For Quick Alerts
ALLOW NOTIFICATIONS  
For Daily Alerts

Adani Group Debt : ಭಾರತೀಯ ಬ್ಯಾಂಕ್‌ಗಳ ಬಳಿ ಮಾಹಿತಿ ಕೇಳಿದ ಆರ್‌ಬಿಐ

|

ಹಿಂಡಬ್‌ಬರ್ಗ್ ವರದಿಯ ಬಳಿಕ ಅದಾನಿ ಗ್ರೂಪ್ ಕಂಪನಿಯ ಷೇರುಗಳು ನಿರಂತರವಾಗಿ ಕುಸಿತ ಕಾಣುತ್ತಿದೆ. ಹಾಗೆಯೇ ಸಂಸ್ಥೆಯು ತನ್ನ 20,000 ಕೋಟಿ ರೂಪಾಯಿಗಳ ಎಫ್‌ಪಿಒ ಅನ್ನು ಹಿಂಪಡೆಯುವ ನಿರ್ಧಾರವನ್ನು ಕೂಡಾ ಘೋಷಣೆ ಮಾಡಿದೆ. ಈ ಮಧ್ಯೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅದಾನಿ ಸಮೂಹ ಕಂಪನಿಯ ಸೀಮಿತ ಸಾಲದ ಬಗ್ಗೆ ಮಾಹಿತಿ ನೀಡುವಂತೆ ಭಾರತದ ಬ್ಯಾಂಕುಗಳಿಗೆ ಸೂಚಿಸಿದೆ.

ಈ ಬಗ್ಗೆ ಸಂಪರ್ಕವನ್ನು ಮಾಡಿದಾಗ ಆರ್‌ಬಿಐ ಅಧಿಕಾರಿಗಳು ಪ್ರತಿಕ್ರಿಯೆ ನೀಡಲು ಹಿಂಜರಿದಿದ್ದಾರೆ. ಕ್ರೆಡಿಟ್ ಸ್ಯೂಸ್ ಸಂಸ್ಥೆ ತನ್ನ ಖಾಸಗಿ ಬ್ಯಾಂಕಿಂಗ್ ಕ್ಲೈಂಟ್‌ಗಳಿಗೆ ಮಾರ್ಜಿನ್ ಲೋನ್‌ಗಳಿಗೆ ಮೇಲಾಧಾರವಾಗಿ ಅದಾನಿ ಗ್ರೂಪ್ ಕಂಪನಿಗಳ ಬಾಂಡ್‌ಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದೆ. ಇದಾದ ಬಳಿಕ ಗ್ರಾಹಕರಿಗೆ ಅದಾನಿ ಗ್ರೂಪ್ ಕಂಪನಿಗಳ ಸೆಕ್ಯುರಿಟಿಗಳ ಮೇಲೆ ಸಾಲವನ್ನು ನೀಡುವುದನ್ನು ಕೂಡಾ ನಿಲ್ಲಿಸಲಾಗಿದೆ.

ಅದಾನಿ ಗ್ರೂಪ್‌ನ 413 ಪುಟಗಳ ಪ್ರತಿಕ್ರಿಯೆ: ಹಿಂಡನ್‌ಬರ್ಗ್ ಹೇಳುವುದೇನು?ಅದಾನಿ ಗ್ರೂಪ್‌ನ 413 ಪುಟಗಳ ಪ್ರತಿಕ್ರಿಯೆ: ಹಿಂಡನ್‌ಬರ್ಗ್ ಹೇಳುವುದೇನು?

ಸೆಬಿಯತಹ ರೆಗ್ಯೂಲರಿಟಿಗಳು ಮಧ್ಯ ಪ್ರವೇಶ ಮಾಡುವ ಸಾಧ್ಯತೆಯಿದೆ ಎಂದು ಬ್ಯಾಂಕಿಂಗ್ ಮೂಲವೊಂದು ಹೇಳಿದೆ. ಮಾರುಕಟ್ಟೆ ನಿಯಂತ್ರಕ ಸೆಬಿ ಈವರೆಗೂ ಅದಾನಿ ಷೇರು ಕುಸಿತ ಮತ್ತು 20,000 ಕೋಟಿ ರೂಪಾಯಿಗಳ ಎಫ್‌ಪಿಒ ಅನ್ನು ಹಿಂಪಡೆಯುವ ನಿರ್ಧಾರಗಳ ಬಗ್ಗೆ ಯಾವುದೇ ತನಿಖೆಯನ್ನು ಘೋಷಣೆ ಮಾಡಿಲ್ಲ.

 ಅದಾನಿ ಸಾಲ: ಭಾರತೀಯ ಬ್ಯಾಂಕ್‌ಗಳ ಬಳಿ ಮಾಹಿತಿ ಕೇಳಿದ ಆರ್‌ಬಿಐ

ಪ್ರಸ್ತುತ ಅದಾನಿ ಗ್ರೂಪ್ ಸುಮಾರು 2 ಲಕ್ಷ ಕೋಟಿ ರೂಪಾಯಿಗೂ ಅಧಿಕ ಸಾಲವನ್ನು ಹೊಂದಿದೆ. ಈ ನಡುವೆ ಅದಾನಿ ಗ್ರೂಪ್ ಕಂಪನಿಗಳ ಬಾಂಡ್‌ಗಳನ್ನು ಮೇಲಾಧಾರವಾಗಿ ಸ್ವೀಕರಿಸುವುದನ್ನು ನಿಲ್ಲಿಸಿದೆ. ಈ ನಡುವೆ ಸಿಟಿಗ್ರೂಪ್ ಇಂಕ್‌ ಅದಾನಿ ಗ್ರೂಪ್ ಸೆಕ್ಯುರಿಟಿಗಳನ್ನು ಸಾಲಗಳಿಗೆ ಮೇಲಾಧಾರವಾಗಿ ಸ್ವೀಕರಿಸುವುದನ್ನು ನಿಲ್ಲಿಸಿದೆ ಎಂದು ವರದಿ ಉಲ್ಲೇಖಿಸಿದೆ.

ವಿಶ್ವದ ಶ್ರೀಮಂತ ವ್ಯಕ್ತಿ: 3ರಿಂದ 7ನೇ ಸ್ಥಾನಕ್ಕೆ ಇಳಿದ ಅದಾನಿ, ಹೂಡಿಕೆದಾರರ ನಂಬಿಕೆ ಗಳಿಸುವಲ್ಲಿ ಸೋತರೇ?ವಿಶ್ವದ ಶ್ರೀಮಂತ ವ್ಯಕ್ತಿ: 3ರಿಂದ 7ನೇ ಸ್ಥಾನಕ್ಕೆ ಇಳಿದ ಅದಾನಿ, ಹೂಡಿಕೆದಾರರ ನಂಬಿಕೆ ಗಳಿಸುವಲ್ಲಿ ಸೋತರೇ?

ಯಾವ ಬ್ಯಾಂಕ್‌ನಲ್ಲಿ ಎಷ್ಟು ಸೀಮಿತ ಸಾಲವಿದೆ?

ಇನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇನ್ನೂ ಕೂಡಾ ಅದಾನಿ ಗ್ರೂಪ್‌ಗೆ ನೀಡಿರುವ ಸೀಮಿತ ಸಾಲಗಳ ಬಗ್ಗೆ ಮಾಹಿತಿಯನ್ನು ನೀಡಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಅದಾನಿ ಗ್ರೂಪ್‌ಗೆ ಅದರ ಒಟ್ಟು 7,000 ಕೋಟಿ ರೂಪಾಯಿ ನಗದನ್ನು ನೀಡಿದೆ. ಹಾಗೆಯೇ ಪ್ರಸ್ತುತ ಮರುಪಾವತಿಯ ಬಗ್ಗೆ ಯಾವುದೇ ಆತಂಕವಿಲ್ಲ ಎಂದು ಹೇಳಿದೆ. ಬ್ಯಾಂಕ್ ಆಫ್ ಬರೋಡಾವು 4,000 ಕೋಟಿ ರೂಪಾಯಿ ಸೀಮಿತ ಸಾಲವನ್ನು ನೀಡಿದೆ. ಆದರೆ ಬೇರೆ ಬ್ಯಾಂಕುಗಳು ಯಾವುದೇ ಮಾಹಿತಿಯನ್ನು ನೀಡಿಲ್ಲ.

ಕಳೆದ ವಾರ, ಎಸ್‌ಬಿಐನ ವ್ಯವಸ್ಥಾಪಕ ನಿರ್ದೇಶಕ (ಕಾರ್ಪೊರೇಟ್ ಬ್ಯಾಂಕಿಂಗ್ ಮತ್ತು ಅಂಗಸಂಸ್ಥೆಗಳು) ಸ್ವಾಮಿನಾಥನ್ ಜೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. "ತಿಳಿದಿರುವಂತೆ, ಅವರ ಹೆಚ್ಚಿನವುಗಳು ಸಾಗರೋತ್ತರ ಸಾಲಗಳು ಮತ್ತು ಮಾರುಕಟ್ಟೆ ಮೂಲಕ ಹಣಕಾಸು ಪಡೆದಿವೆ. ಆದ್ದರಿಂದ ಈ ಎಣಿಕೆಯಲ್ಲಿ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಗೆ ಯಾವುದೇ ಮಾನ್ಯತೆ ಇಲ್ಲ," ಎಂದು ತಿಳಿಸಿದ್ದಾರೆ.

English summary

RBI asks Indian banks for details of exposure to Adani Group Says Report

RBI has sought details from banks about the exposure to Adani group companies amid the sustained fall in the shares of group companies and the withdrawal of the follow-on public offer of Rs 20,000 crore.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X