For Quick Alerts
ALLOW NOTIFICATIONS  
For Daily Alerts

PUB G ಮೊಬೈಲ್ ಸೇರಿ 118 ಚೀನೀ ಅಪ್ಲಿಕೇಷನ್ ನಿಷೇಧಿಸಿದ ಭಾರತ

|

ಪಬ್ ಜಿ ಮೊಬೈಲ್ ಸೇರಿದಂತೆ 118 ಚೀನೀ ಅಪ್ಲಿಕೇಷನ್ ಗಳನ್ನು ಭಾರತ ಸರ್ಕಾರ ಹೊಸದಾಗಿ ನಿಷೇಧ ಮಾಡಿದೆ. ಲಡಾಖ್ ನಲ್ಲಿ ಹೊಸದಾಗಿ ಉದ್ಭವಿಸಿರುವ ಚೀನಾ ಜತೆಗಿನ ಉದ್ವಿಗ್ನ ವಾತಾವರಣದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ. ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಪ್ರಕಾರ, ಈ ಮೊಬೈಲ್ ಗೇಮ್ ಅನ್ನು ಇನ್ಫರ್ಮೇಷನ್ ಟೆಕ್ನಾಲಜಿ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ನಿಷೇಧಿಸಲಾಗಿದೆ.

ಭಾರತದ ಸಾರ್ವಭೌಮತೆ ಹಾಗೂ ಸಮಗ್ರತೆಗೆ, ಭಾರತದ ರಕ್ಷಣೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವಂಥ ಚಟುವಟಿಕೆಯಲ್ಲಿ ತೊಡಗಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಲಾಗಿದೆ.

47 ಚೀನೀ ಅಪ್ಲಿಕೇಷನ್ ಗಳನ್ನು ನಿಷೇಧಿಸಿದ ಕೇಂದ್ರ ಸರ್ಕಾರ47 ಚೀನೀ ಅಪ್ಲಿಕೇಷನ್ ಗಳನ್ನು ನಿಷೇಧಿಸಿದ ಕೇಂದ್ರ ಸರ್ಕಾರ

ಭಾರತದ ಹೊರಭಾಗದಲ್ಲಿ ಇದ್ದುಕೊಂಡು, ಅನಧಿಕೃತವಾಗಿ ಮಾಹಿತಿಗಳನ್ನು ಕದಿಯಲಾಗುತ್ತಿತ್ತು. ಇದಕ್ಕಾಗಿ ಆಂಡ್ರಾಯಿಡ್ ಮತ್ತು ಐಒಎಸ್ ಪ್ಲಾಟ್ ಫಾರ್ಮ್ ಗಳನ್ನು ಬಳಸಿಕೊಳ್ಳಲಾಗುತ್ತಿತ್ತು. ಈ ಬಗ್ಗೆ ವಿವಿಧ ಮೂಲಗಳಿಂದ ದೂರುಗಳು ಬಂದಿರುವುದು ಸೇರಿದಂತೆ ವರದಿಗಳು ಕೈ ತಲುಪಿವೆ ಎಂದು ಸಚಿವಾಲಯ ತಿಳಿಸಿದೆ.

PUB G ಮೊಬೈಲ್ ಸೇರಿ 118 ಚೀನೀ ಅಪ್ಲಿಕೇಷನ್ ನಿಷೇಧಿಸಿದ ಭಾರತ

ಮಾಹಿತಿಗಳನ್ನು ಸಂಗ್ರಹಿಸಿ, ಅದರ ದತ್ತಾಂಶ ಸಿದ್ಧ ಪಡಿಸಿಕೊಳ್ಳುವುದು ಭಾರತದ ರಕ್ಷಣೆ ಹಾಗೂ ಸುರಕ್ಷತೆಗೆ ಅಪಾಯಕಾರಿ. ಇದರಿಂದ ಅಂತಿಮವಾಗಿ ಭಾರತದ ಸಾರ್ವಭೌಮತೆ ಹಾಗೂ ಸಮಗ್ರತೆಗೆ ಧಕ್ಕೆ ಆಗುತ್ತದೆ. ಈ ಕುರಿತು ತಕ್ಷಣ ಕ್ರಮ ಕೈಗೊಳ್ಳುವ ಅಗತ್ಯ ಇತ್ತು ಎನ್ನಲಾಗಿದೆ.

English summary

PUB G Mobile Including In 118 Chinese App Banned By Indian Government

Including PUB G mobile 118 Chinese app banned by Indian government, according to report.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X