For Quick Alerts
ALLOW NOTIFICATIONS  
For Daily Alerts

ಗಮನಿಸಿ; ಪಿಎಂ ಕಿಸಾನ್ ಯೋಜನೆ- ಅನರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆ; ಈವರೆಗೆ ಪಡೆದ ಹಣ ಹಿಂದಿರುಗಿಸಬೇಕಾ?

|

ಸಣ್ಣ ಮತ್ತು ಮಧ್ಯಮ ರೈತಾಪಿ ವರ್ಗದವರ ಕೃಷಿ ಚಟುವಟಿಕೆಗಳಿಗೆ ನೆರವಾಗಲು ರೂಫಿಸಲಾಗಿರುವ ಪಿಎಂ ಕಿಸಾನ್ ಯೋಜನೆಯಲ್ಲಿ ಕೇಂದ್ರ ಸರ್ಕಾರ ಇತ್ತೀಚೆಗೆ 12ನೇ ಕಂತಿನ ಹಣ ಬಿಡುಗಡೆ ಮಾಡಿದೆ. ಈ ಯೋಜನೆಯಲ್ಲಿ ಸರ್ಕಾರ ಪ್ರತೀ ನಾಲ್ಕು ತಿಂಗಳಿಗೊಮ್ಮೆ 2 ಸಾವಿರ ರೂ ಹಣವನ್ನು ಬಿಡುಗಡೆ ಮಾಡುತ್ತದೆ. ಫಲಾನುಭವಿಗಳ ಬ್ಯಾಂಕ್ ಖಾತೆಗೆ ಒಂದು ವರ್ಷದಲ್ಲಿ ಒಟ್ಟು 6 ಸಾವಿರ ರೂ ಹಣ ನೇರವಾಗಿ ಸಂದಾಯವಾಗುತ್ತದೆ.

ಆದರೆ, ಪಿಎಂ ಕಿಸಾನ್ ಯೋಜನೆಗೆ ಯಾರು ಅರ್ಹರು, ಯಾರು ಅರ್ಹರಲ್ಲ ಎಂಬುದನ್ನು ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ. ಸಾಂಸ್ಥಿಕ ಜಮೀನುದಾರರು, ಸಾಂವಿಧಾನಿಕ ಸ್ಥಾನಗಳನ್ನು ಹೊಂದಿದವರು, ಶಾಸಕರು, ಸಂಸದರು, ಮೇಯರ್, ಜಿಪಂ ಅಧ್ಯಕ್ಷರು ಇತ್ಯಾದಿ ಹುದ್ದೆಗಳನ್ನು ಪಡೆದವರು; ಸರ್ಕಾರಿ ಉದ್ಯೋಗಿಗಳು (ಡಿ ಗ್ರೂಪ್ ಇತ್ಯಾದಿ ಕೆಳದರ್ಜೆಯ ನೌಕರಿ), ಆದಾಯ ತೆರಿಗೆ ಪಾವತಿಸುವವರು, ವೈದ್ಯರು ಇತ್ಯಾದಿ ವೃತ್ತಿಪರರು ಪಿಎಂ ಕಿಸಾನ್ ಯೋಜನೆಯಲ್ಲಿ ನೆರವು ಪಡೆಯುವಂತಿಲ್ಲ ಎಂದು ಬಹಳ ಸ್ಪಷ್ಟವಾಗಿ ಹೇಳಿದೆ. ಇದರಲ್ಲಿ ಹಾಲಿ ಮತ್ತು ಮಾಜಿಗಳೂ ಸೇರುತ್ತಾರೆ. ಹಾಗೆಯೇ, ಮಾಸಿಕವಾಗಿ 10 ಸಾವಿರ ರೂಗಿಂತ ಹೆಚ್ಚು ಪಿಂಚಣಿ ಪಡೆಯುತ್ತಿರುವ ನಿವೃತ್ತ ಸರ್ಕಾರಿ ಉದ್ಯೋಗಿಗಳೂ ಫಲಾನುಭವಿಗಳಾಗಲು ಅರ್ಹರಲ್ಲ.

 ಗಮನಿಸಿ: ಪಿಎಂ ಕಿಸಾನ್ 13ನೇ ಕಂತಿಗೂ ಮುನ್ನ ನಿಯಮ ಬಿಗಿ! ಗಮನಿಸಿ: ಪಿಎಂ ಕಿಸಾನ್ 13ನೇ ಕಂತಿಗೂ ಮುನ್ನ ನಿಯಮ ಬಿಗಿ!

ಆದರೂ ಕೂಡ ಲಕ್ಷಾಂತರ ಜನರು ಯೋಜನೆಯ ಫಲಾನುಭವಿಗಳಾಗಲು ಅನರ್ಹರಾದರೂ ನೊಂದಾಯಿಸಿಕೊಂಡು ಸರ್ಕಾರದಿಂದ ನಿಯಮಿತವಾಗಿ ಹಣ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ. ಕರ್ನಾಟಕದಲ್ಲಿ ಇಂಥ ನಾಲ್ಕು ಲಕ್ಷಕ್ಕೂ ಅಧಿಕ ಅನರ್ಹ ಫಲಾನುಭವಿಗಳು ಪತ್ತೆಯಾಗಿದ್ದಾರೆ. ಇವರಿಗೆ ಈವರೆಗೂ ಪಿಎಂ ಕಿಸಾನ್ ಯೋಜನೆ ಅಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಒಟ್ಟು 442 ಕೋಟಿ ರೂ ವರ್ಗವಾಗಿರುವುದು ತಿಳಿದುಬಂದಿದೆ,

ರಾಜ್ಯ ಸರ್ಕಾರದ ಅಧಿಕಾರಿಗಳು ಇಂಥ ಅನರ್ಹ ರೈತರನ್ನು ಗುರುತಿಸಿದ್ದು, ಅಂಥವರನ್ನು ಸಂಪರ್ಕಿಸಿ ವಾಪಸ್ ಹಣ ವಸೂಲಿ ಮಾಡಲಿದ್ದಾರೆ ಎಂಬ ಸುದ್ದಿ ಇದೆ. ಸರ್ಕಾರ ಈಗಾಗಲೇ ಇಂಥ ಅನರ್ಹ ರೈತರನ್ನು ಗುರುತಿಸಿ ಪಟ್ಟಿ ಬಿಡುಗಡೆ ಮಾಡುತ್ತಿದೆ.

ಬಿಹಾರದ ಪಟ್ಟಿ

ಬಿಹಾರದ ಪಟ್ಟಿ

ಬಿಹಾರ ರಾಜ್ಯದ ಸರ್ಕಾರ ಈಗಾಗಲೇ ಇಂಥ ಪಟ್ಟಿ ಮಾಡಿದೆ. ಈ ಪಟ್ಟಿಯಲ್ಲಿರುವ ಜನರು ಈವರೆಗೆ ಸ್ವೀಕರಿಸಿದ ಎಲ್ಲಾ ಹಣವನ್ನು ಹಿಂದಿರುಗಿಸಬೇಕೆಂದು ತಿಳಿಸಿ ಐಎಫ್‌ಎಸ್‌ಸಿ ಕೋಡ್ ಸಹಿತ ಎರಡು ಅಕೌಂಟ್ ನಂಬರ್‌ಗಳನ್ನು ನೀಡಿದೆ. ಈ ಖಾತೆಗೆ ಹಣ ವರ್ಗಾಯಿಸಿದ ಬಳಿಕ ಅದರ ಯುಟಿಆರ್ ರಿಸಿಪ್ಟನ್ನು ಜಿಲ್ಲಾ ಕೃಷಿ ಅಧಿಕಾರಿ ಅಥವಾ ಕೃಷಿ ಸಂಘಟಕರಿಗೆ ಸಲ್ಲಿಸುವಂತೆ ಬಿಹಾರ ಸರ್ಕಾರ ಸೂಚಿಸಿದೆ. ಬಿಹಾರ ಸರ್ಕಾರದ ಪೋರ್ಟಲ್‌ವೊಂದರಲ್ಲಿ ಅನರ್ಹ ಫಲಾನುಭವಿಗಳ ಪಟ್ಟಿಯನ್ನು ಈ ಕೆಳಗಿನ ಕ್ರಮದ ಮೂಲಕ ವೀಕ್ಷಿಸಬಹುದು.

1) ವೆಬ್‌ಸೈಟ್ ವಿಳಾಸ: https://dbtagriculture.bihar.gov.in
2) ಈ ಪೋರ್ಟಲ್‌ಗೆ ಹೋಗಿ ಅಲ್ಲಿ ಅಪ್ಲಿಕೇಶನ್ ಸ್ಟೇಟಸ್ ಅಡಿಯಲ್ಲಿ ಪಿಎಂ ಕಿಸಾನ್ ಟ್ಯಾಕ್ಸ್ ಇನ್‌ಎಲಿಜಬಲ್ ಫಾರ್ಮರ್ಸ್ ಮೇಲೆ ಕ್ಲಿಕ್ ಮಾಡಿ
3) ನಿಮ್ಮ ನೊಂದಾಯಿತ ಸಂಖ್ಯೆ ಅಥವಾ 13 ಅಂಕಿ ನಂಬರ್ ಅನ್ನು ನಮೂದಿಸಿ ಸರ್ಚ್ ಕೊಡಿ. ಅದರಲ್ಲಿ ನೀವು ಫಲಾನುಭವಿಗಳೋ ಅಲ್ಲವೋ ಎಂಬ ಮಾಹಿತಿ ಲಭ್ಯವಾಗುತ್ತದೆ.

 

ರಾಜ್ಯವಾರು ಪಟ್ಟಿ

ರಾಜ್ಯವಾರು ಪಟ್ಟಿ

ಕರ್ನಾಟಕ ಸರ್ಕಾರದಿಂದ ಪಿಎಂ ಕಿಸಾನ್ ಯೋಜನೆಯ ಅನರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆ ಮಾಡಲಾಗಿಲ್ಲ. ಆದರೆ, ಪಿಎಂ ಕಿಸಾನ್ ಯೋಜನೆಯ ಪೋರ್ಟಲ್‌ನಲ್ಲಿ ಪಟ್ಟಿ ಹುಡುಕಲು ಪ್ರಯತ್ನಿಸಬಹುದು.

1) ಪಿಎಂ ಕಿಸಾನ್ ಪೋರ್ಟಲ್‌ಗೆ ಹೋಗಿ
2) ಅಲ್ಲಿ ನಡುವಿನ ಭಾಗದಲ್ಲಿ ಡ್ಯಾಷ್‌ಬೋರ್ಡ್ ಕಾಣಿಸಬಹುದು. ಅದಿದ್ದರೆ ಅದರ ಮೇಲೆ ಕ್ಲಿಕ್ ಮಾಡಿ
3) ಆಗ ಕಾಣುವ ನಾಲ್ಕು ಆಯ್ಕೆಗಳಲ್ಲಿ ಒಂದು ಆರಿಸಿ
4) ನಿಮ್ಮ ರಾಜ್ಯ, ಜಲ್ಲೆ, ತಾಲೂಕು, ಗ್ರಾಮ ಇತ್ಯಾದಿ ವಿವರ ನೀಡಿ ಬಳಿಕ "ಶೋ" ಮೇಲೆ ಕ್ಲಿಕ್ ಮಾಡಿ
5) ಆಧಾರ್ ಸ್ಟೇಟಸ್‌ನಲ್ಲಿ 'ರಿಜೆಕ್ಟೆಡ್' ಆಯ್ಕೆ ಮಾಡಿದರೆ ಒಂದು ಪಟ್ಟಿ ಬರುತ್ತದೆ.

 

ನೇರ ಲಿಂಕ್

ನೇರ ಲಿಂಕ್

ನಿಮಗೆ ಪಿಎಂ ಕಿಸಾನ್ ಯೋಜನೆಯಲ್ಲಿ ರಿಜೆಕ್ಟೆಡ್ ಲಿಸ್ಟ್ ಸಿಗಲಿಲ್ಲವೆಂದರೆ ಅಥವಾ ಡ್ಯಾಷ್‌ಬೋರ್ಡ್ ಕಾಣಿಸಲಿಲ್ಲವೆಂದರೆ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಎಂದು ಪರಿಶೀಲಿಸಬಹುದು.

ಅದರ ಲಿಂಕ್ ಇಲ್ಲಿದೆ: https://pmkisan.gov.in/rpt_beneficiarystatus_pub.aspx
ಇಲ್ಲಿಗೆ ಹೋಗಿ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ತಾಲೂಕು, ಗ್ರಾಮ ಆಯ್ಕೆ ಮಾಡಿದರೆ ಫಲಾನುಭವಿಗಳ ಪಟ್ಟಿ ಸಿಗುತ್ತದೆ.

ಒಂದು ವೇಳೆ ನಿಮ್ಮ ಹೆಸರು ರಿಜೆಕ್ಟೆಡ್ ಲಿಸ್ಟ್‌ನಲ್ಲಿದ್ದರೆ ಯಾವ ಕಾರಣಕ್ಕೆ ರಿಜೆಕ್ಟ್ ಆಗಿದೆ ಎಂದು ಕಾರಣ ತಿಳಿಯಬಹುದು. ಆದಾಯ ತೆರಿಗೆ ಪಾವತಿದಾರರೆಂಬ ಕಾರಣ ಇದ್ದು ನೀವು ತೆರಿಗೆ ಪಾವತಿಸಿಲ್ಲ ಎಂಬುದಕ್ಕೆ ಪುರಾವೆ ಒದಗಿಸಬೇಕಾಗುತ್ತದೆ. ಇ-ಕೆವೈಸಿ ವೇಳೆ ಆಧಾರ್ ಇತ್ಯಾದಿ ದಾಖಲೆಗಳ ಸಲ್ಲಿಕೆಯಲ್ಲಿ ದೋಷ ಇದ್ದರೆ ಅದನ್ನು ಸರಿಪಡಿಸಿ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.

 

English summary

PM Kisan Yojana: These Farmers Need To Return Installment Amount; Check Ineligible List

Pradhan Mantri Kisan Samman Nidhi Yojana beneficiaries who have been found ineligible by the government for paying income tax or for other reasons must return the amount received so far to the government.
Story first published: Wednesday, November 23, 2022, 13:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X