For Quick Alerts
ALLOW NOTIFICATIONS  
For Daily Alerts

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ನೀತಿ ಪ್ರಮುಖಾಂಶಗಳು

By ಅನಿಲ್ ಆಚಾರ್
|

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಡಿಸೆಂಬರ್ ತಿಂಗಳ ದ್ವೈಮಾಸಿಕ ಹಣಕಾಸು ನೀತಿಯನ್ನು ಶುಕ್ರವಾರ (ಡಿಸೆಂಬರ್ 4, 2020) ಗವರ್ನರ್ ಶಕ್ತಿಕಾಂತ್ ದಾಸ್ ಘೋಷಣೆ ಮಾಡಿದ್ದು, ರೆಪೋ ಹಾಗೂ ರಿವರ್ಸ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇಂದಿನ ಘೋಷಣೆಯ ಪ್ರಮುಖಾಂಶಗಳು ಇಲ್ಲಿವೆ:

 

ರೆಪೋ ದರ ಕಡಿತವಿಲ್ಲ:
ಆರ್ಥಿಕ ಸನ್ನಿವೇಶವನ್ನು ಗಮನದಲ್ಲಿ ಇಟ್ಟುಕೊಂಡು, ಆರ್ ಬಿಐ ರೆಪೋ ದರ 4 ಪರ್ಸೆಂಟ್ ಹಾಗೂ ರಿವರ್ಸ್ ರೆಪೋ ದರ 3.35 ಪರ್ಸೆಂಟ್ ನಲ್ಲಿ ಮುಂದುವರಿಸಿದೆ. ಮಾರ್ಜಿನಲ್ ಸ್ಟ್ಯಾಂಡಿಂಗ್ ವ್ಯವಸ್ಥೆ ಹಾಗೂ ಬ್ಯಾಂಕ್ ದರದಲ್ಲಿ 4.25 ಪರ್ಸೆಂಟ್ ನೊಂದಿಗೆ ಯಾವುದೇ ಬದಲಾವಣೆ ಮಾಡಿಲ್ಲ.

 

ರಿಸರ್ವ್ ಬ್ಯಾಂಕ್ ನಿಂದ 4 ಪರ್ಸೆಂಟ್ ರೆಪೋ ದರ ಮುಂದುವರಿಕೆರಿಸರ್ವ್ ಬ್ಯಾಂಕ್ ನಿಂದ 4 ಪರ್ಸೆಂಟ್ ರೆಪೋ ದರ ಮುಂದುವರಿಕೆ

ಜಿಡಿಪಿ ಅಂದಾಜು:
ಹಣಕಾಸು ವರ್ಷ 2021ಕ್ಕೆ ರಿಯಲ್ ಜಿಡಿಪಿ -7.5 ಪರ್ಸೆಂಟ್ ಆಗಬಹುದು. ಮೂರನೇ ತ್ರೈಮಾಸಿಕದಲ್ಲಿ 1%, ನಾಲ್ಕನೇ ತ್ರೈಮಾಸಿಕದಲ್ಲಿ 0.7% ಆಗಬಹುದು ಎನ್ನಲಾಗಿದೆ. FY21ರ ದ್ವಿತೀಯಾರ್ಧದಲ್ಲಿ ಚೇತರಿಕೆ ಕಾಣಿಸಿಕೊಳ್ಳಬಹುದು. ಎರಡನೇ ತ್ರೈಮಾಸಿಕದ ಜಿಡಿಪಿ ಸಂಖ್ಯೆಯ ಆಧಾರದಲ್ಲಿ ಆರ್ ಬಿಐನಿಂದ ಬೆಳವಣಿಗೆ ಅಂದಾಜು ಪರಿಷ್ಕರಿಸಲಾಗಿದೆ. ಈ ಹಿಂದಿನ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರವನ್ನು 2020-21ನೇ ಸಾಲಿಗೆ ನೆಗೆಟಿವ್ (-) 9.5% ಆಗಬಹುದು ಎಂದು ಅಂದಾಜಿಸಲಾಗಿತ್ತು. 2020- 21ನೇ ಸಾಲಿಗೆ Q2: - 9.8%, Q3: -5.6% ಮತ್ತು Q4: - 0.5% ಇಳಿಕೆ ಆಗುವ ಅಂದಾಜಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ನೀತಿ ಪ್ರಮುಖಾಂಶಗಳು

ಹಣಕಾಸು ಪೂರೈಕೆ ನಿರ್ವಹಿಸಲಾಗುವುದು:
ಕೊರೊನಾ ಹಿನ್ನೆಲೆಯಲ್ಲಿ ಆರ್ಥಿಕತೆ ಕುಸಿತ ಆಗಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಅದನ್ನು ಎದುರಿಸುವ ನಿಟ್ಟಿನಲ್ಲಿ ಹಾಗೂ ನಗದನ್ನು ನಿರ್ವಹಿಸಬೇಕು.

ಹಣದುಬ್ಬರ:
ಸಿಪಿಐ (ಗ್ರಾಹಕ ದರ ಸೂಚ್ಯಂಕ) ಹಣದುಬ್ಬರವು ಮೂರನೇ ತ್ರೈಮಾಸಿಕದಲ್ಲಿ ಅಂದಾಜು 6.8% ಅಂದಾಜು ಮಾಡಲಾಗಿದೆ.

ಚಳಿಗಾಲದ ತಿಂಗಳಲ್ಲಿ ಕೆಲವು ಮಟ್ಟಿಗೆ ಪರಿಹಾರ ಸಿಗಬಹುದಾದರೂ ಹಣದುಬ್ಬರ ದರವು ಮೇಲ್ಮಟ್ಟದಲ್ಲೇ ಇರಲಿದೆ.

ಆರ್ ಬಿಐ ಹಾಕಿಕೊಂಡಿದ್ದ ಮಿತಿಯ ಆರು ಪರ್ಸೆಂಟ್ ಗಿಂತ ಮೇಲ್ಮಟ್ಟದಲ್ಲಿ ಸತತ ಏಳನೇ ತಿಂಗಳು ಹಣದುಬ್ಬರವು ಮೇಲ್ಮಟ್ಟದಲ್ಲಿದೆ. ಅದಕ್ಕೆ ಕಾರಣ ಆಗಿರುವುದು ಪದಾರ್ಥಗಳ ಬೆಲೆ ಏರಿಕೆ, ಕಾರ್ಮಿಕರು ಅಗತ್ಯ ಸಂಖ್ಯೆಯಲ್ಲಿ ಸಿಗದಿರುವುದು, ಅಕಾಲಿಕವಾದ ಮಳೆ ಇತ್ಯಾದಿ ಆಗಿದೆ.

English summary

RBI Monetary Policy Highlights And Key Decisions - 4 December

RBI Monetary Policy Highlights - 4 December 2020. Check out the highlights and key decisions in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X