For Quick Alerts
ALLOW NOTIFICATIONS  
For Daily Alerts

ಪ್ರಧಾನಿ ಮೋದಿಯಿಂದ ಡಿ. 25ಕ್ಕೆ ರೈತರಿಗಾಗಿ ಪಿಎಂ ಕಿಸಾನ್ ನಿಧಿ 18,000 ಕೋಟಿ ರು. ಬಿಡುಗಡೆ

|

ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ- ಕಿಸಾನ್) ಯೋಜನೆ ಅಡಿಯಲ್ಲಿ ಡಿಸೆಂಬರ್ 25ನೇ ತಾರೀಕಿನಂದು 18,000 ಕೋಟಿ ರುಪಾಯಿ ಮೊತ್ತವನ್ನು ಮುಂದಿನ ಕಂತಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಲಿದ್ದಾರೆ. ಶುಕ್ರವಾರ ಮಧ್ಯಾಹ್ನದಂದು ಕಾನ್ಫರೆನ್ಸ್ ಮೂಲಕ ಮೋದಿ ಹಣ ಬಿಡುಗಡೆ ಮಾಡುತ್ತಾರ್.

 

ಪಿಎಂ ಕಿಸಾನ್ ನಿಧಿ ಯೋಜನೆಯು ರೈತರಿಗೆ ನೇರವಾಗಿ ಹಣ ವರ್ಗಾವಣೆ ಮಾಡುವ ಸ್ಕೀಮ್ ಆಗಿದೆ. ಒಂಬತ್ತು ಕೋಟಿಗೂ ಹೆಚ್ಚು ರೈತ ಕುಟುಂಬಗಳಿಗೆ 18,000 ಕೋಟಿ ರುಪಾಯಿಯನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯದಿಂದ (ಪಿಎಂಒ) ಖಾತ್ರಿ ಪಡಿಸಿದೆ.

 

ಈ ರಾಜ್ಯದಲ್ಲಿರುವ PM-Kisan ಫಲಾನುಭವಿಗಳು 11 ರೈತರು ಮಾತ್ರಈ ರಾಜ್ಯದಲ್ಲಿರುವ PM-Kisan ಫಲಾನುಭವಿಗಳು 11 ರೈತರು ಮಾತ್ರ

ಈ ಕಾರ್ಯಕ್ರಮದ ವೇಳೆಯೇ ಆರು ರಾಜ್ಯಗಳ ರೈತರ ಜತೆಗೆ ಪ್ರಧಾನಿ ಸಂವಾದ ನಡೆಸಲಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯವು ಹೇಳಿಕೆಯಲ್ಲಿ ತಿಳಿಸಲಾಗಿದೆ. ಪಿಎಂ- ಕಿಸಾನ್ ಯೋಜನೆ ಬಗ್ಗೆ ರೈತರು ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಮೋದಿಯಿಂದ ಡಿ.25ಕ್ಕೆ ರೈತರಿಗೆ PM ಕಿಸಾನ್ ನಿಧಿ 18000 ಕೋಟಿ ಬಿಡುಗಡೆ

ಪಿಎಂ- ಕಿಸಾನ್ ಯೋಜನೆ ಆರಂಭವಾದದ್ದು ಕಳೆದ ವರ್ಷ ಫೆಬ್ರವರಿಯಲ್ಲಿ. ಕೇಂದ್ರ ಸರ್ಕಾರದ ಈ ಯೋಜನೆಗೆ ಶೇಕಡಾ ನೂರರಷ್ಟು ಸರ್ಕಾರದಿಂದ ಹಣ ಬರುತ್ತದೆ. ಅರ್ಹ ರೈತರಿಗೆ ವರ್ಷಕ್ಕೆ ಮೂರು ಸಮಾನ ಕಂತುಗಳಲ್ಲಿ ತಲಾ 2000 ರುಪಾಯಿಯಂತೆ 6000 ರುಪಾಯಿ ನೀಡಲಾಗುತ್ತದೆ. ಎರಡು ಹೆಕ್ಟೇರ್ ನೊಳಗೆ (4.94211 ಎಕರೆ) ಭೂಮಿ ಹೊಂದಿರುವ ಕುಟುಂಬಕ್ಕೆ ಈ ಸ್ಕೀಂ ಅನ್ವಯ ಆಗುತ್ತದೆ. ಮೊತ್ತವು ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುತ್ತದೆ.

English summary

PM Modi Will Release Next Installment Rs 18000 Crore To Farmers Family On December 25

PM Narendra Modi will release next installment of Rs 18000 crore on December 25 for over 9 crore farmers family.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X