For Quick Alerts
ALLOW NOTIFICATIONS  
For Daily Alerts

ಆರ್‌ಬಿಐ ಹಣಕಾಸು ನೀತಿ 2021ರ ಹೈಲೈಟ್ಸ್‌: ಪ್ರಮುಖ ನಿರ್ಧಾರಗಳೇನು?

|

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಇಂದು ಹಣಕಾಸು ನೀತಿ ಪರಿಶೀಲನಾ ಸಭೆಯಲ್ಲಿ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ರೆಪೋ ಮತ್ತು ರಿವರ್ಸ್ ರೆಪೋ ದರಗಳ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಂಡಿರುವುದಾಗಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ರೆಪೋ ದರವು ಶೇಕಡಾ 4ರಷ್ಟು ಮತ್ತು ರಿವರ್ಸ್ ರೆಪೋ ದರವು ಶೇ. 3.35 ಪ್ರತಿಶತದಷ್ಟು ಬದಲಾಗದೆ ಉಳಿದಿದೆ. ಜೊತೆಗೆ ಜಿಡಿಪಿ ಬೆಳವಣಿಗೆ ಮುನ್ಸೂಚನೆಯನ್ನು ಈ ಹಿಂದಿನ ಶೇಕಡಾ 10.5 ರಿಂದ ಶೇಕಡಾ 9.5ಕ್ಕೆ ತಗ್ಗಿಸಿದೆ.

ಆರ್‌ಬಿಐ ವಿತ್ತೀಯ ಪರಿಶೀಲನಾ ಸಭೆಯಲ್ಲಿ ಏನೆಲ್ಲಾ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂಬುದನ್ನು ಮುಂದೆ ತಿಳಿಯಿರಿ.

ರೆಪೋ, ರಿವರ್ಸ್‌ ರೆಪೋ ದರ ಬದಲಾವಣೆ ಇಲ್ಲ

ರೆಪೋ, ರಿವರ್ಸ್‌ ರೆಪೋ ದರ ಬದಲಾವಣೆ ಇಲ್ಲ

ಶುಕ್ರವಾರ (ಜೂನ್ 04) ದ್ವೈಮಾಸಿಕ ಹಣಕಾಸು ನೀತಿ ಪರಿಶೀಲನೆ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್‌ ರೆಪೋ ದರವನ್ನು ಈ ಹಿಂದಿನ ಶೇಕಡಾ 4ರಷ್ಟು ಮತ್ತು ರಿವರ್ಸ್ ರೆಪೋ ದರವನ್ನು ಶೇಕಡಾ 3.35ರಷ್ಟು ಉಳಿಸಿಕೊಂಡಿದೆ ಎಂದು ತಿಳಿಸಿದ್ದಾರೆ.

ರೆಪೋ ದರ ಎಂದರೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ದೇಶದ ವಾಣಿಜ್ಯ ಬ್ಯಾಂಕುಗಳಿಗೆ ಕೊಡುವ ಸಾಲದ ಮೇಲಿನ ಬಡ್ಡಿ ದರವಾಗಿದೆ. ಆದರೆ ಬ್ಯಾಂಕುಗಳಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಹಣ ಸಾಲ ಪಡೆದರೆ, ಅದರ ಮೇಲೆ ವಿಧಿಸುವ ಬಡ್ಡಿದರವನ್ನು ರಿವರ್ಸ್ ರೆಪೊ ದರ ಎನ್ನಲಾಗುತ್ತದೆ.

 

ಕೊರೊನಾ 2ನೇ ಅಲೆ ಪರಿಣಾಮ: ಜಿಡಿಪಿ ಬೆಳವಣಿಗೆ ಕುಸಿತದ ಮುನ್ಸೂಚನೆ

ಕೊರೊನಾ 2ನೇ ಅಲೆ ಪರಿಣಾಮ: ಜಿಡಿಪಿ ಬೆಳವಣಿಗೆ ಕುಸಿತದ ಮುನ್ಸೂಚನೆ

ಆರ್‌ಬಿಐ 2021-22ರ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆ ಮುನ್ಸೂಚನೆಯನ್ನು ಈ ಹಿಂದಿನ ಶೇಕಡಾ 10.5 ರಿಂದ ಶೇಕಡಾ 9.5ಕ್ಕೆ ತಗ್ಗಿಸಿದೆ. ಈಗಾಗಲೇ ಹಲವಾರು ಹಣಕಾಸು ಸಂಸ್ಥೆಗಳು ಕೋವಿಡ್ ಎರಡನೇ ಅಲೆಯಿಂದಾಗಿ ಭಾರತದ ಜಿಡಿಪಿ ದರವನ್ನು ಹಿಂದಿನ ಅಂದಾಜಿಕ್ಕಿಂತ ಇಳಿಕೆ ಮಾಡಿವೆ. ಇದರ ಜೊತೆಗೆ 2021-22ರ ಆರ್ಥಿಕ ವರ್ಷದಲ್ಲಿ ಚಿಲ್ಲರೆ ಹಣದುಬ್ಬರವು ಶೇ. 5.1 ಎಂದು ಆರ್‌ಬಿಐ ಅಂದಾಜಿಸಿದೆ.

40,000 ಕೋಟಿ ಮೌಲ್ಯದ ಸರ್ಕಾರಿ ಭದ್ರತೆ ಖರೀದಿ

40,000 ಕೋಟಿ ಮೌಲ್ಯದ ಸರ್ಕಾರಿ ಭದ್ರತೆ ಖರೀದಿ

ಜೂನ್ 17ರಂದು ಭಾರತೀಯ ರಿಸರ್ವ್ ಬ್ಯಾಂಕ್ 40,000 ಕೋಟಿ ಮೌಲ್ಯದ ಸರ್ಕಾರಿ ಭದ್ರತೆ ಖರೀದಿಸಲು ನಿರ್ಧರಿಸಿದೆ. ದ್ವಿತೀಯ ತ್ರೈಮಾಸಿಕದಲ್ಲಿ 1.20 ಲಕ್ಷ ಕೋಟಿ ಮೌಲ್ಯದ ಸರ್ಕಾರಿ ಭದ್ರತೆಗಳನ್ನು ಆರ್‌ಬಿಐ ಖರೀದಿ ಮಾಡಲಿದೆ. ಇದರ ಜೊತೆಗೆ ಸುಗಮ ದ್ರವ್ಯತೆ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಆರ್‌ಬಿಐ ಕಾರ್ಯಾಚರಣೆಯನ್ನು ಮುಂದುವರಿಸಲಿದೆ.

ಭಾರತದ ವಿದೇಶಿ ವಿನಿಮಯ ಸಂಗ್ರಹ $600 ಬಿಲಿಯನ್ ಮೀರಬಹುದು!

ಭಾರತದ ವಿದೇಶಿ ವಿನಿಮಯ ಸಂಗ್ರಹ $600 ಬಿಲಿಯನ್ ಮೀರಬಹುದು!

ವಿದೇಶಿ ವಿನಿಮಯ ಸಂಗ್ರಹವು 2021ರ ಜನವರಿ 29ಕ್ಕೆ ಕೊನೆಗೊಂಡ ವಾರದಲ್ಲಿ ದಾಖಲೆಯ ಗರಿಷ್ಠ 590.185 ಶತಕೋಟಿಯನ್ನು ಮುಟ್ಟಿದೆ. ಮೇ 7 ಕ್ಕೆ ಕೊನೆಗೊಂಡ ವಾರದಲ್ಲಿ, ವಿದೇಶಿ ವಿನಿಮಯ ಸಂಗ್ರಹವು 1.444 ಬಿಲಿಯನ್ ಡಾಲರ್ ಹೆಚ್ಚಳಗೊಂಡು, 589.465 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ.

ಮೇ 14ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು 563 ಮಿಲಿಯನ್ ಡಾಲರ್‌ಗೆ ಏರಿಕೆಯಾಗಿ 590.028 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ ಎಂದು ಆರ್‌ಬಿಐ ತಿಳಿಸಿತ್ತು. ಇದು 600 ಬಿಲಿಯನ್ ಡಾಲರ್ ಮೀರಬಹುದು ಎಂದು ಆರ್‌ಬಿಐ ಅಂದಾಜಿಸಿದೆ.

''ಕೋವಿಡ್ ಎರಡನೇ ಅಲೆಯು ಆರ್ಥಿಕ ಚೇತರಿಕೆಯನ್ನು ದುರ್ಬಲವಾಗಿಸಿದೆ ಹೊರತು ಅದನ್ನೂ ಸಂಪೂರ್ಣ ಕಸಿದುಕೊಂಡಿಲ್ಲ'' ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

 

ಆತಿಥ್ಯ ವಲಯಗಳಿಗೆ 15,000 ಕೋಟಿ ಸಾಲದ ಬೆಂಬಲ

ಆತಿಥ್ಯ ವಲಯಗಳಿಗೆ 15,000 ಕೋಟಿ ಸಾಲದ ಬೆಂಬಲ

ಸಂಪರ್ಕ ತೀವ್ರ ವಲಯಗಳಿಗೆ ಅಥವಾ ಆತಿಥ್ಯ ವಲಯಗಳಿಗೆ ಮಾರ್ಚ್ 31 ರವರೆಗೆ 15,000 ಕೋಟಿ ರೂ.ಗಳ ಪ್ರತ್ಯೇಕ ದ್ರವ್ಯತೆ ವಿಂಡೋವನ್ನು ತೆರೆಯಲಾಗುವುದು ಎಂದು ಆರ್‌ಬಿಐ ಹೇಳಿದೆ. ಈ ಕಾರ್ಯಕ್ರಮದಡಿ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು, ಪ್ರವಾಸೋದ್ಯಮ, ವಾಯುಯಾನ ಬೆಂಬಲ ಸೇವೆಗಳು ಮತ್ತು ಇತರ ಸೇವೆಗಳಿಗೆ ಬ್ಯಾಂಕುಗಳು ಸಾಲವನ್ನು ನೀಡಬಹುದು.

ಚಿಲ್ಲರೆ ಹಣದುಬ್ಬರ  ಶೇಕಡಾ 5.1ರಷ್ಟು ಏರಿಕೆ ಸಾಧ್ಯತೆ

ಚಿಲ್ಲರೆ ಹಣದುಬ್ಬರ ಶೇಕಡಾ 5.1ರಷ್ಟು ಏರಿಕೆ ಸಾಧ್ಯತೆ

ಗ್ರಾಹಕ ದರ ಸೂಚ್ಯಂಕ (ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರ 2021-22ರಲ್ಲಿ ಶೇಕಡಾ 5.1ರಷ್ಟು ತಲುಪಬಹುದು ಎಂದು ಅಂದಾಜಿಸಲಾಗಿದೆ. ಇದು Q1 5.2%, Q2 5.4%, Q3 4.7% ಮತ್ತು Q4 5.3% ಎಂದು ಅಂದಾಜಿಸಿದೆ.

English summary

RBI Monetary Policy 2021 Highlights and Key Decisions taken

The RBI on Friday kept the benchmark interest rate unchanged amid COVID-19 uncertainty and fears over inflation. Here the complete highlights of RBI's Monetary Policy
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X