For Quick Alerts
ALLOW NOTIFICATIONS  
For Daily Alerts

ಚಿತ್ರಮಂದಿರಗಳಲ್ಲಿ 100% ಭರ್ತಿ , ಪಿವಿಆರ್, ಐನಾಕ್ಸ್ ಷೇರು ಜಿಗಿತ

|

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಾಗದ ರಹಿತ ಬಜೆಟ್ ಮಂಡಿಸುತ್ತಿದ್ದಂತೆ ಷೇರುಪೇಟೆಯಲ್ಲಿ ಚೇತರಿಕೆ ಕಂಡು ಬಂದಿದೆ.

ಇದರ ಜೊತೆಗೆ ಇತ್ತೀಚೆಗೆ ಕೇಂದ್ರ ಸರ್ಕಾರವು ಸಿನಿಮಾ ಮಂದಿರಗಳಲ್ಲಿ ಶೇ.100 ಆಸನ ಭರ್ತಿಗೆ ಅವಕಾಶ ನೀಡಿದ್ದು, ಫೆಬ್ರವರಿ 1ರಿಂದ ಹೊಸ ನೀತಿ ಜಾರಿಗೆ ಬರಲಿದೆ. ಹೊಸ ಮಾರ್ಗಸೂಚಿ ಜಾರಿಗೊಳಿಸಿ, ಪೂರ್ಣ ಪ್ರಮಾಣದ ಚಿತ್ರಮಂದಿರಗಳನ್ನು ಓಪನ್ ಮಾಡಲು ಅನುಮತಿ ನೀಡಿದೆ.

ಇದರಿಂದಾಗಿ ಸೋಮವಾರದಂದು ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಪಿವಿಆರ್ ಹಾಗೂ ಐನಾಕ್ಸ್ ಷೇರುಗಳು ಶೇ 3ರಷ್ಟು ಏರಿಕ ಕಂಡಿವೆ. ಬೆಳಗ್ಗೆ 9;30ಕ್ಕೆ ಪಿವಿಆರ್ ಷೇರ್ ಉ 3.15 % ಏರಿಕೆ ಕಂಡು ಬಿಎಸ್ಇಯಲ್ಲಿ 1,462.50ಕ್ಕೇರಿದೆ. ಐನಾಕ್ಸ್ ಲೀಷರ್ ಷೇರುಗಳು ಶೇ 2ರಷ್ಟು ಏರಿಕೆ ಕಂಡು 327.10 ರು ಗೇರಿದೆ.

ಚಿತ್ರಮಂದಿರಗಳಲ್ಲಿ 100% ಭರ್ತಿ , ಪಿವಿಆರ್, ಐನಾಕ್ಸ್ ಷೇರು ಜಿಗಿತ

ಬಜೆಟ್ ಗೂ ಮುನ್ನ ಕೇಂದ್ರ ಗೃಹ ಸಚಿವಾಲಯ ಈ ಕುರಿತು ನಿರ್ದೇಶನ ನೀಡಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಿನಿಮಾ ಪ್ರದರ್ಶನ ಮಾಡುವಂತೆ ಸೂಚಿಸಿದೆ. ಕಂಟೈನ್ ಮೆಂಟ್ ವಲಯಗಳಲ್ಲಿ ಮಾತ್ರ ನಿರ್ಬಂಧ ಜಾರಿಯಲ್ಲಿರಲಿವೆ.

ಚಿತ್ರಮಂದಿರಗಳಲ್ಲಿ ಮಾಸ್ಕ್ ಬಳಕೆ, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯ ಹಾಗೂ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಸೂಚಿಸಲಾಗಿದೆ.

20120ರ ಮಾರ್ಚ್ ತಿಂಗಳಲ್ಲಿ ಲಾಕ್ ಡೌನ್ ಜಾರಿಯಾಗುತ್ತಿದ್ದಂತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಚಿತ್ರಮಂದಿರಗಳ ಮಾಲೀಕರು ಇದೀಗ ಸಂತಸದಿಂದಿದ್ದಾರೆ. ಕಳೆದ ವರ್ಷ ಅಕ್ಟೋಬರ್ ನಲ್ಲಿ ಚಿತ್ರಮಂದಿರಗಳನ್ನು ಓಪನ್ ಮಾಡಲು ಅವಕಾಶ ನೀಡಿತ್ತಾದರೂ, ಪೂರ್ಣ ಪ್ರಮಾಣದ ಆಸನ ಭರ್ತಿಗೆ ಅವಕಾಶವಿರಲಿಲ್ಲ.

ಜನವರಿ ತಿಂಗಳು ಸಹ ನಿರಾಸೆ ಮೂಡಿಸಿತ್ತು. ಶೇ.50ರಷ್ಟು ಆಸನದಲ್ಲೇ ಅನೇಕ ಸಿನಿಮಾಗಳು ರಿಲೀಸ್ ಆಗಿದೆ. ಇತ್ತೀಚಿಗೆ ತಮಿಳುನಾಡು ಸರ್ಕಾರ ಪರ್ಣ ಪ್ರಮಾಣದ ಅವಕಾಶ ನೀಡಿತ್ತು.

English summary

PVR, Inox Leisure rise up to 3% as govt allows 100% occupancy in cinema halls

Shares of PVR and Inox Leisure climbed up to 3 per cent in Monday's trade after the central government allowed cinema halls to be operated at 100 per cent capacity from February 1, except in containment zones, while adhering to health safety protocols.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X