕೆ? ಮುಂದಿನ ದಿನಗಳಲ್ಲಿ ಇನ್ನಷ್ಟು ಅಗ್ಗ?

|

ನವದೆಹಲಿ, ನ. 1: ಏಪ್ರಿಲ್‌ನಿಂದೀಚೆ ಬದಲಾವಣೆ ಕಾಣದೆ ಸ್ಥಿರವಾಗಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮೊದಲ ಬಾರಿಗೆ ಇಳಿಕೆ ಕಾಣುವ ಸಾಧ್ಯತೆ ಇದೆ. ಮಾಧ್ಯಮ ವರದಿಯೊಂದರ ಪ್ರಕಾರ ಪ್ರತೀ ಲೀಟರ್‌ಗೆ ಪೆಟ್ರೋಲ್ ಬೆಲೆ 40 ಪೈಸೆ ಇಳಿಯಬಹುದು. ಆ ವರದಿ ಪ್ರಕಾರ ಇಂದು ನವೆಂಬರ್ 1ರಿಂದಲೇ ಹೊಸ ದರ ಜಾರಿಗೆ ಬರಬಹುದು ಎನ್ನಲಾಗಿದೆ.

 

ಝೀ ಬ್ಯುಸಿನೆಸ್‌ನ ವರದಿಯಲ್ಲಿ ಮೂಲಗಳನ್ನು ಮಾಹಿತಿ ಉಲ್ಲೇಖಿಸಿ ಪೆಟ್ರೋಲ್ ಬೆಲೆ ಇಳಿಕೆ ಸಾಧ್ಯತೆಯನ್ನು ತಿಳಿಸಲಾಗಿದೆ. ಒಂದು ವೇಳೆ ಇದು ನಿಜವೇ ಆದಲ್ಲಿ ಕಳೆದ ಏಳೆಂಟು ತಿಂಗಳಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಬೆಲೆ ತುಸು ಕಡಿಮೆ ಆಗಲಿದೆ. ಏಪ್ರಿಲ್ 7ರಿಂದ ಈಚೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡಲಾಗಿಲ್ಲ.

ಇತಿಹಾಸದಲ್ಲೇ ಮೊದಲು; ಸತತ 2 ಅವಧಿಯಲ್ಲಿ ಐಒಸಿಗೆ ನಷ್ಟ; ಕಾರಣ ಏನು?ಇತಿಹಾಸದಲ್ಲೇ ಮೊದಲು; ಸತತ 2 ಅವಧಿಯಲ್ಲಿ ಐಒಸಿಗೆ ನಷ್ಟ; ಕಾರಣ ಏನು?

ಇದೇ ಮಾಧ್ಯಮ ವರದಿ ಪ್ರಕಾರ ಮುಂದಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 2 ರೂಪಾಯಿಯಷ್ಟು ಕಡಿಮೆ ಆಗಬಹುದು. ಒಮ್ಮೆಗೇ 2 ರೂಪಾಯಿ ಇಳಿಸುವ ಬದಲು ಹಂತ ಹಂತವಾಗಿ ಬೆಲೆ ಇಳಿಕೆ ಮಾಡುವ ಸಾಧ್ಯತೆ ಎಂದು ಹೇಳಲಾಗಿದೆ.

ಕಚ್ಛಾ ತೈಲ ಬೆಲೆ ಇಳಿಕೆ

ಕಚ್ಛಾ ತೈಲ ಬೆಲೆ ಇಳಿಕೆ

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಗಳಲ್ಲಿ ಕಚ್ಛಾ ತೈಲ ಬೆಲೆ ಕಡಿಮೆಗೊಂಡಿರುವುದು ಭಾರತದಲ್ಲಿ ಪೆಟ್ರೋಲ್ ಬೆಲೆ ಇಳಿಕೆಗೆ ಕಾರಣವಾಗಬಹುದು. ರಷ್ಯಾ ಉಕ್ರೇನ್ ಯುದ್ಧದ ಪರಿಣಾಮವಾಗಿ ಈ ವರ್ಷದ ಆರಂಭದಲ್ಲಿ ಕ್ರೂಡ್ ಆಯಿಲ್ ಒಂದು ಬ್ಯಾರಲ್‌ಗೆ 139 ಡಾಲರ್ ದರಕ್ಕೆ ಏರಿತ್ತು. ನಂತರ ಬೆಲೆ ತಗ್ಗಿದ್ದು, ಈಚೆಗೆ ಹಲವು ದಿನಗಳಿಂದ ಬ್ರೆಂಟ್ ತೈಲ ಮಾರುಕಟ್ಟೆಯಲ್ಲಿ ಒಂದು ಬ್ಯಾರಲ್‌ಗೆ 95 ಡಾಲರ್ ಬೆಲೆ ಇದೆ. ಡಬ್ಲ್ಯೂಟಿಐ ಫ್ಯೂಚರ್ಸ್ ಮಾರುಕಟ್ಟೆಯಲ್ಲಿ ಒಂದು ಬ್ಯಾರಲ್ ಕಚ್ಛಾ ತೈಲ ಬೆಲೆ ನವೆಂಬರ್ 1ರಂದು 86.49 ಡಾಲರ್ ಬೆಲೆ ಪಡೆದಿದೆ.

ಭಾರತದ ಫೋರೆಕ್ಸ್ ಮೀಸಲು 2 ವರ್ಷದಲ್ಲೇ ಕಡಿಮೆ; ಬೇರೆ ದೇಶಗಳಲ್ಲಿ ಹೇಗಿದೆ ಸ್ಥಿತಿ?ಭಾರತದ ಫೋರೆಕ್ಸ್ ಮೀಸಲು 2 ವರ್ಷದಲ್ಲೇ ಕಡಿಮೆ; ಬೇರೆ ದೇಶಗಳಲ್ಲಿ ಹೇಗಿದೆ ಸ್ಥಿತಿ?

ಹಣದುಬ್ಬರ ಎಫೆಕ್ಟ್
 

ಹಣದುಬ್ಬರ ಎಫೆಕ್ಟ್

ಕೇಂದ್ರ ಸರ್ಕಾರಕ್ಕೆ ಈಗ ಹಣದುಬ್ಬರ ಏರಿಕೆಯ ತಲೆನೋವು ವಿಪರೀತವಾಗಿ ಕಾಡುತ್ತಿದೆ. ಕಳೆದ ಮೂರು ತ್ರೈಮಾಸಿಕ ಅವಧಿಯಲ್ಲಿ ಹಣದುಬ್ಬರ ನಿಗದಿತ ಮಿತಿಯಾದ ಶೇ. 6ಕ್ಕಿಂತ ಹೊರಗೇ ಹೋಗುತ್ತಿದೆ. ಇದು ಒಟ್ಟಾರೆ ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಪೆಟ್ರೋಲ್ ಬೆಲೆ ಇಳಿಕೆ ಸದ್ಯಕ್ಕೆ ಸಂದರ್ಭೋಚಿತ ಎಂಬ ಅಭಿಪ್ರಾಯ ಇದೆ. ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಿಂದ ಪರೋಕ್ಷವಾಗಿ ಹಲವು ಆಹಾರವಸ್ತುಗಳ ಬೆಲೆ ಇಳಿಕೆಗೊಂಡು ಅದರ ಪರಿಣಾಮವಾಗಿ ಹಣದುಬ್ಬರ ದರ ಕಡಿಮೆ ಆಗುವ ನಿರೀಕ್ಷೆ ಇದೆ.

ಮೇಲಾಗಿ ಕಚ್ಛಾ ತೈಲ ಬೆಲೆ ಹಲವಾರು ದಿನಗಳಿಂದ ಕಡಿಮೆ ಮಟ್ಟದಲ್ಲೇ ಇರುವುದರಿಂದ ಭಾರತದಲ್ಲಿ ಪೆಟ್ರೋಲ್ ಬೆಲೆ ಇಳಿಕೆ ನಿರೀಕ್ಷಿತವೇ.

 

ಪೆಟ್ರೋಲ್‌ ಬಳಕೆಯಲ್ಲಿ ಹೆಚ್ಚಳ

ಪೆಟ್ರೋಲ್‌ ಬಳಕೆಯಲ್ಲಿ ಹೆಚ್ಚಳ

ಭಾರತದಲ್ಲಿ ಕಳೆದ ಒಂದು ತಿಂಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬಳಕೆ ಹೆಚ್ಚಾಗಿದೆ. ಸೆಪ್ಟೆಂಬರ್-ಅಕ್ಟೋಬರ್‌ನ ಹಬ್ಬದ ಸೀಸನ್‌ನಲ್ಲಿ ಆರ್ಥಿಕತೆ ಗರಿಗೆದರಿದೆ. ಪಿಟಿಐ ವರದಿ ಪ್ರಕಾರ ಅಕ್ಟೋಬರ್ ಮೊದಲಾರ್ಧದಲ್ಲಿ ಹಿಂದಿನ ವರ್ಷದಕ್ಕೆ ಹೋಲಿಸಿದರೆ ಪೆಟ್ರೋಲ್, ಡೀಸೆಲ್ ಮಾರಾಟ ಶೇ. 22-26ರಷ್ಟು ಏರಿದೆ.

ಅಕ್ಟೋಬರ್ 1ರಿಂದ 15ರ ಅವಧಿಯಲ್ಲಿ ಭಾರತದಲ್ಲಿ 12.8 ಲಕ್ಷ ಟನ್‌ನಷ್ಟು ಪೆಟ್ರೋಲ್ ಮತ್ತು ಡೀಸೆಲ್ ಮಾರಾಟವಾಗಿತ್ತು. 2021ರಲ್ಲಿ ಇದೇ ಅವಧಿಯಲ್ಲಿ 10.5 ಲಕ್ಷ ಟನ್ ಪೆಟ್ರೋಲ್ ವಹಿವಾಟಾಗಿತ್ತೆನ್ನಲಾಗಿದೆ.

 

ಇಂದಿನ ದರ

ಇಂದಿನ ದರ

ಬೆಂಗಳೂರಿನಲ್ಲಿ ಸದ್ಯ ಪೆಟ್ರೋಲ್ ದರ ಒಂದು ಲೀಟರ್‌ಗೆ 101.94 ರೂಪಾಯಿ ಇದೆ. ನವದೆಹಲಿಯಲ್ಲಿ 96.72 ರೂ ಇದೆ. ಡೀಸೆಲ್ ಬೆಲೆ ಬೆಂಗಳೂರಿನಲ್ಲಿ ಲೀಟರ್‌ಗೆ 87.89 ರೂ ಇದ್ದರೆ ದೆಹಲಿಯಲ್ಲಿ 89.62 ರೂ ಇದೆ.

ಮಾಧ್ಯಮ ವರದಿಯಲ್ಲಿ ತಿಳಿಸಲಾಗಿರುವಂತೆ ಲೀಟರ್‌ಗೆ 40 ಪೈಸೆ ಬೆಲೆ ಇಳಿಕೆಯಾದರೆ ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗ 101.54 ಮತ್ತು 87.59 ರೂಪಾಯಿಗೆ ಇಳಿಯಬಹುದು.

 

English summary

Petrol and Diesel Prices May Come Down on November 1st, Says Report

Petrol and diesel prices may come down by 40 paise on November 1st, says a media report. It also said by quoting source that petrol price is likely to reduced by Rs 2 in coming days.
Story first published: Tuesday, November 1, 2022, 7:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X