For Quick Alerts
ALLOW NOTIFICATIONS  
For Daily Alerts

ಪಿಎನ್ ಬಿಯಿಂದ ಮನೆ ಸಾಲ ಬಡ್ಡಿ ದರ 7.10%, ಕಾರು ಸಾಲ 7.55%

|

ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಂದ (ಪಿಎನ್ ಬಿ) ಗ್ರಾಹಕರಿಗೆ ಬುಧವಾರದಂದು 'ಫೆಸ್ಟಿವಲ್ ಬೊನಾಂಜಾ ಆಫರ್' ಆರಂಭಿಸಲಾಗಿದೆ. ಈಚೆಗೆ ಸಾಲದ ಮೇಲಿನ ಬಡ್ಡಿ ದರದಲ್ಲಿ ಕಡಿಮೆ ಆಗಿದ್ದರೂ ಸಾಲ ಪಡೆಯುವವರು ಕಡಿಮೆ ಆಗಿದ್ದಾರೆ. ಈಗ 'ಫೆಸ್ಟಿವಲ್ ಬೊನಾಂಜಾ ಆಫರ್' ಅಡಿಯಲ್ಲಿ ಬ್ಯಾಂಕ್ ನಿಂದ ಹೌಸಿಂಗ್ ಲೋನ್, ಕಾರು ಲೋನ್ ನಂಥವಕ್ಕೆ ಪ್ರೊಸೆಸಿಂಗ್ ಫೀ ಹಾಗೂ ಡಾಕ್ಯುಮೆಂಟೇಶನ್ ಶುಲ್ಕವನ್ನು ಮನ್ನಾ ಮಾಡಲಾಗಿದೆ.

ಈ ವರ್ಷದ ಕೊನೆ ತನಕ, ಅಂದರೆ ಡಿಸೆಂಬರ್ 31, 2020ರ ವರೆಗೆ ಅದ್ಭುತವಾದ ಆಫರ್ ಇದೆ. ದೇಶದಾದ್ಯಂತ ಇರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ನ 10,897 ಶಾಖೆಗಳು ಅಥವಾ ಡಿಜಿಟಲ್ ಚಾನೆಲ್ ಮೂಲಕ ಈ ಆಫರ್ ಗಳನ್ನು ಪಡೆಯಬಹುದು ಎಂದು ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಆಸ್ತಿ ಅಡಮಾನದ ಸಾಲ ಎಂದರೇನು? ಬಡ್ಡಿ, ಮರುಪಾವತಿ ಮತ್ತಿತರ ಮಾಹಿತಿಆಸ್ತಿ ಅಡಮಾನದ ಸಾಲ ಎಂದರೇನು? ಬಡ್ಡಿ, ಮರುಪಾವತಿ ಮತ್ತಿತರ ಮಾಹಿತಿ

ಗೃಹ ಸಾಲದ ಮೇಲೆ ಈ ತನಕ ಗ್ರಾಹಕರು ಪ್ರೊಸೆಸಿಂಗ್ ಫೀ ಸಾಲದ ಮೊತ್ತದ ಮೇಲೆ 0.35% ಅಥವಾ ಗರಿಷ್ಠ 15,000 ರುಪಾಯಿ ಪಾವತಿಸಬೇಕಿತ್ತು. ಇದನ್ನು ಹೊರತುಪಡಿಸಿ ಡಾಕ್ಯುಮೆಂಟೇಶನ್ ಶುಲ್ಕ ಇತ್ತು. ಈಗ ಕಾರಿನ ಒಟ್ಟು ಸಾಲದ ಮೇಲೆ ಗ್ರಾಹಕರಿಗೆ 0.25% ಉಳಿತಾಯ ಆಗುತ್ತದೆ. ಇನ್ನು ಆಸ್ತಿ ಅಡಮಾನ ಮಾಡಿ, ಪಡೆಯುವ ಸಾಲಕ್ಕೆ- ಮೈಪ್ರಾಪರ್ಟಿ ಲೋನ್ ನಲ್ಲಿ ಸಾಲದ ಮೊತ್ತದ ಮೇಲೆ 1 ಲಕ್ಷ ರುಪಾಯಿ ತನಕ ಉಳಿತಾಯ ಆಗುತ್ತದೆ.

ಪಿಎನ್ ಬಿಯಿಂದ ಮನೆ ಸಾಲ ಬಡ್ಡಿ ದರ 7.10%, ಕಾರು ಸಾಲ 7.55%

ಪಂಜಾಬ್ ನ್ಯಾಷನಲ್ ಬ್ಯಾಂಕ್ ಈಗ ಗೃಹ ಸಾಲವನ್ನು ವಾರ್ಷಿಕ 7.10% ಹಾಗೂ ಕಾರು ಲೋನ್ ವಾರ್ಷಿಕ 7.55%ನಲ್ಲಿ ವಿತರಣೆ ಮಾಡುತ್ತಿದೆ. ಸೆಪ್ಟೆಂಬರ್ 1, 2020ರಿಂದ ಇದು ಜಾರಿಗೆ ಬಂದಿದೆ. ಈ ಬಾರಿ ಹಬ್ಬದ ಋತುವಿನಲ್ಲಿ ಸಾಲಕ್ಕೆ ಬೇಡಿಕೆ ಬರಬಹುದು ಹಾಗೂ ಗ್ರಾಹಕರು ಹೆಚ್ಚು ಖರ್ಚು ಮಾಡಬಹುದು ಎಂಬ ನಿರೀಕ್ಷೆ ಬ್ಯಾಂಕ್ ಗೆ ಇದೆ.

English summary

PNB Festival Bonanza Offer On Products Like Housing And Car Loan

State owned Punjab National Bank (PNB) launched 'Festival bonanza offer' on retail loan products like housing, car loans.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X