For Quick Alerts
ALLOW NOTIFICATIONS  
For Daily Alerts

ಮಾಸ್ಟರ್‌ಕಾರ್ಡ್‌ಗೆ ಆರ್‌ಬಿಐ ನಿರ್ಬಂಧ: ಜುಲೈ 22ರಿಂದ ಆದೇಶ ಜಾರಿ

|

ಅಮೆರಿಕಾ ಮೂಲದ ಖ್ಯಾತ ಹಣಕಾಸು ಸಂಸ್ಥೆಯ ಮಾಸ್ಟರ್‌ ಕಾರ್ಡ್‌ಗೆ , ಭಾರತೀಯ ರಿಸರ್ವ್ ಬ್ಯಾಂಕ್ ಮಾಸ್ಟರ್ ಸ್ಟ್ರೋಕ್ ನೀಡಿದೆ. ಪಾವತಿ ವ್ಯವಸ್ಥೆಗಳ ಡೇಟಾವನ್ನು ಸಂಗ್ರಹಿಸುವ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪಾವತಿ ವ್ಯವಸ್ಥೆ ಆಪರೇಟರ್ ಮಾಸ್ಟರ್‌ಕಾರ್ಡ್‌ ವಿರುದ್ಧ ಆರ್‌ಬಿಐ ನಿಷೇಧ ಹೇರಿದೆ.

 

ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಸೇರಿದಂತೆ ಹಲವು ರೂಪದಲ್ಲಿ ಮಾಸ್ಟರ್‌ಕಾರ್ಡ್ ಸೇವೆ ನೀಡುತ್ತಿದೆ. ಹಣ ಹಿಂಪಡೆಯುವಿಕೆ, ಪಾವತಿ ಸೇರಿದ ವಹಿವಾಟುಗಳಲ್ಲಿ ಬಹುತೇಕರು ಮಾಸ್ಟರ್‌ಕಾರ್ಡ್ ಬಳಕೆ ಮಾಡುತ್ತಾರೆ. ಹಲವು ಬ್ಯಾಂಕ್‌ಗಳ ಡೆಬಿಟ್, ಕ್ರೆಡಿಟ್‌ ಕಾರ್ಡ್‌ನಲ್ಲಿ ಮಾಸ್ಟರ್‌ಕಾರ್ಡ್ ನಿರ್ವಹಣೆ ಪ್ರಮುಖ ಪಾತ್ರವಹಿಸುತ್ತದೆ.

ಮಾಸ್ಟರ್‌ಕಾರ್ಡ್‌ಗೆ ಆರ್‌ಬಿಐ ನಿರ್ಬಂಧ: ಜುಲೈ 22ರಿಂದ ಆದೇಶ ಜಾರಿ

ಆದರೆ ಬಳಕೆದಾರರ ಡೇಟಾ ಸಂಗ್ರಹಣೆಯಲ್ಲಿ ನಿಯಮ ಉಲ್ಲಂಘನೆ ಹಿನ್ನಲೆಯಲ್ಲಿ ಆರ್‌ಬಿಐ ಜುಲೈ 22ರಿಂದ ಜಾರಿಗೆ ಬರುವಂತೆ ಆದೇಶ ಜಾರಿಗೊಳಸಿದ್ದು, ಜುಲೈ 22 ರಿಂದ ಹೊಸ ಗ್ರಾಹಕರಿಗೆ ಮಾಸ್ಟರ್‌ಕಾರ್ಡ್ ವಿತರಿಸದಂತೆ ನಿರ್ಬಂಧ ಹೇರಿದೆ.

ಮಾಸ್ಟರ್‌ ಕಾರ್ಡ್‌ಗೆ ಸಾಕಷ್ಟು ಸಮಯ ಮತ್ತು ಸಾಕಷ್ಟು ಅವಕಾಶಗಳನ್ನು ನೀಡಲಾಗಿದ್ದರೂ, "ಪಾವತಿ ವ್ಯವಸ್ಥೆಯ ದತ್ತಾಂಶ ಸಂಗ್ರಹಣೆ" ಕುರಿತ ನಿರ್ದೇಶನಗಳನ್ನು ಪಾಲನೆ ಮಾಡಿಲ್ಲ ಎಂದು ಆರ್ ಬಿಐ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.

ಆದರೆ ಈಗಾಗಲೇ ಮಾಸ್ಟರ್‌ಕಾರ್ಡ್ ಬಳಕೆ ಮಾಡುತ್ತಿರುವ ಗ್ರಾಹಕರು ಆತಂಕ ಪಡಬೇಕಿಲ್ಲ. ಅಸ್ತಿತ್ವದಲ್ಲಿರುವ ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

English summary

RBI Restricts Mastercard From Issuing New Credit, Debit Cards In India From 22 July 2021

The RBI on Wednesday imposed restrictions on Mastercard Asia / Pacific Pte Ltd (Mastercard) from onboarding new domestic debit, credit or prepaid customers on its card network. The ban on Mastercard issuing new cards takes effect on 22 July.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X