For Quick Alerts
ALLOW NOTIFICATIONS  
For Daily Alerts

ಜನವರಿಯ ಮೊದಲ 15 ದಿನಗಳಲ್ಲಿ ವಿದ್ಯುತ್ ಬಳಕೆ ಶೇ.1.5ರಷ್ಟು ಬೆಳವಣಿಗೆ

|

ಒಂದು ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ ಭಾರತದ ವಿದ್ಯುತ್ ಬಳಕೆಯು ಜನವರಿಯ ಮೊದಲ ಹದಿನೈದು ದಿನಗಳಲ್ಲಿ 1.5 ಪ್ರತಿಶತದಷ್ಟು ಬೆಳವಣಿಗೆ ಕಂಡಿದೆ. ಅಂದರೆ 49.34 ಶತಕೋಟಿ ಯೂನಿಟ್‌ಗಳಿಗೆ (BU) ಏರಿಕೆ ಆಗಿದೆ. ಕೊರೊನಾ ವೈರಸ್‌ ಸಾಂಕ್ರಾಮಿಕದ ನಡುವೆ ದೇಶದಲ್ಲಿ ವರ್ಕ್ ಫ್ರಮ್‌ ಹೋಮ್‌ ಮತ್ತೆ ಅಧಿಕವಾಗುತ್ತಿದೆ. ಈ ನಡುವೆ ದೇಶದಲ್ಲಿ ವಿದ್ಯುತ್ ಬಳಕೆಯು ಅಧಿಕವಾಗಿದೆ.

ವಿದ್ಯುತ್ ಸಚಿವಾಲಯದ ಅಂಕಿಅಂಶಗಳ ಪ್ರಕಾರ 2021 ರಲ್ಲಿ ಜನವರಿ 1 ರಿಂದ 14 ರ ಅವಧಿಯಲ್ಲಿ ವಿದ್ಯುತ್ ಬಳಕೆಯು 48.59 ಬಿಯು ಆಗಿತ್ತು. ವಿದ್ಯುತ್ ಸಚಿವಾಲಯದ ಅಂಕಿಅಂಶಗಳ ಪ್ರಕಾರ 2021 ರಲ್ಲಿ ಜನವರಿ 1 ರಿಂದ 14 ರ ಅವಧಿಯಲ್ಲಿ ವಿದ್ಯುತ್ ಬಳಕೆಯು 48.59 ಬಿಯು ಆಗಿತ್ತು.

 ಬಜೆಟ್‌ 2022: ವೇತನ ಪಡೆಯುವ ವರ್ಗದ ಐದು ನಿರೀಕ್ಷೆಗಳು ಬಜೆಟ್‌ 2022: ವೇತನ ಪಡೆಯುವ ವರ್ಗದ ಐದು ನಿರೀಕ್ಷೆಗಳು

ಕಳೆದ ವರ್ಷದ ಸಂಪೂರ್ಣ ಜನವರಿಯಲ್ಲಿ ವಿದ್ಯುತ್ ಬಳಕೆ 109.76 ಬಿಯು ಆಗಿತ್ತು. ಇದು ಜನವರಿ 2020 ರಲ್ಲಿ 105.15 ಬಿಯು ವಿದ್ಯುತ್‌ ಬಳಕೆ ಆಗಿತ್ತು. ಇದಕ್ಕಿಂತ ಕಳೆದ ವರ್ಷ ಶೇಕಡ 4.4 ಅಧಿಕವಾಗಿತ್ತು. ಡೇಟಾ ಪ್ರಕಾರ, ಈ ವರ್ಷದ ಮೊದಲ 15 ದಿನದಲ್ಲೇ ಗರಿಷ್ಠ ವಿದ್ಯುತ್ ಬೇಡಿಕೆಯನ್ನು ಪೂರೈಸಲಾಗಿದೆ. ಜನವರಿ 1 ರಿಂದ 14 ರ ಅವಧಿಯಲ್ಲಿ ಒಂದು ದಿನದಲ್ಲಿ ಗರಿಷ್ಠ ಪೂರೈಕೆಯು 179.59 ಜಿಡಬ್ಲ್ಯೂಗೆ (ಗಿಗಾವ್ಯಾಟ್) ಏರಿಕೆ ಆಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಒಂದು ದಿನದಲ್ಲಿ178.88 ಜಿಡಬ್ಲ್ಯೂ ವಿದ್ಯುತ್‌ ಬಳಕೆ ಆಗಿತ್ತು. ವಿದ್ಯುತ್ ಬಳಕೆಯು ಡಿಸೆಂಬರ್ 2021 ರಲ್ಲಿ ಶೇಕಡ 3.4 ರಿಂದ 109.25 ಬಿಯುಗೆ ಬೆಳೆದಿದೆ. 2020 ರ ಅದೇ ತಿಂಗಳಲ್ಲಿ 105.62 ಬಿಯು ಆಗಿತ್ತು. ನವೆಂಬರ್ 2021 ರಲ್ಲಿ ವಿದ್ಯುತ್ ಬಳಕೆಯು ಶೇಕಡಾ 2.5 ರಷ್ಟು, 99.32ಬಿಯುಗೆ ಏರಿಕೆ ಕಂಡಿತ್ತು. ನವೆಂಬರ್ 2020 ರಲ್ಲಿ 96.88 ಬಿಯು ಆಗಿತ್ತು.

 15 ದಿನಗಳಲ್ಲಿ ವಿದ್ಯುತ್ ಬಳಕೆ ಶೇ.1.5ರಷ್ಟು ಬೆಳವಣಿಗೆ

ಜನವರಿ 2021 ರ ಸಂಪೂರ್ಣ ತಿಂಗಳಲ್ಲಿ ಪ್ರತಿ ದಿನ 189.39 ಗಿಗಾವ್ಯಾಟ್ ಮತ್ತು ಜನವರಿ 2020 ರಲ್ಲಿ 170.97 ಗಿಗಾವ್ಯಾಟ್ ಆಗಿತ್ತು. ಜನವರಿಯ ಮೊದಲ ಹದಿನೈದು ದಿನಗಳಲ್ಲಿ ವಿದ್ಯುತ್ ಬಳಕೆಯ ಬೆಳವಣಿಗೆಯಲ್ಲಿನ ಕುಂಠಿತ ಆಗಿದೆ ಎಂದು ತಜ್ಞರು ಹೇಳಿದ್ದಾರೆ. ಕೋವಿಡ್‌ ಹಿನ್ನೆಲೆ ರಾಜ್ಯಗಳು ವಿಧಿಸಿರುವ ಸ್ಥಳೀಯ ನಿರ್ಬಂಧವು ಕೈಗಾರಿಕಾ ಮತ್ತು ವಾಣಿಜ್ಯ ಬೇಡಿಕೆಯ ಮೇಲೆ ಪರಿಣಾಮ ಬೀರಿದೆ ಎಂಬುವುದು ಸ್ಪಷ್ಟವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೊರೊನಾ ಸಾಂಕ್ರಾಮಿಕ ರೋಗದ ಮೂರನೇ ಅಲೆಯು ಜನವರಿ 2022 ರಲ್ಲಿ ದೇಶವನ್ನು ಅಪ್ಪಳಿಸಿದೆ. ಇದರಿಂದಾಗಿ ಹಲವು ರಾಜ್ಯಗಳಲ್ಲಿ ರಾತ್ರಿ ಮತ್ತು ವಾರಾಂತ್ಯದ ಕರ್ಫ್ಯೂಗಳಂತಹ ಸ್ಥಳೀಯ ನಿರ್ಬಂಧಗಳನ್ನು ವಿಧಿಸಲಾಗಿದೆ. ಬಾರ್ ಮತ್ತು ರೆಸ್ಟೊರೆಂಟ್‌ಗಳಲ್ಲಿ ಊಟವನ್ನು ನಿಷೇಧಿಸುವಂತಹ ಕ್ರಮಗಳನ್ನೂ ಕೈಗೊಂಡಿದ್ದಾರೆ. ರಾಜ್ಯಗಳು ವಿಧಿಸಿರುವ ಸ್ಥಳೀಯ ನಿರ್ಬಂಧಗಳಿಂದಾಗಿ ವಿದ್ಯುತ್ ಬೇಡಿಕೆ ಹಾಗೂ ಬಳಕೆ ಕಡಿಮೆಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

 ಬಜೆಟ್‌ 2022-23: ಕೋವಿಡ್‌ನಿಂದ ಆತಿಥ್ಯ ವಲಯ ತತ್ತರ: ಹೋಟೆಲ್‌ ಉದ್ಯಮ ಉಳಿಸುವ ಬೇಡಿಕೆ ಬಜೆಟ್‌ 2022-23: ಕೋವಿಡ್‌ನಿಂದ ಆತಿಥ್ಯ ವಲಯ ತತ್ತರ: ಹೋಟೆಲ್‌ ಉದ್ಯಮ ಉಳಿಸುವ ಬೇಡಿಕೆ

ಬಜೆಟ್‌: ವರ್ಕ್ ಫ್ರಮ್‌ ಹೋಮ್‌

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ತಮ್ಮ ನಾಲ್ಕನೇ ಬಜೆಟ್ ಅನ್ನು ಮಂಡಿಸಲು ಸಿದ್ಧರಾಗಿದ್ದಾರೆ. ಅದಕ್ಕೆ ಇನ್ನು ಕೆಲವೇ ವಾರಗಳು ಇದೆ. ಈ ನಡುವೆ 2022 ರ ಬಜೆಟ್‌ನಲ್ಲಿ ಏನೆಲ್ಲಾ ಘೋಷಣೆ ಆಗಬಹುದು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಪ್ರತಿ ವರ್ಷದಂತೆ ಈ ವರ್ಷದ ಬಜೆಟ್‌ನಿಂದಲೂ ತೆರಿಗೆದಾರರು ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆ. ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಅನಿವಾರ್ಯವಾಗಿ ವರ್ಕ್ ಫ್ರಮ್‌ ಹೋಮ್‌ ಮಾಡಬೇಕಾಗಿದೆ. ಆದರೆ ಇದಕ್ಕಾಗಿ ಉದ್ಯೋಗಿಗಳೇ ವಿದ್ಯುತ್, ಇಂಟರ್ನೆಟ್ ಶುಲ್ಕಗಳು, ಬಾಡಿಗೆ, ಪೀಠೋಪಕರಣಗಳು ಇತ್ಯಾದಿಗಳ ವೆಚ್ಚವನ್ನು ಭರಿಸಬೇಕಾಗಿದೆ. ಅನೇಕ ಉದ್ಯೋಗದಾತರು ಉದ್ಯೋಗಿಗಳಿಗೆ ಮನೆಯಿಂದಲೇ ಕಚೇರಿ ಕೆಲಸಗಳನ್ನು ನಿರ್ವಹಿಸಲು ಭತ್ಯೆಗಳನ್ನು ನೀಡುತ್ತಿದ್ದಾರೆ. ಉದ್ಯೋಗಿಗಳಿಗೆ ದೊಡ್ಡ ಪರಿಹಾರ ನೀಡುವುದರಿಂದ ಅಂತಹ ಭತ್ಯೆಗಳನ್ನು ಆದಾಯ ತೆರಿಗೆಯಿಂದ ವಿನಾಯಿತಿ ನೀಡಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ. ಕೇಂದ್ರ ಬಜೆಟ್‌ನಲ್ಲೂ ಇದಕ್ಕೆ ಸಂಬಂಧಿಸಿದ ಕ್ರಮವನ್ನು ನಿರೀಕ್ಷಿಸಲಾಗಿದೆ.

English summary

Power consumption grows 1.5% in first fortnight of January

Power consumption grows 1.5% in first fortnight of January.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X