For Quick Alerts
ALLOW NOTIFICATIONS  
For Daily Alerts

ರೆಪೋ ದರ 50 ಮೂಲಾಂಕ ಏರಿಕೆಗೆ ಸಜ್ಜಾಗಿದೆಯಾ ಆರ್‌ಬಿಐ?

|

ಭಾರತೀಯ ಕರೆನ್ಸಿ ಯುಎಸ್ ಡಾಲರ್ ಎದುರು ನಿರಂತರವಾಗಿ ಕುಸಿತ ಕಾಣುತ್ತಿದೆ. ಈ ನಡುವೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮುಂದಿನ ವಾರ ರೆಪೋ ದರವನ್ನು ಮತ್ತೆ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಈ ಹಿಂದೆ ಮೂರು ಬಾರಿ ಆರ್‌ಬಿಐ ರೆಪೋ ದರವನ್ನು ಹೆಚ್ಚಳ ಮಾಡಿದೆ.

ಎಲ್ಲಾ ಅರ್ಥಶಾಸ್ತ್ರಜ್ಞರ ಪ್ರಕಾರ, ಕೇಂದ್ರ ಬ್ಯಾಂಕ್ ಮುಂದಿನ ವಾರ ರೆಪೋ ದರವನ್ನು 50 ಮೂಲಾಂಕ ಹೆಚ್ಚಳ ಮಾಡಲಾಗಿದೆ. ಈ ವರ್ಷದ ಅಂತ್ಯದ ವೇಳೆಗೆ ರೆಪೋ ದರ 6.25 ಶೇಕಡಾವನ್ನು ತಲುಪಲು ಸಾಧ್ಯತೆ ಇದೆ. ಆರ್‌ಬಿಐ ನೇತೃತ್ವದ ಹಣಕಾಸು ನೀತಿ ಸಮಿತಿಯು ಸೆಪ್ಟೆಂಬರ್ 30 ರಂದು ರೆಪೊ ದರವನ್ನು 50 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಎಸ್‌ಬಿಐ, ಯುಬಿಎಸ್, ಗೋಲ್ಡ್ಮನ್ ಸ್ಯಾಚ್ಸ್, ಬಾರ್ಕ್ಲೇಸ್ ಮತ್ತು ಬ್ಯಾಂಕ್ ಆಫ್ ಬರೋಡಾದ ಅರ್ಥಶಾಸ್ತ್ರಜ್ಞರು ಅಂದಾಜು ಮಾಡಿದ್ದಾರೆ.

Dollar vs Rupee : ರೂಪಾಯಿ ಮೌಲ್ಯ ಕುಸಿತ: ಡಾಲರ್‌ಗಳನ್ನು ಮಾರಾಟ ಮಾಡುತ್ತಾ ಆರ್‌ಬಿಐ?Dollar vs Rupee : ರೂಪಾಯಿ ಮೌಲ್ಯ ಕುಸಿತ: ಡಾಲರ್‌ಗಳನ್ನು ಮಾರಾಟ ಮಾಡುತ್ತಾ ಆರ್‌ಬಿಐ?

ಈ ವರ್ಷದ ಮೇ ತಿಂಗಳಿನ ಬಳಿಕ ಸತತ ಮೂರು ಬಾರಿ ರೆಪೋ ದರ ಹೆಚ್ಚಿಸಲಾಗಿದ್ದು, ಪ್ರಸ್ತುತ ದರ ಶೇಕಡ 5.90ಕ್ಕೆ ತಲುಪಿದೆ. ರೆಪೋ ದರ ಏರಿಕೆ ಬಗ್ಗೆ ತಜ್ಞರು ಯಾವ ಅಭಿಪ್ರಾಯವನ್ನು ಹೊಂದಿದ್ದಾರೆ, ಈ ಹಿಂದೆ ದರ ಎಷ್ಟಿತ್ತು?, ಪ್ರಸ್ತುತ ರೆಪೋ ದರ ಎಷ್ಟಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....

 ರೆಪೋ ದರ 50 ಮೂಲಾಂಕ ಏರಿಕೆ ಅಂದಾಜು

ರೆಪೋ ದರ 50 ಮೂಲಾಂಕ ಏರಿಕೆ ಅಂದಾಜು

ಸೋಮವಾರ ಪ್ರಕಟವಾದ ಪ್ರಕಟಣೆಯಲ್ಲಿ ದೇಶದ ಅತಿದೊಡ್ಡ ಸಾರ್ವಜನಿಕ ಬ್ಯಾಂಕ್ ಆದ ಎಸ್‌ಬಿಐನ ಮುಖ್ಯ ಅರ್ಥಶಾಸ್ತ್ರಜ್ಞೆ ಸೌಮ್ಯ ಕಾಂತಿ ಘೋಷ್, ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಿದೆ. ಹಣದುಬ್ಬರವು ಕೂಡಾ ಏರಿಕೆಯಾಗುತ್ತಿದೆ. ಇದರಿಂದಾಗಿ ರೆಪೋ ದರವನ್ನು ಮತ್ತೆ 50 ಮೂಲಾಂಕ ಹೆಚ್ಚಳ ಮಾಡುವ ಕಾಲ ಸಮೀಪಿಸುತ್ತಿದೆ ಎಂದು ಹೇಳಿದ್ದಾರೆ. "ಗರಿಷ್ಠವಾಗಿ ಶೇಕಡ 6.25ರಷ್ಟು ರೆಪೋ ದರ ಏರಿಕೆಯಾಗುವ ನಿರೀಕ್ಷೆಯನ್ನು ನಾವು ಹೊಂದಿದ್ದೇವೆ. ಡಿಸೆಂಬರ್ ನೀತಿಯಲ್ಲಿ 35 ಬಿಪಿಎಸ್ ಅಂತಿಮ ದರ ಏರಿಕೆ ನಿರೀಕ್ಷಿಸಲಾಗಿದೆ," ಎಂದು ಕೂಡಾ ತಿಳಿಸಿದ್ದಾರೆ. ಬಾರ್ಕ್ಲೇಸ್ ಇಂಡಿಯಾದ ಮುಖ್ಯ ಅರ್ಥಶಾಸ್ತ್ರಜ್ಞ ರಾಹುಲ್ ಬಜೋರಿಯಾ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂದಿನ ವಾರ 50 ಬೇಸಿಸ್ ಪಾಯಿಂಟ್ ರೆಪೋ ದರ ಹೆಚ್ಚಳ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಆರ್‌ಬಿಐ ಎಂದು 25 ರಿಂದ 35 ಬಿಪಿಎಸ್‌ಗಳಷ್ಟು ರೆಪೋ ದರ ಅಧಿಕ ಮಾಡುತ್ತದೆಯೋ ಆಗ ಹಣದುಬ್ಬರದ ಕೆಟ್ಟ ಹಂತವು ಮುಗಿದಿದೆ ಎಂದು ಆರ್‌ಬಿಐ ವಿಶ್ವಾಸ ಹೊಂದಿದೆ ಎಂದು ಸೂಚಿಸುತ್ತದೆ. ಆದರೆ ವಿದೇಶೀ ವಿನಿಮಯ ಮಾರುಕಟ್ಟೆಯಲ್ಲಿನ ಇತ್ತೀಚಿನ ಬೆಳವಣಿಗೆಗಳು ಮೂಲಾಂಕ 50 ರಷ್ಟು ದರ ಏರಿಕೆಗೆ ಪ್ರೇರಣೆ ನೀಡಬಹುದು ಎಂದು ಬ್ಯಾಂಕ್ ಆಫ್ ಬರೋಡಾದ ಮುಖ್ಯ ಅರ್ಥಶಾಸ್ತ್ರಜ್ಞ ಮದನ್ ಸಬ್ನವಿಸ್ ತಿಳಿಸಿದ್ದಾರೆ.

Breaking: ರೆಪೋ ದರ ಮತ್ತೆ 50 ಮೂಲಾಂಕ ಏರಿಸಿದ ಆರ್‌ಬಿಐBreaking: ರೆಪೋ ದರ ಮತ್ತೆ 50 ಮೂಲಾಂಕ ಏರಿಸಿದ ಆರ್‌ಬಿಐ

 ಮೂರು ಬಾರಿ ರೆಪೋ ದರ ಏರಿಕೆ

ಮೂರು ಬಾರಿ ರೆಪೋ ದರ ಏರಿಕೆ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೋ ದರವನ್ನು ಕಳೆದ ತಿಂಗಳು ಮತ್ತೆ ಏರಿಕೆ ಮಾಡಿದೆ. ಆರ್‌ಬಿಐ ರೆಪೋ ದರವನ್ನು 50 ಮೂಲಾಂಕ ಏರಿಕೆ ಮಾಡಿದ್ದು, ಶೇಕಡ 5.4ಕ್ಕೆ ತಲುಪಿದೆ. ಏಪ್ರಿಲ್‌ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಸತತ 10 ಬಾರಿಯೂ ರೆಪೋ ದರದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡಿತ್ತು. ಆದರೆ ಹಣದುಬ್ಬರವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಮೇ ತಿಂಗಳಿನಲ್ಲಿ ಆರ್‌ಬಿಐ ರೆಪೋ ದರವನ್ನು ಕೂಡಲೇ ಜಾರಿಗೆ ಬರುವಂತೆ ಏರಿಕೆ ಮಾಡಿತ್ತು. ಆ ಬಳಿಕ ಆರ್‌ಬಿಐ ಜೂನ್‌ ತಿಂಗಳಿನಲ್ಲಿ ಮತ್ತೆ ರೆಪೋ ದರ ಹೆಚ್ಚಳ ಮಾಡಿತ್ತು. ಜೂನ್‌ನಲ್ಲಿ ರೆಪೋ ದರವನ್ನು ಆರ್‌ಬಿಐ 50 ಮೂಲಾಂಕ ಏರಿಕೆ ಮಾಡಿದ್ದು, ಶೇಕಡ 4.90ಕ್ಕೆ ತಲುಪಿತ್ತು. ಬಳಿಕ ಮತ್ತೆ 50 ಮೂಲಾಂಕ ಏರಿಕೆ ಮಾಡಿದೆ. ಸೆಪ್ಟೆಂಬರ್‌ನಲ್ಲಿಯೂ ಮತ್ತೆ ದರ ಹೆಚ್ಚಳ ನಿರೀಕ್ಷೆ ಇದೆ.

 ರೆಪೋ ದರ ಏರಿಕೆಯಾದರೆ ಏನಾಗುತ್ತದೆ?

ರೆಪೋ ದರ ಏರಿಕೆಯಾದರೆ ಏನಾಗುತ್ತದೆ?

ಸಾಮಾನ್ಯವಾಗಿ ಆರ್‌ಬಿಐ ರೆಪೋ ದರವನ್ನು ಹೆಚ್ಚಳ ಮಾಡಿದರೆ, ಬ್ಯಾಂಕ್‌ನಲ್ಲಿ ಸಾಲದ ಬಡ್ಡಿದರವನ್ನು ಅಧಿಕ ಮಾಡಲಾಗುತ್ತದೆ. ಹಾಗೆಯೇ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಕೂಡಾ ಹೆಚ್ಚಳ ಮಾಡಲಾಗುತ್ತದೆ. ಸಾಲದ ಬಡ್ಡಿದರ ಹೆಚ್ಚಿಸುವ ಕಾರಣದಿಂದಾಗಿ ಜನರಿಗೆ ಸಾಲದ ಇಎಂಐ ಹೊರೆ ಈಗಾಗಲೇ ಹೆಚ್ಚಾಗಿದೆ. ಈಗಾಗಲೇ ಬೆಲೆ ಏರಿಕೆಯಿಂದಾಗಿ ಜೇಬು ಸುಟ್ಟುಕೊಂಡಿರುವ ಜನರಿಗೆ ಇದು ಅಧಿಕ ಪ್ರಭಾವ ಬೀರಳಿದೆ.

English summary

RBI May Hike Interest Rates By 50 Basis Points Next Week

Reserve Bank of India May Hike Interest Rates By 50 Basis Points Next Week. here's details. read on.
Story first published: Saturday, September 24, 2022, 20:08 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X