For Quick Alerts
ALLOW NOTIFICATIONS  
For Daily Alerts

ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದ RBI

|

ಕೊರೊನಾ ಬಿಕ್ಕಟ್ಟಿನ ಮಧ್ಯೆ ಸತತವಾಗಿ ರೆಪೋ ದರವನ್ನು ಇಳಿಸುತ್ತಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗುರುವಾರ (ಆಗಸ್ಟ್ 6, 2020) ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 4% ದರದಲ್ಲೇ ಮುಂದುವರಿಸಿದೆ. ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಆರ್ ಬಿಐ ಅಧ್ಯಕ್ಷ ಶಕ್ತಿಕಾಂತ ದಾಸ್, ಕೇಂದ್ರಬ್ಯಾಂಕ್ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಘೋಷಣೆ ಮಾಡಿದರು.

 

ಆಗಸ್ಟ್ 4ರಿಂದ 6ರ ತನಕ ಸಭೆ ನಡೆದಿತ್ತು. ಈ ಸಮಿತಿಯ ಅಧಿಕಾರಾವಧಿ ನಾಲ್ಕು ವರ್ಷವಾಗಿದ್ದು, ಅದು ಪೂರ್ಣಗೊಳ್ಳುವ ಮುನ್ನ ಕೊನೆ ಬಾರಿಗೆ ನಡೆಯುತ್ತಿರುವ ಸಭೆ ಇದಾಗಿದೆ. ಹಣದುಬ್ಬರ ನಿಯಂತ್ರಣ ಹಾಗೂ ಬೆಳವಣಿಗೆ ಎರಡನ್ನೂ ಗಮನದಲ್ಲಿ ಇಟ್ಟುಕೊಂಡು, ಇಂದಿನ ತೀರ್ಮಾನ ಮಾಡಲಾಗಿದೆ.

 

ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆಗಳು ಹೆಚ್ಚಾಗಬೇಕಿದೆ: ಶಕ್ತಿಕಾಂತ ದಾಸ್ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆಗಳು ಹೆಚ್ಚಾಗಬೇಕಿದೆ: ಶಕ್ತಿಕಾಂತ ದಾಸ್

ಕಳೆದ ಒಂದೂವರೆ ವರ್ಷದಲ್ಲಿ 250 ಬೇಸಿಸ್ ಪಾಯಿಂಟ್ ಕಡಿತ ಮಾಡಿದೆ ಆರ್ ಬಿಐ. ಅದರಲ್ಲೂ ಕೊರೊನಾ ಬಿಕ್ಕಟ್ಟು ಆರಂಭವಾದ ಮೇಲೆ 115 ಬೇಸಿಸ್ ಪಾಯಿಂಟ್ ಇಳಿಕೆ ಮಾಡಲಾಗಿದೆ. ರೆಪೋ ಹಾಗೂ ರಿವರ್ಸ್ ರೆಪೋ ಎಂಬ ಈ ಎರಡೂ ಪದಗಳನ್ನು ನೀವು ಆಗಾಗ ಕೇಳುತ್ತಲೇ ಇರುತ್ತೀರಿ. ಹಾಗಿದ್ದರೆ ಈ ರೆಪೋ- ರಿವರ್ಸ್ ರೆಪೋ ದರಕ್ಕೆ ಏನು ವ್ಯತ್ಯಾಸ ಅನ್ನೋದನ್ನು ತಿಳಿದುಕೊಂಡು ಬಿಡಿ.

ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದ RBI

ರೆಪೋ ದರ ಎಂದರೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ದೇಶದ ವಾಣಿಜ್ಯ ಬ್ಯಾಂಕ್ ಗಳಿಗೆ ಕೊಡುವ ಸಾಲದ ಮೇಲಿನ ಬಡ್ಡಿ ದರ. ವಾಣಿಜ್ಯ ಬ್ಯಾಂಕ್ ಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ ಬಿಐನಿಂದ ಹಣ ಪಡೆಯುತ್ತವೆ. ಹಾಗೆ ಪಡೆದ ಹಣಕ್ಕೆ ಬಡ್ಡಿ ಪಾವತಿಸುತ್ತವೆ. ಆ ಬಡ್ಡಿ ದರವೇ ರೆಪೋ ದರ.

ಮಾರುಕಟ್ಟೆಯಲ್ಲಿ ಹಣದ ಕೊರತೆ ಎದುರಾದಾಗ ರಿಸರ್ವ್‌ ಬ್ಯಾಂಕ್‌ ನಿಂದ ರೆಪೋ ದರವನ್ನು ಇಳಿಸುವ ಕ್ರಮ ಕೈಗೊಳ್ಳುತ್ತದೆ. ಆರ್‌ ಬಿಐನಿಂದ ಕಡಿಮೆ ಬಡ್ಡಿಗೆ ಹಣ ಸಿಗುವುದರಿಂದ ಅದರ ಲಾಭವನ್ನು ಬ್ಯಾಂಕ್ ಗಳು ಗ್ರಾಹಕರಿಗೂ ವರ್ಗಾಯಿಸಬಹುದು. ಇದರಿಂದ ಬ್ಯಾಂಕ್ ಗ್ರಾಹಕರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲಗಳು ಲಭ್ಯವಾಗುತ್ತವೆ.

ಬ್ಯಾಂಕ್ ಗಳಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಹಣ ಸಾಲ ಪಡೆದರೆ, ಅದರ ಮೇಲೆ ವಿಧಿಸುವ ಬಡ್ಡಿದರವನ್ನು ರಿವರ್ಸ್ ರೆಪೊ ದರ ಎನ್ನಲಾಗುತ್ತದೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಅತ್ಯಧಿಕ ಹಣವು ಚಲಾವಣೆಯಾಗುತ್ತಿದೆ ಎಂದು ಅನಿಸಿದರೆ ಆರ್‌ಬಿಐ ರಿವರ್ಸ್ ರೆಪೊ ಎಂಬ ಆಯುಧವನ್ನು ಬಳಸುತ್ತದೆ. ಎಲ್ಲಾದರೂ ರಿವರ್ಸ್ ರೆಪೊ ದರ ಹೆಚ್ಚಾಗಿದೆಯೆಂದರೆ ಆರ್ ಬಿಐ ಬ್ಯಾಂಕುಗಳಿಂದ ಆಕರ್ಷಕ ಬಡ್ಡಿದರಕ್ಕೆ ಹಣ ಸಾಲ ಪಡೆಯುತ್ತಿದೆ ಎಂದರ್ಥ.

English summary

RBI Monetary Policy: Repo Rate Unchanged For August

RBI continued repo rate unchanged at 4%, announced by Shaktikantha Das on Thursday (August 6, 2020).
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X