For Quick Alerts
ALLOW NOTIFICATIONS  
For Daily Alerts

ತೈಲ ಬೇಡಿಕೆ 66% ಕುಸಿದರೂ, ಸತತ 25ನೇ ದಿನವೂ ಪೆಟ್ರೋಲ್-ಡೀಸೆಲ್ ದರದಲ್ಲಿ ಇಳಿಕೆ ಇಲ್ಲ!

|

ದೇಶದಲ್ಲಿ ಲಾಕ್‌ಡೌನ್‌ ಸಮಯದಲ್ಲಿ ತೈಲ ಬೇಡಿಕೆಯು ಭಾರೀ ಪ್ರಮಾಣದಲ್ಲಿ ಇಳಿಕೆಗೊಂಡರೂ ಸತತ 25ನೇ ದಿನವೂ ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಇಳಿಕೆ ಆಗಿಲ್ಲ

21 ದಿನಗಳ ಲಾಕ್‌ಡೌನ್‌ ಇಂದಾಗಿ ಏಪ್ರಿಲ್ ತಿಂಗಳಿನಲ್ಲಿ ತೈಲ ಬೇಡಿಕೆಯು ಸುಮಾರು 66 ಪರ್ಸೆಂಟ್‌ನಷ್ಟು ಕುಸಿದಿದೆ. ಇದರಿಂದಾಗಿ ತೈಲ ಕಂಪನಿಗಳು ಸೇರಿದಂತೆ ವಿಶ್ವದಾದ್ಯಂತ ತೈಲ ಉತ್ಪಾದಕರು ಲಕ್ಷಾಂತರ ಕೋಟಿ ನಷ್ಟ ಅನುಭವಿಸಿದ್ದಾರೆ. ಇಷ್ಟಾದರೂ ದೇಶದಲ್ಲಿ, ರಾಜ್ಯದಲ್ಲಿ ತೈಲ ಬೆಲೆ ಇಳಿಕೆಯಾಗಿಲ್ಲ. ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳದಲ್ಲಿ ವ್ಯಾಟ್ ಹೆಚ್ಚಳ ಮಾಡಿದ ಪರಿಣಾಮ ದರಗಳು 1 ರಿಂದ 1.5 ರುಪಾಯಿಯಷ್ಟು ಏರಿಕೆಯಾಗಿದೆ.

ಲಾಕ್‌ಡೌನ್ ಹಿನ್ನೆಲೆ ಅಗತ್ಯ ಸೇವೆಗಳ ವಿಭಾಗಕ್ಕೆ ಸೇರಿರುವವರು ಮಾತ್ರ ಹೆಚ್ಚು ಇಂಧನವನ್ನು ಖರೀದಿಸುತ್ತಿದ್ದಾರೆ. ಹೀಗಾಗಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೇಡಿಕೆಯು 66 ಪರ್ಸೆಂಟ್‌ನಷ್ಟು ಕಡಿಮೆಯಾಗಿದೆ. ಲಾಕ್‌ಡೌನ್ ತೆರವುಗೊಂಡ ಬಳಿಕ ಮತ್ತು ಸಾರ್ವಜನಿಕ ಸಾರಿಗೆ ಪುನರಾರಂಭಿಸಿದಾಗ ಬೇಡಿಕೆ ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

ತೈಲ ಬೇಡಿಕೆ 66% ಕುಸಿದರೂ, ಪೆಟ್ರೋಲ್-ಡೀಸೆಲ್ ದರದಲ್ಲಿ ಇಳಿಕೆ ಇಲ್ಲ!

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ದರವು ಲೀಟರ್‌ಗೆ ಎಷ್ಟಿದೆ ಎಂಬುದು ಈ ಕೆಳಕಂಡಂತಿದೆ.

ನಗರಪೆಟ್ರೋಲ್ ದರಡೀಸೆಲ್ ದರ
ಬೆಂಗಳೂರು73.5565.96
ದೆಹಲಿ69.5962.29
ಕೊಲ್ಕತ್ತಾ73.3065.62
ಮುಂಬೈ76.3166.21
ಚೆನ್ನೈ72.2865.71
ಗುರುಗಾವ್70.1862.05
ನೊಯ್ಡ72.0162.95
ಭುವನೇಶ್ವರ್68.4366.56
ಚಂಡೀಗಡ65.8259.30
ಹೈದ್ರಾಬಾದ್73.9767.82
ಜೈಪುರ75.7169.39
ಲಕ್ನೋ71.8162.76
ಪಾಟ್ನಾ74.5167.07
ತ್ರಿವೆಂಡ್ರಮ್72.6766.88

English summary

Petrol Diesel No Rates Cut For 25th Day

Petrol and diesel prices have been left unchanged for the last 25 days across most cities
Story first published: Friday, April 10, 2020, 10:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X