For Quick Alerts
ALLOW NOTIFICATIONS  
For Daily Alerts

ತಿಂಗಳೊಳಗೆ 76 ಪರ್ಸೆಂಟ್ ನಷ್ಟು ಏರಿಕೆ ಕಂಡ ಸರ್ಕಾರಿ ಸ್ವಾಮ್ಯದ ಷೇರು ಇದು

|

ರೈಲ್ವೆ ಷೇರುಗಳು ಕಳೆದ ಒಂದು ವಾರದಿಂದ ಒಳ್ಳೆ ಏರಿಕೆ ದಾಖಲಿಸಿವೆ. ಅದರಲ್ಲೂ ಐಆರ್ ಸಿಟಿಸಿ ಷೇರುಗಳು ಕಳೆದ ಏಳು ಟ್ರೇಡಿಂಗ್ ಸೆಷನ್ ನಲ್ಲಿ ಅದ್ಭುತವಾದ ಏರಿಕೆ ದಾಖಲಿಸಿ, ಸಾರ್ವಕಾಲಿಕ ದಾಖಲೆ ಮೊತ್ತಕ್ಕೆ ವಹಿವಾಟು ನಡೆಸಿದೆ. ದಿನದ ಕೊನೆಗೆ 95 ರುಪಾಯಿ ಏರಿಕೆ ದಾಖಲಿಸಿ, 1508.55ಕ್ಕೆ ವ್ಯವಹಾರವನ್ನು ಮುಕ್ತಾಯ ಮಾಡಿದೆ.

ರೈಲು ತಡವಾದರೆ 100ರಿಂದ 250 ರುಪಾಯಿ ಪರಿಹಾರ, 25 ಲಕ್ಷದ ಇನ್ಷೂರೆನ್ಸ್ರೈಲು ತಡವಾದರೆ 100ರಿಂದ 250 ರುಪಾಯಿ ಪರಿಹಾರ, 25 ಲಕ್ಷದ ಇನ್ಷೂರೆನ್ಸ್

ನಿಫ್ಟಿ ಸೂಚ್ಯಂಕದಲ್ಲಿ ಸಾರ್ವಕಾಲಿಕ ಗರಿಷ್ಠವಾದ 1547.80 ಅನ್ನು ದಾಖಲಿಸಿದೆ. ಜನವರಿ 6ನೇ ತಾರೀಕಿನಂದು ಈ ಷೇರಿನ ಬೆಲೆ 894.45 ಇತ್ತು. ಅಲ್ಲಿಂದ ನಂತರ ಬುಧವಾರಕ್ಕೆ 76 ಪರ್ಸೆಂಟ್ ನಷ್ಟು ಏರಿಕೆ ಕಂಡಿದೆ ಐಆರ್ ಸಿಟಿಸಿ. ಫೆಬ್ರವರಿ 12ರಂದು ಐಆರ್ ಸಿಟಿಸಿಯ ಮಂಡಳಿ ಸಭೆ ಸೇರಲಿದ್ದು, ಡಿಸೆಂಬರ್ ತ್ರೈಮಾಸಿಕದ ಫಲಿತಾಂಶವನ್ನು ಮಂಜೂರು ಮಾಡಲಿದೆ. ಒಂದು ವೇಳೆ ಮಾಡುವಂತಿದ್ದರೆ ಮಧ್ಯಂತರ ಲಾಭಾಂಶ ಘೋಷಣೆ ಮಾಡುವ ಸಾಧ್ಯತೆ ಇದೆ.

ತಿಂಗಳೊಳಗೆ 76 ಪರ್ಸೆಂಟ್ ನಷ್ಟು ಏರಿಕೆ ಕಂಡ ಸರ್ಕಾರಿ ಸ್ವಾಮ್ಯದ ಷೇರು

ಐಆರ್ ಸಿಟಿಸಿಯಿಂದ ಇಂದೋರ್- ವಾರಾಣಸಿ ಮಧ್ಯೆ ಮೂರನೇ ಖಾಸಗಿ ರೈಲು ಆರಂಭಿಸಲಿದೆ. ಕೇಂದ್ರ ಬಜೆಟ್ ನಲ್ಲಿ ಪ್ರಸ್ತಾವ ಮಾಡಿದಂತೆ ಭವಿಷ್ಯದಲ್ಲಿ ಇನ್ನಷ್ಟು ತೇಜಸ್ ಎಕ್ಸ್ ಪ್ರೆಸ್ ರೈಲುಗಳನ್ನು ಆರಂಭಿಸಲಾಗುವುದು. ಇನ್ನು ಈ ಉದ್ಯಮದಲ್ಲಿ ಐಆರ್ ಸಿಟಿಸಿಯ ಪ್ರಭುತ್ವ ಇರುವುದರಿಂದ ಷೇರು ದರ ಏರಿಕೆ ಆಗುವ ಎಲ್ಲ ಸಾಧ್ಯತೆಯೂ ಇದೆ.

English summary

PSU Stock IRCTC Gave Investors 76 Percent Returns Within A Month

Public Sector Undertaking IRCTC gave 76 percent of returns to investors within a month of time.
Story first published: Wednesday, February 5, 2020, 20:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X