For Quick Alerts
ALLOW NOTIFICATIONS  
For Daily Alerts

10 ರು. ಪ್ರತಿ ಷೇರಿಗೆ ತಲಾ 100 ರು. ಡಿವಿಡೆಂಡ್ ಘೋಷಿಸಿದ ಪಾಲಿಪ್ಲೆಕ್ಸ್ ಕಾರ್ಪೊರೇಷನ್

|

ನೋಯ್ಡಾ ಮೂಲದ ಪಾಲಿಪ್ಲೆಕ್ಸ್ ಕಾರ್ಪೊರೇಷನ್ ನಿಂದ ಬುಧವಾರ 10 ರುಪಾಯಿ ಮುಖಬೆಲೆಯ ಪ್ರತಿ ಷೇರಿಗೆ ತಲಾ 100 ರುಪಾಯಿ ಮಧ್ಯಂತರ ಡಿವಿಡೆಂಡ್ ಘೋಷಣೆ ಮಾಡಲಾಗಿದೆ. ಪ್ಯಾಕೇಜಿಂಗ್, ಎಲೆಕ್ರಿಕಲ್ ಮತ್ತು ಇತರ ಕೈಗಾರಿಕಾ ಅಪ್ಲಿಕೇಷನ್ ಗಳಿಗಾಗಿ ಬಯಾಕ್ಸಿಯಲಿ ಓರಿಯೆಂಟೆಡ್ ಪಾಲಿಯೆಸ್ಟರ್ (BOPET) ಫಿಲ್ಮ್ ತಯಾರಿಕಾ ಕಂಪೆನಿ ಇದು.

 

ಬ್ಯಾಂಕ್ ಬಡ್ಡಿಗಿಂತ ಉತ್ತಮ ಡಿವಿಡೆಂಡ್ ನೀಡಬಹುದಾದ ಐದು ಕಂಪೆನಿಗಳುಬ್ಯಾಂಕ್ ಬಡ್ಡಿಗಿಂತ ಉತ್ತಮ ಡಿವಿಡೆಂಡ್ ನೀಡಬಹುದಾದ ಐದು ಕಂಪೆನಿಗಳು

ಸ್ಟಾಕ್ ಎಕ್ಸ್ ಚೇಂಜ್ ಫೈಲಿಂಗ್ ನಲ್ಲಿ ಕಂಪೆನಿ ಈ ಬಗ್ಗೆ ತಿಳಿಸಿದೆ. 2020- 21ನೇ ಸಾಲಿನಲ್ಲಿ ಘೋಷಣೆ ಮಾಡುತ್ತಿರುವ ಮೂರನೇ ಮಧ್ಯಂತರ ಡಿವಿಡೆಂಡ್ (ವಿಶೇಷ) ಇದು. 10 ರು. ಮುಖಬೆಲೆಯ ಷೇರಿಗೆ ತಲಾ 100 ರು. ಡಿವಿಡೆಂಡ್ ಘೋಷಣೆ ಮಾಡಲಾಗಿದೆ. ಇದಕ್ಕೆ ಟಿಡಿಎಸ್ ಅನ್ವಯ ಆಗುತ್ತದೆ.

 
10 ರು. ಷೇರಿಗೆ ತಲಾ 100 ರು. ಡಿವಿಡೆಂಡ್ ಘೋಷಿಸಿದ ಪಾಲಿಪ್ಲೆಕ್ಸ್

ಇನ್ನೂ ಮುಂದುವರಿದು ಈ ಬಗ್ಗೆ ಮಾಹಿತಿ ನೀಡಿರುವ ಕಂಪೆನಿ, ಮಧ್ಯಂತರ ಲಾಭಾಂಶ ವಿತರಣೆಗೆ ರೆಕಾರ್ಡ್ ದಿನಾಂಕ ಎಂದು ಫೆಬ್ರವರಿ 19, 2021 ಅನ್ನು ನಿಗದಿ ಮಾಡಲಾಗಿದೆ. ಈ ಘೋಷಣೆ ನಂತರ ಪಾಲಿಪ್ಲೆಕ್ಸ್ ಕಾರ್ಪೊರೇಷನ್ ಷೇರು ಬುಧವಾರ ಆರಂಭದ ವಹಿವಾಟಿನಲ್ಲಿ 17.5% ಏರಿಕೆ ಕಂಡು, ವಾರ್ಷಿಕ ಗರಿಷ್ಠ ಮಟ್ಟವಾದ ರು. 882 ತಲುಪಿತ್ತು.

English summary

Polyplex Corporation Announces Rs 100 Interim Dividend Each For Rs 10 Face Value Share

Polyplex Corporation declare Rs 100 as interim dividend for each Rs 10 face value share on Wednesday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X