For Quick Alerts
ALLOW NOTIFICATIONS  
For Daily Alerts

ರಾಕೇಶ್ ಜುಂಜುನ್ ವಾಲಾ ಆಸ್ತಿ 3 ತಿಂಗಳಲ್ಲಿ 1400 ಕೋಟಿ ಹೆಚ್ಚಳ

By ಅನಿಲ್ ಆಚಾರ್
|

ಈ ವರ್ಷದ ಜುಲೈನಿಂದ ಸೆಪ್ಟೆಂಬರ್ ಮಧ್ಯೆ ಭಾರತದ ಹಿರಿಯ- ಅನುಭವಿ ಹೂಡಿಕೆದಾರ ರಾಕೇಶ್ ಜುಂಜುನ್ ವಾಲಾ ನಿವ್ವಳ ಆಸ್ತಿಯಲ್ಲಿ 1400 ಕೋಟಿ ಹೆಚ್ಚಳವಾಗಿದೆ. ಈ ಅವಧಿಯಲ್ಲಿ ಸೆನ್ಸೆಕ್ಸ್ ಸೂಚ್ಯಂಕ 10% ಏರಿಕೆ ದಾಖಲಿಸಿದೆ. ರಾಕೇಶ್ ಜುಂಜುನ್ ವಾಲಾ ಪೋರ್ಟ್ ಫೋಲಿಯೋದಲ್ಲಿನ ಏಳು ಷೇರುಗಳು ಅವರಿಗೆ ಭರ್ಜರಿ ಲಾಭ ಮಾಡಿಕೊಟ್ಟಿವೆ.

ಯಾವುವು ಆ ಷೇರುಗಳು ಅಂದರೆ; ಟೈಟಾನ್ ಕಂಪೆನಿ, ಎಸ್ಕಾರ್ಟ್ಸ್ ಲಿಮಿಟೆಡ್, ಕ್ರಿಸಿಲ್, ಲುಪಿನ್, Rallis ಇಂಡಿಯಾ, ಜುಬಿಲಿಯಂಟ್ ಲೈಫ್ ಸೈನ್ಸಸ್, ಫೋರ್ಟೀಸ್ ಹೆಲ್ತ್ ಕೇರ್. ಇಲ್ಲಿ ನೆನಪಿಟ್ಟುಕೊಳ್ಳಬೇಕಾದ ಅಂಶ ಏನೆಂದರೆ, ಸೆಪ್ಟೆಂಬರ್ 30ರ ಕೊನೆಗೆ ಎಸ್ಕಾರ್ಟ್ಸ್ ಹಾಗೂ ಜುಬಿಲಿಯಂಟ್ ನಲ್ಲಿ ಯಾರ ಷೇರು- ಎಷ್ಟು ಪಾಲಿದೆ ಎಂಬುದು ಈ ತನಕ ಬಹಿರಂಗ ಆಗಿಲ್ಲ.

ಷೇರುಪೇಟೆಯಲ್ಲಿ ಹೂಡಿಕೆದಾರರ 3.3 ಲಕ್ಷ ಕೋಟಿ ರುಪಾಯಿ ಸಂಪತ್ತು ಧಗಧಗಷೇರುಪೇಟೆಯಲ್ಲಿ ಹೂಡಿಕೆದಾರರ 3.3 ಲಕ್ಷ ಕೋಟಿ ರುಪಾಯಿ ಸಂಪತ್ತು ಧಗಧಗ

ಇನ್ನು ರಾಕೇಶ್ ಪತ್ನಿ ರೇಖಾ ಟೈಟಾನ್ ನಲ್ಲಿನ ಷೇರುಗಳನ್ನು ಮಾರಿ, ಲಾಭದ ನಗದೀಕರಣ ಮಾಡಿಕೊಂಡಿದ್ದಾರೆ. ಆದರೆ ರಾಕೇಶ್ ಜುಂಜುನ್ ವಾಲಾ ಪಾಲಿನ ಷೇರು ಹಾಗೇ ಉಳಿದುಕೊಂಡಿದೆ. ಅವರ ಬಳಿ ಟೈಟಾನ್ ಕಂಪೆನಿಯ 3.93 ಕೋಟಿ ಷೇರುಗಳು ಇವೆ. ಜೂನ್ ಕೊನೆಗೆ ಜುಂಜುನ್ ವಾಲಾ ಬಳಿ ಇದ್ದ ಟೈಟಾನ್ ಕಂಪೆನಿ ಷೇರಿನ ಬೆಲೆ 3734 ಕೋಟಿ ರುಪಾಯಿ. ಕಳೆದ ತ್ರೈಮಾಸಿಕದಲ್ಲಿ ಅದು 26% ಏರಿಕೆ ಆಗಿದ್ದು, ಆ ಷೇರಿನ ಮೌಲ್ಯ 977.64 ಕೋಟಿ ಏರಿಕೆಯಾಗಿ, 4712 ಕೋಟಿ ಮುಟ್ಟಿದೆ.

ರಾಕೇಶ್ ಜುಂಜುನ್ ವಾಲಾ ಆಸ್ತಿ 3 ತಿಂಗಳಲ್ಲಿ 1400 ಕೋಟಿ ಹೆಚ್ಚಳ

ಕ್ರಿಸಿಲ್ ಷೇರಿನ ಮೌಲ್ಯ 38 ಕೋಟಿ, ಲುಪಿನ್ 77.28 ಕೋಟಿ, Rallis ಇಂಡಿಯಾ 26.94 ಕೋಟಿ, ಫೋರ್ಟೀಸ್ ಹೆಲ್ತ್ ಕೇರ್ 26.5 ಕೋಟಿ, ಎಸ್ಕಾರ್ಟ್ಸ್ 220.90 ಕೋಟಿ, ಜುಬಿಲಿಯಂಟ್ ಸೈನ್ಸ್ 63.98 ಕೋಟಿ ರುಪಾಯಿ ಹೆಚ್ಚಳವಾಗಿದೆ. ಕೆಲವು ಷೇರುಗಳಿಂದ ಆಗಿರುವ ಲಾಭದ ನಿಖರ ಮೊತ್ತ ಗೊತ್ತಾಗಿಲ್ಲ.

English summary

Rakesh Jhunjhunwala Wealth Increased By Rs 1400 Crore By 7 Stocks In 3 Months

Ace investor Rakesh Jhunjhunwala wealth increased by 1400 crore rupees by 7 stocks between July to September.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X