For Quick Alerts
ALLOW NOTIFICATIONS  
For Daily Alerts

ಕೋವಿಡ್ ಲಾಕ್‌ಡೌನ್ ಸಮಯದಲ್ಲಿ 20 ಬಿಲಿಯನ್ ಡಾಲರ್ ಹೂಡಿಕೆ

|

ಭಾರತದಲ್ಲಿ ಮುಕ್ತವಾಗಿ ಹೂಡಿಕೆ ಮಾಡಲು ಅಮೆರಿಕದ ಸಂಸ್ಥೆಗಳನ್ನು ಬುಧವಾರ ಪ್ರಧಾನಿ ನರೇಂದ್ರ ಮೋದಿ ಕೇಳಿಕೊಂಡಿದ್ದಾರೆ. ಅವರು ಯುಎಸ್-ಇಂಡಿಯಾ ಬಿಸಿನೆಸ್ ಕೌನ್ಸಿಲ್ ಆಯೋಜಿಸಿದ್ದ ಭಾರತ-ಐಡಿಯಾಸ್ ಶೃಂಗಸಭೆಯಲ್ಲಿ ಮುಖ್ಯ ಭಾಷಣ ಮಾಡುವಾಗ ಈ ಭರವಸೆಯನ್ನು ಹೂಡಿಕೆದಾರರಿಗೆ ಹೇಳಿದ್ದಾರೆ.

ಭಾರತವನ್ನು ದೊಡ್ಡ ಹೂಡಿಕೆ ತಾಣವಾಗಿ ಚಿತ್ರಿಸಿದ ಅವರು, ಕೋವಿಡ್ ಲಾಕ್ ಡೌನ್ ಸಮಯದಲ್ಲಿ, ಭಾರತವು 20 ಬಿಲಿಯನ್ ಡಾಲರ್ ಹೂಡಿಕೆಯನ್ನು ಪಡೆದುಕೊಂಡಿದೆ ಎಂದು ಮೋದಿ ಹೇಳಿದ್ದಾರೆ.

ಐಬಿಎಂ ಸಿಇಓ ಅರವಿಂದ ಕೃಷ್ಣ ಜೊತೆ ಪ್ರಧಾನಿ ಮೋದಿ ಸಂವಾದ: ಏನು ಹೇಳಿದರು?ಐಬಿಎಂ ಸಿಇಓ ಅರವಿಂದ ಕೃಷ್ಣ ಜೊತೆ ಪ್ರಧಾನಿ ಮೋದಿ ಸಂವಾದ: ಏನು ಹೇಳಿದರು?

ಸರ್ಕಾರವು ಹೂಡಿಕೆದಾರರಿಗೆ ಅನುಕೂಲವಾಗುತ್ತಿರುವ ವಿಧಾನಗಳು ಮತ್ತು ಮೂಲಸೌಕರ್ಯ, ವಾಯುಯಾನ, ರಕ್ಷಣಾ ಮತ್ತು ಬಾಹ್ಯಾಕಾಶ ಸಂಶೋಧನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಭರವಸೆಯ ಬೆಳವಣಿಗೆಯನ್ನು ಅವರು ಸೂಚಿಸಿದ್ದಾರೆ.

ಜಗತ್ತಿಗೆ ಆಶಾವಾದವಿದೆ

ಜಗತ್ತಿಗೆ ಆಶಾವಾದವಿದೆ

ಇಂದು, ಭಾರತದ ಬಗ್ಗೆ ಜಗತ್ತಿಗೆ ಆಶಾವಾದವಿದೆ. ಇದಕ್ಕೆ ಕಾರಣ ಭಾರತವು ಮುಕ್ತತೆ, ಅವಕಾಶಗಳ ಮತ್ತು ಆಯ್ಕೆಗಳ ಪರಿಪೂರ್ಣ ಸಂಯೋಜನೆಯನ್ನು ನೀಡುತ್ತದೆ ಎಂದು ಅವರು ಭಾರತ-ಐಡಿಯಾಸ್ ಶೃಂಗಸಭೆಯಲ್ಲಿ ಮುಖ್ಯ ಭಾಷಣ ಮಾಡುವಾಗ ಹೇಳಿದರು.

ಗರಿಷ್ಠ ಮಟ್ಟವನ್ನು ತಲುಪುತ್ತಿದ್ದೇವೆ

ಗರಿಷ್ಠ ಮಟ್ಟವನ್ನು ತಲುಪುತ್ತಿದ್ದೇವೆ

ಪ್ರತಿ ವರ್ಷ, ನಾವು ವಿದೇಶಿ ನೇರ ಹೂಡಿಕೆಯಲ್ಲಿ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪುತ್ತಿದ್ದೇವೆ. ಪ್ರತಿ ವರ್ಷ ಹಿಂದಿನದಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಅವರು ಹೇಳಿದರು. ಉದಾಹರಣೆಗಳನ್ನು ನೀಡಿ, 2019-20ರಲ್ಲಿ ಭಾರತದಲ್ಲಿ ಎಫ್‌ಡಿಐ ಒಳಹರಿವು 74 ಬಿಲಿಯನ್ ಡಾಲರ್ ಆಗಿತ್ತು. ಇದು ಹಿಂದಿನ ವರ್ಷಕ್ಕಿಂತ ಶೇಕಡಾ 20 ರಷ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು.

ಜಾಗತಿಕ ಆರ್ಥಿಕತೆಯು ದಕ್ಷತೆ ಮತ್ತು ಆಪ್ಟಿಮೈಸೇಶನ್

ಜಾಗತಿಕ ಆರ್ಥಿಕತೆಯು ದಕ್ಷತೆ ಮತ್ತು ಆಪ್ಟಿಮೈಸೇಶನ್

ಕೊರೊನಾವೈರಸ್ ನಂತರದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಪಿಎಂ ಮೋದಿ, ಜಾಗತಿಕ ಆರ್ಥಿಕತೆಯು ದಕ್ಷತೆ ಮತ್ತು ಆಪ್ಟಿಮೈಸೇಶನ್ ಬಗ್ಗೆ ಹೆಚ್ಚು ಗಮನಹರಿಸಿದೆ ಎಂದು ಜನರಿಗೆ ಕಲಿಸಿದೆ ಎಂದು ಹೇಳಿದರು.

ಮೈಕ್ ಪೊಂಪಿಯೊ

ಮೈಕ್ ಪೊಂಪಿಯೊ

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ, ವಿದೇಶಾಂಗ ಸಚಿವ ಎಸ್.ಜೈಶಂಕರ್, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್, ವಾಣಿಜ್ಯ ಮತ್ತು ಕೈಗಾರಿಕೆ ಮತ್ತು ರೈಲ್ವೆ ಸಚಿವ ಪಿಯೂಷ್ ಗೋಯಲ್ ಮತ್ತು ಯುಎಸ್ ಮತ್ತು ಭಾರತದ ಸರ್ಕಾರಿ ಅಧಿಕಾರಿಗಳು ಭಾಗವಹಿಸಿದ್ದರು.

English summary

PM Narendra Modi Has Said That India Has Invested 20 Billion Dollor During The Covid Lockdown

PM Narendra Modi Has Said That India Has Invested 20 Billion Dollor During The Covid Lockdown
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X