For Quick Alerts
ALLOW NOTIFICATIONS  
For Daily Alerts

ಸರ್ಕಾರಿ ಬ್ಯಾಂಕ್ ಗಳ ಒಕ್ಕೂಟದಿಂದ ಮಾರ್ಚ್ 15- 16ರಂದು ಮುಷ್ಕರ

By ಅನಿಲ್ ಆಚಾರ್
|

ಸರ್ಕಾರಿ ಸ್ವಾಮ್ಯದ ಎರಡು ಬ್ಯಾಂಕ್ ಗಳ ಖಾಸಗೀಕರಣ ಪ್ರಸ್ತಾವವನ್ನು ವಿರೋಧಿಸಿ ಮಾರ್ಚ್ 15ರಿಂದ ಎರಡು ದಿನಗಳ ಮುಷ್ಕರ ಮಾಡುವುದಾಗಿ ಒಂಬತ್ತು ಒಕ್ಕೂಟಗಳನ್ನು ಒಳಗೊಂಡ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ (UFBU) ಮಂಗಳವಾರದಂದು ಕರೆ ನೀಡಿವೆ.

ಕಳೆದ ವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ ವೇಳೆ, ಬಂಡವಾಳ ಹಿಂತೆಗೆತದ ಭಾಗವಾಗಿ ಎರಡು ಸಾರ್ವಜನಿಕ ಬ್ಯಾಂಕ್ (PSB's) ಖಾಸಗೀಕರಣದ ಬಗ್ಗೆ ಘೋಷಣೆ ಮಾಡಿದ್ದಾರೆ. ಸರ್ಕಾರವು ಈಗಾಗಲೇ ಐಡಿಬಿಐ ಬ್ಯಾಂಕ್ ಅನ್ನು ಖಾಸಗೀಕರಣಗೊಳಿಸಿದೆ. ಆ ಬ್ಯಾಂಕ್ ನಲ್ಲಿನ ಪ್ರಮುಖ ಷೇರಿನ ಪಾಲನ್ನು 2019ರಲ್ಲಿ ಎಲ್ ಐಸಿಗೆ ಮಾರಿದೆ. ಕಳೆದ ನಾಲ್ಕು ವರ್ಷದಲ್ಲಿ ಹದಿನಾಲ್ಕು ಸಾರ್ವಜನಿಕ ಬ್ಯಾಂಕ್ ಅನ್ನು ವಿಲೀನಗೊಳಿಸಿದೆ.

ಸಾರ್ವಜನಿಕ ಬ್ಯಾಂಕ್ ಎನ್ ಪಿಎ ರು. 6.09 ಲಕ್ಷ ಕೋಟಿಗೆ ಇಳಿಕೆಸಾರ್ವಜನಿಕ ಬ್ಯಾಂಕ್ ಎನ್ ಪಿಎ ರು. 6.09 ಲಕ್ಷ ಕೋಟಿಗೆ ಇಳಿಕೆ

ಮಂಗಳವಾರದಂದು ನಡೆದ UFBU ಸಭೆಯಲ್ಲಿ ಬ್ಯಾಂಕ್ ಖಾಸಗೀಕರಣ ಮಾಡುವ ಸರ್ಕಾರದ ನಿರ್ಧಾರವನ್ನು ವಿರೋಧಿಸಲು ತೀರ್ಮಾನಿಸಿದೆ ಎಂದು ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟದ (AIBEA) ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ ಹೇಳಿದ್ದಾರೆ.

ಸರ್ಕಾರಿ ಬ್ಯಾಂಕ್ ಗಳ ಒಕ್ಕೂಟದಿಂದ ಮಾರ್ಚ್ 15- 16ರಂದು ಮುಷ್ಕರ

ಐಡಿಬಿಐ ಮತ್ತು ಎರಡು ಬ್ಯಾಂಕ್ ಗಳ ಖಾಸಗೀಕರಣ, ಬ್ಯಾಡ್ ಬ್ಯಾಂಕ್ ಸ್ಥಾಪನೆ, ಎಲ್ ಐಸಿ ಬಂಡವಾಳ ಹಿಂತೆಗೆತ, ಜನರಲ್ ಇನ್ಷೂರೆನ್ಸ್ ಕಂಪೆನಿಯ ಖಾಸಗೀಕರಣ, ಇನ್ಷೂರೆನ್ಸ್ ವಲಯದಲ್ಲಿ 74% ಎಫ್ ಡಿಐಗೆ ಅವಕಾಶ ಮತ್ತು ಸಾರ್ವಜನಿಕ ವಲಯ ಸಂಸ್ಥೆಗಳ ಪಾಲು ಮಾರಾಟ ಇತ್ಯಾದಿ ತೀರ್ಮಾನಗಳ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಅವರು ಹೇಳಿದ್ದಾರೆ.

ಮಾರ್ಚ್ 15- 16, 2021ರಂದು ಎರಡು ದಿನಗಳ ಮುಷ್ಕರ ನಡೆಯಲಿದೆ. UFBU ಸದಸ್ಯ ಒಕ್ಕೂಟದ ಪಟ್ಟಿಯಲ್ಲಿ ಆಲ್ ಇಂಡಿಯಾ ಎಂಪ್ಲಾಯೀಸ್ ಅಸೋಸಿಯೇಷನ್, ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಕಾನ್ಫಡರೇಷನ್, ನ್ಯಾಷನಲ್ ಕಾನ್ಫಡರೇಷನ್ ಆಫ್ ಬ್ಯಾಂಕ್ ಎಂಪ್ಲಾಯೀಸ್, ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಷನ್ ಮತ್ತು ಬ್ಯಾಂಕ್ ಎಂಪ್ಲಾಯೀಸ್ ಕಾನ್ಫಡರೇಷನ್ ಆಫ್ ಇಂಡಿಯಾ ಒಳಗೊಂಡಿವೆ.

ಜತೆಗೆ ಇಂಡಿಯನ್ ನ್ಯಾಷನಲ್ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್, ಇಂಡಿಯನ್ ನ್ಯಾಷನಲ್ ಬ್ಯಾಂಕ್ ಆಫೀಸರ್ಸ್ ಕಾಂಗ್ರೆಸ್, ನ್ಯಾಷನಲ್ ಆರ್ಗನೈಸೇಷನ್ ಆಫ್ ಬ್ಯಾಂಕ್ ವರ್ಕರ್ಸ್ ಮತ್ತು ನ್ಯಾಷನಲ್ ಆರ್ಗನೈಸೇಷನನ್ ಆಫ್ ಬ್ಯಾಂಕ್ ಆಫೀಸರ್ಸ್ ಸಹ ಒಕ್ಕೂಟದಲ್ಲಿ ಇವೆ.

English summary

PSB Bank Employees Unions Call For Two Days Strike From March 15, 2021

Privatisation of banks opposed by bank employees union and call for two days strike from March 15, 2021.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X