For Quick Alerts
ALLOW NOTIFICATIONS  
For Daily Alerts

PM CARES FUNDಗೆ ಉದಾರ ದೇಣಿಗೆ ನೀಡಿದವರ ಹೆಸರು ತಿಳಿಸಿ ಎಂದ ಚಿದಂಬರಂ

|

"ಪಿಎಂ CARES ಫಂಡ್ ಗೆ ಮಾರ್ಚ್ 26ರಿಂದ 31, 2020ರ ಮಧ್ಯೆ 5 ದಿನದಲ್ಲಿ 3076 ಕೋಟಿ ರುಪಾಯಿ ಬಂದಿದೆ ಎಂದು ಆಡಿಟರ್ಸ್ ಖಾತ್ರಿ ಪಡಿಸಿದ್ದಾರೆ. ಆದರೆ ಅಂಥ ಉದಾರ ದೇಣಿಗೆ ನೀಡಿದವರ ಹೆಸರನ್ನು ಏಕೆ ಬಯಲು ಮಾಡುತ್ತಿಲ್ಲ? ನಿಗದಿತ ಮೊತ್ತಕಿಂತ ಹೆಚ್ಚು ಹಣ ಪಡೆದಲ್ಲಿ ಎಲ್ಲ ಎನ್ ಜಿಒ ಅಥವಾ ಟ್ರಸ್ಟ್ ಗಳು ಬಹಿರಂಗ ಮಾಡಬೇಕು. ಈ ಜವಾಬ್ದಾರಿಯಿಂದ PM CARES FUNDನಿಂದ ಹೊರತಾಗಲು ಸಾಧ್ಯ?" ಎಂದು ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಪ್ರಶ್ನೆ ಮಾಡಿದ್ದಾರೆ.

"ಮೋದಿ ಸೃಷ್ಟಿಸಿದ ವಿಪತ್ತು": ರಾಹುಲ್ ಗಾಂಧಿ ಪಟ್ಟಿ ಮಾಡಿದ 6 ಸಮಸ್ಯೆ

ಈ ಬಗ್ಗೆ ಟ್ವೀಟ್ ಮಾಡಿರುವ ಚಿದಂಬರಂ, ದೇಣಿಗೆ ಪಡೆಯುವವರು ಯಾರು ಅಂತ ಗೊತ್ತಿದೆ. ದೇಣಿಗೆ ಪಡೆಯುವವರೇ ಟ್ರಸ್ಟಿ. ಆದರೆ ದೇಣಿಗೆ ನೀಡಿದವರ ಹೆಸರು ಬಹಿರಂಗ ಮಾಡುವುದಕ್ಕೆ ಟ್ರಸ್ಟಿ ಏಕೆ ಹೆದರುತ್ತಾರೆ? ಎಂದು ಪ್ರಶ್ನಿಸಿದ್ದಾರೆ. PM CARES ಫಂಡ್ ವೆಬ್ ಸೈಟ್ ನಲ್ಲಿ ಆಡಿಟ್ ವರದಿಯನ್ನು ಅಪ್ ಲೋಡ್ ಮಾಡಲಾಗಿದೆ. ಆದರೆ ದೇಶೀಯ ಹಾಗೂ ವಿದೇಶಿ ದೇಣಿಗೆದಾರರ ಹೆಸರನ್ನು ಬಹಿರಂಗ ಸರ್ಕಾರದಿಂದ ಮಾಡಿಲ್ಲ.

PM CARES FUND ಮಾರ್ಚ್ ನಲ್ಲಿ ಆರಂಭ

PM CARES FUND ಮಾರ್ಚ್ ನಲ್ಲಿ ಆರಂಭ

PM CARES FUND ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ ನಲ್ಲಿ ಆರಂಭಿಸಿದ್ದರು. ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಎದುರಾಗಿರುವುದರಿಂದ ಅದನ್ನು ನಿರ್ವಹಿಸಲು ಈ ನಿಧಿ ಸ್ಥಾಪಿಸಲಾಯಿತು. ಪ್ರಧಾನಿ ಮೋದಿ ಅವರು ಈ ಟ್ರಸ್ಟ್ ಅಧ್ಯಕ್ಷರಾದರೆ, ಸಂಪುಟದ ಹಿರಿಯ ಸಚಿವರು ಇದರ ಸದಸ್ಯರು.

ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಬರುವುದಿಲ್ಲ

ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಬರುವುದಿಲ್ಲ

ಕಳೆದ ಜೂನ್ ನಲ್ಲಿ PM CARES FUND, ಅದರ ಟ್ರಸ್ಟ್ ಒಪ್ಪಂದ ಇವುಗಳ ಬಗ್ಗೆ ಮಾಧ್ಯಮವೊಂದು ಪ್ರಶ್ನೆ ಕೇಳಿದಾಗ, ಈ ನಿಧಿಯು ಮಾಹಿತಿ ಹಕ್ಕು ಕಾಯ್ದೆ ಸಾರ್ವಜನಿಕರ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿಸಲಾಗಿತ್ತು. ಆ ಸಮಯದಲ್ಲಿ ಈ ಕುರಿತು ಆಕ್ಷೇಪಗಳು ಸಹ ಕೇಳಿಬಂದಿದ್ದವು.

ಆಡಿಟ್ ವರದಿಗೆ PMO ಅಧಿಕಾರಿ ಸಹಿ

ಆಡಿಟ್ ವರದಿಗೆ PMO ಅಧಿಕಾರಿ ಸಹಿ

ಆದರೆ, PM CARES ಪರವಾಗಿ ಆಡಿಟ್ ವರದಿಗೆ ಪ್ರಧಾನಮಂತ್ರಿ ಕಾರ್ಯಾಲಯದ ಅಧಿಕಾರಿಗಳು ಸಹಿ ಹಾಕಿದ್ದಾರೆ. PMO ಜಂಟಿ ಕಾರ್ಯದರ್ಶಿ ಶ್ರೀಕರ್ ಕೆ. ಪರ್ದೇಶಿ ಅವರು ಸಹಿ ಹಾಕಿದ್ದಾರೆ. ಇದರ ಜತೆಗೆ ಮೋದಿ ಅವರ ಖಾಸಗಿ ಕಾರ್ಯದರ್ಶಿ ಹಾರ್ದಿಕ್ ಶಾ ಕೂಡ ನಿಧಿಯ ಡೆಪ್ಯೂಟಿ ಸೆಕ್ರೆಟರಿ ಎಂದು ಸಹಿ ಮಾಡಿದ್ದಾರೆ.

English summary

PM CARES FUND: Why Generous Donors Names Not Disclosed, Ask Chidambaram

Congress leader P. Chidambaram asks government to disclose names of PM CARES fund donors.
Story first published: Wednesday, September 2, 2020, 16:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X