For Quick Alerts
ALLOW NOTIFICATIONS  
For Daily Alerts

ವಿಡಿಯೋ ಮೂಲಕವೇ ಕೆವೈಸಿಗೆ ಓಕೆ ಎಂದ ಆರ್‌ಬಿಐ

|

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ಹಣಕಾಸಿನ ಘಟಕಗಳ ಗ್ರಾಹಕರಿಗೆ ಕೆವೈಸಿ ಪ್ರಕ್ರಿಯೆಗಳನ್ನು ಸುಲಭಗೊಳಿಸಲು ವಿಡಿಯೊ ಆಧಾರಿತ ಕೆವೈಸಿ ಪ್ರಕ್ರಿಯೆಗೆ ಅವಕಾಶ ನೀಡಿದೆ.

 

ಗ್ರಾಹಕ ಮಾಹಿತಿ ಪಡೆಯಲು (ಇ-ಕೆವೈಸಿ) ಪ್ರಸ್ತುತ ಚಾಲ್ತಿಯಲ್ಲಿರುವ ಕ್ರಮಗಳ ಹೊರತಾಗಿಯೂ ವಿಡಿಯೊ ಮೂಲಕ ಧೃಡೀಕರಣ ಪಡೆಯುವ ವ್ಯವಸ್ಥೆಗೆ ಆರ್‌ಬಿಐ ಗುರುವಾರ ಸಮ್ಮತಿಸಿದೆ. ಇ-ಕೆವೈಸಿ ನಡೆಸಲು ಗ್ರಾಹಕ ಖುದ್ದು ಹಾಜರಿರಬೇಕಾಗಿರುತ್ತದೆ. ಇದರ ಪ್ರಕ್ರಿಯೆಯು ಬಹಳಷ್ಟು ದತ್ತಾಂಶ ನಿರ್ವಹಣೆಯನ್ನು ಒಳಗೊಂಡಿರುತ್ತದೆ. ಆದರೆ ವಿಡಿಯೊ ಕೆವೈಸಿ ಮೂಲಕ ಗ್ರಾಹಕ ಎಲ್ಲಾ ಪ್ರಕ್ರಿಯೆಗಳನ್ನಿ ವಿಡಿಯೋ ಚಾಟ್ ಮೂಲಕವೇ ಪೂರೈಸಿಕೊಳ್ಳಬಹುದು.

 
ವಿಡಿಯೋ ಮೂಲಕವೇ ಕೆವೈಸಿಗೆ ಓಕೆ ಎಂದ ಆರ್‌ಬಿಐ

ಅಂದರೆ ಗ್ರಾಹಕರು ವಿಡಿಯೋ ಚಾಟ್ ಮೂಲಕವೇ ಅಗತ್ಯವಾದ ದಾಖಲೆಗಳನ್ನು ತೋರಿಸಬಹುದಾಗಿದೆ. ಗೂಗಲ್ ಡ್ಯೊ ಅಥವಾ ಆ್ಯಪಲ್ ಫೇಸ್‌ಟೈಮ್ ಅಪ್ಲಿಕೇಷನ್ ಮೂಲಕ ವಿಡಿಯೊ ಕೆವೈಸಿ ನಡೆಸಬಹುದು ಎಂದು ಸಮಿತಿಯು ಶಿಪಾರಸು ಮಾಡಿದೆ. ಆದರೆ ಇವು ವಿದೇಶಿ ಕಂಪನಿಯ ಅಪ್ಲಿಕೇಷನ್ ಆಗಿರುವುದರಿಂದ ಆರ್‌ಬಿಐ ಇದಕ್ಕೆ ಒಪ್ಪುತ್ತದೆಯೇ ಎಂಬುದು ಅನುಮಾನವಾಗಿದೆ.

ಇನ್ನು ಖಾತೆ ತೆರೆಯಲು ಗ್ರಾಹಕರು ಈಗ ದಾಖಲೆಗಳಿಗೆ ಡಿಜಿಟಲ್ ಸಹಿ ಮಾಡಬಹುದು ಮತ್ತು ಡಿಜಿಟಲ್ ಲಾಕರ್‌ಗಳಲ್ಲಿ ನಿರ್ವಹಿಸಲಾದ ದಾಖಲೆಗಳನ್ನೇ ಖಾತೆ ತೆರೆಯುವ ಮುನ್ನ ಪುರಾವೆಗಳಾಗಿ ಪರಿಗಣಿಸಲಾಗುತ್ತದೆ. ಬ್ಯಾಂಕುಗಳಿಗೆ, ಆಧಾರ್ ಆನ್‌ಲೈನ್ ಪರಿಶೀಲನೆಯನ್ನು ಅನುಮತಿಸಲಾಗಿದೆ. ಆದರೆ ಇತರೇ ಪರಿಶೀಲನೆ ವೇಳೆಯಲ್ಲಿ ಆಫ್‌ಲೈನ್ ಪರಿಶೀಲನೆಯನ್ನು ಮುಂದುವರಿಸಲಾಗಿದೆ.

English summary

RBI Allowed Video KYC For Customers

RBI has eased the KYC process for customers of financial entities and allowed video-based KYC process
Story first published: Friday, January 10, 2020, 18:08 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X