For Quick Alerts
ALLOW NOTIFICATIONS  
For Daily Alerts

ಫೀಚರ್‌ ಪೋನ್‌ಗಾಗಿ ಡಿಜಿಟಲ್‌ ಪಾವತಿ ವ್ಯವಸ್ಥೆ ಶೀಘ್ರ ಪ್ರಾರಂಭ: RBI

|

ಆರ್‌ಬಿಐ ಹಣಕಾಸು ನೀತಿಯನ್ನು ಬುಧವಾರ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಬಿಡುಗಡೆ ಮಾಡಿದ್ದಾರೆ. ಈ ಸಂದರ್ಭದಲ್ಲಿಯೇ ಕೇಂದ್ರ ಬ್ಯಾಂಕ್ ಆರ್‌ಬಿಐ ಫೀಚರ್ ಫೋನ್‌ಗಳಿಗಾಗಿ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಪ್ರಾರಂಭಿಸುತ್ತದೆ ಎಂದು ಘೋಷಿಸಿದ್ದಾರೆ.

ಆರ್‌ಬಿಐ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಆಧಾರಿತ ಪಾವತಿ ವೈಶಿಷ್ಟ್ಯವು ಫೀಚರ್‌ ಫೋನ್‌ಗಳಲ್ಲಿ ಕೂಡಾ ಲಭ್ಯವಾಗುವಂತೆ ಮಾಡಲು ಆರ್‌ಬಿಐ ಸಿದ್ಧವಾಗಿದೆ. ಆರ್‌ಬಿಐ ಈ ಕ್ರಮವು ಮುಂದಿನ ದಿನಗಳಲ್ಲಿ ಇಂಟರ್‌ನೆಟ್‌ ಮುಕ್ತ ಯುಪಿಐ ಪಾವತಿ ವ್ಯವಸ್ಥೆಗೆ ನಾಂದಿ ಹಾಡುವ ಸಾಧ್ಯತೆಯನ್ನು ಹೆಚ್ಚಿಸಿದೆ.

 ಯುಪಿಐನಲ್ಲಿ ದಾಖಲೆಯ 7.7 1 ಟ್ರಿಲಿಯನ್ ಮೌಲ್ಯದ 4.21 ಬಿಲಿಯನ್ ವಹಿವಾಟು ಯುಪಿಐನಲ್ಲಿ ದಾಖಲೆಯ 7.7 1 ಟ್ರಿಲಿಯನ್ ಮೌಲ್ಯದ 4.21 ಬಿಲಿಯನ್ ವಹಿವಾಟು

ಈ ಬಗ್ಗೆ ಅಧಿಕ ಮಾಹಿತಿ ನೀಡುತ್ತಾ ಶಕ್ತಿಕಾಂತ್‌ ದಾಸ್‌ ದೇಶದಲ್ಲಿ ಜನರಿಗೆ ಯುಪಿಐ ಪಾವತಿ ವ್ಯವಸ್ಥೆಯನ್ನು ಸರಳಗೊಳಿಸುವ ಮೂರು ವಿಧಾನವನ್ನು ಪ್ರಸ್ತುತ ಪಡಿಸಿದ್ದಾರೆ. ಯುಪಿಐ ಏಕ, ಅತೀ ದೊಡ್ಡ ಚಿಲ್ಲರೆ ಪಾವತಿ ವ್ಯವಸ್ಥೆಯಾಗಿದೆ. ಇದನ್ನು ದೇಶದಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ. ಅತೀ ಮುಖ್ಯವಾಗಿ ಸಣ್ಣ ಮೊತ್ತದ ಹಣವನ್ನು ಪಾವತಿ ಮಾಡುವ ಸಲುವಾಗಿ ಈ ವಿಧಾನವನ್ನು ಪಾಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಫೀಚರ್‌ ಪೋನ್‌ಗಾಗಿ ಡಿಜಿಟಲ್‌ ಪಾವತಿ ವ್ಯವಸ್ಥೆ ಶೀಘ್ರ ಪ್ರಾರಂಭ: RBI

ಈ ಡಿಜಿಟಲ್‌ ಪಾವತಿ ವ್ಯವಸ್ಥೆಯು ಗ್ರಾಹಕರಿಗೆ ಇನ್ನಷ್ಟು ಸುಲಭಗೊಳಿಸಲು, ಹಣಕಾಸು ಮಾರುಕಟ್ಟೆಯ ವಿವಿಧ ವಿಭಾಗಗಳಲ್ಲಿ ಚಿಲ್ಲರೆ ಗ್ರಾಹಕರು ಹೆಚ್ಚಾಗಿ ಉಪಯೋಗ ಮಾಡುವುದನ್ನು ಪ್ರೋತ್ಸಾಹ ಮಾಡಲು, ಸೇವಾ ಪೂರೈಕೆಯ ಸಾಮರ್ಥ್ಯವನ್ನು ಅಧಿಕ ಮಾಡಲು ಫೀಚರ್‌ ಫೋನ್‌ಗಾಗಿ ಯುಪಿಐ ಆಧಾರಿತ ಪಾವತಿ ವ್ಯವಸ್ಥೆಯನ್ನು ಪ್ರಾರಂಭ ಮಾಡುವ ಪ್ರಸ್ತಾಪ ಮಾಡಲಾಗಿದೆ ಎಂದು ತಿಳಿಸಿದರು.

ಯುಪಿಐ ಪಾವತಿ ವ್ಯವಸ್ಥೆ ಇನ್ನಷ್ಟು ಸರಳ

ಸಣ್ಣ ಮೊತ್ತದ ಹಣವನ್ನು ಪಾವತಿ ಮಾಡುವುದನ್ನು ಇನ್ನಷ್ಟು ಸರಳೀಕರಣ ಮಾಡಲಾಗುತ್ತದೆ. ಸಣ್ಣ ಮೊತ್ತದ ಹಣದ ವ್ಯವಹಾರ ಮಾಡುವ ವ್ಯವಸ್ಥೆಯನ್ನು ಸರಳ ಮಾಡುವ ನಿಟ್ಟಿನಲ್ಲಿ ಯುಪಿಐ ಅಪ್ಲಿಕೇಶನ್‌ಗಳಲ್ಲಿ 'ಆನ್-ಡಿವೈಸ್' ವ್ಯಾಲೆಟ್‌ನ ಕಾರ್ಯವಿಧಾನ ಅಳವಡಿಸಲಾಗುತ್ತದೆ ಎಂದು ಕೂಡಾ ಹೇಳಿದ್ದಾರೆ. ಪತ್ರಿಕಾಗೋಷ್ಠಿಯ ವೇಳೆ ಮಾತನಾಡಿದ ಆರ್‌ಬಿಐ ಗವರ್ನರ್‌, ಚಿಲ್ಲರೆ ನೇರ ಯೋಜನೆಗಾಗಿ ಯುಪಿಐ ಮೂಲಕ ಪಾವತಿಗಳ ವಹಿವಾಟಿನ ಮಿತಿಯನ್ನು ರೂ 2 ಲಕ್ಷದಿಂದ ರೂ 5 ಲಕ್ಷಕ್ಕೆ ಹೆಚ್ಚಿಸಲು ಪ್ರಸ್ತಾಪವನ್ನು ಕೂಡಾ ಮಾಡಿದ್ದಾರೆ.

ಪ್ರಮುಖ ನೀತಿ ದರ ಬದಲಾಗಿಲ್ಲ: ಆರ್‌ಬಿಐ ಸಭೆ,ನಿರ್ಣಯ ಮುಖ್ಯಾಂಶಗಳುಪ್ರಮುಖ ನೀತಿ ದರ ಬದಲಾಗಿಲ್ಲ: ಆರ್‌ಬಿಐ ಸಭೆ,ನಿರ್ಣಯ ಮುಖ್ಯಾಂಶಗಳು

ಯುಪಿಐನಲ್ಲಿ ದಾಖಲೆಯ ವಹಿವಾಟು

ಯುನಿಫೈಡ್‌ ಪೇಮೆಂಟ್‌ ಇಂಟರ್‌ಫೇಸ್‌ ಅಥವಾ ಯುಪಿಐ ಮೂಲಕ ಅಕ್ಟೋಬರ್‌ನಲ್ಲಿ ಸುಮಾರು 4 ಬಿಲಿಯನ್‌ ವಹಿವಾಟುಗಳು ನಡೆದಿದೆ. ಈ ವಹಿವಾಟು ಹೊಸ ದಾಖಲೆಯನ್ನು ಸೃಷ್ಟಿ ಮಾಡಿದೆ. ಪ್ರಾರಂಭದಿಂದಲೂ ಈ ಪ್ಲಾಟ್‌ಫಾರ್ಮ್‌ನಲ್ಲಿ ನಡೆದ ವಹಿವಾಟುಗಳ ಪೈಕಿ ಇದು ಗರಿಷ್ಠ ವಹಿವಾಟು ಆಗಿದೆ. ಈ ಹಬ್ಬಗಳ ನಡುವೆ ಈ ವಹಿವಾಟು ದಾಖಲೆಯ ಮಟ್ಟಕ್ಕೆ ಏರಿದೆ. ಅಕ್ಟೋಬರ್‌ನಲ್ಲಿ ಯುಪಿಐನಲ್ಲಿ 7.7 1 ಟ್ರಿಲಿಯನ್ ಮೌಲ್ಯದ ದಾಖಲೆಯ 4.21 ಬಿಲಿಯನ್ ವಹಿವಾಟು ಮಾಡಲಾಗಿದೆ. ಸೆಪ್ಟೆಂಬರ್‌ನಲ್ಲಿ ಯುಪಿಐನಲ್ಲಿ 650 ಕೋಟಿ ರೂಪಾಯಿ ಮೌಲ್ಯದ 3.65 ಬಿಲಿಯನ್‌ ವಹಿವಾಟು ನಡೆದಿತ್ತು. ಒಂದು ತಿಂಗಳಿನಲ್ಲೇ ಯುಪಿಐ ವಹಿವಾಟಿನಲ್ಲಿ ಶೇಕಡ 15 ರಷ್ಟು ಏರಿಕೆ ಕಂಡು ಬಂದಿದೆ. ಹಾಗೆಯೇ ಯುಪಿಐ ವಹಿವಾಟಿನ ಮೌಲ್ಯವನ್ನು ನೋಡುವುದಾದರೆ ಸೆಪ್ಟೆಂಬರ್‌ಗಿಂತ ಅಕ್ಟೋಬರ್‌ನಲ್ಲಿ ಶೇಕಡ 18.5 ರಷ್ಟು ಏರಿಕೆ ಆಗಿದೆ. ವರ್ಷದಿಂದ ವರ್ಷಕ್ಕೆ ಲೆಕ್ಕ ಹಾಕಲಾಗುವ ಯುಪಿಐನ ವಹಿವಾಟು ಲೆಕ್ಕಾಚಾರದ ಸಂದರ್ಭದಲ್ಲಿ ವಹಿವಾಟು ದ್ವಿಗುಣಗೊಂಡಿರುವುದು ಕಂಡು ಬಂದಿದೆ. ವಹಿವಾಟಿನ ಮೌಲ್ಯವು ಶೇಕಡ ನೂರರಷ್ಟು ಜಿಗಿದಿದೆ. 2016 ರಲ್ಲಿ ಮೊದಲು ಪ್ರಾರಂಭವಾದ ಯುನಿಫೈಡ್‌ ಪೇಮೆಂಟ್‌ ಇಂಟರ್‌ಫೇಸ್‌ ಅಥವಾ ಯುಪಿಐ ಶೀಘ್ರದಲ್ಲೇ ವ್ಯಾಪಕವಾಗಿ ಬಳಕೆಯನ್ನು ಮಾಡಲು ಸೂಕ್ತವಾದ ವೇದಿಕೆಯಾಗಿ ಮಾರ್ಪಟ್ಟಿದೆ. ಯುಪಿಐ ಬಳಕೆಯ ಮೂಲಕ ಆರ್ಥಿಕ ವ್ಯವಹಾರವನ್ನು ನಡೆಸುವ ವೇದಿಕೆಯನ್ನು ಜನರು ಅಧಿಕವಾಗಿ ಅವಲಂಬಿಸಲು ಆರಂಭ ಮಾಡಿದ್ದಾರೆ. ಅದರಲ್ಲೂ ಕೊರೊನಾ ವೈರಸ್‌ ಸೋಂಕು ಕಾಣಿಸಿಕೊಂಡ ಬಳಿಕ ಜನರು ಆನ್‌ಲೈನ್‌ ವಹಿವಾಟಿಗೆ ಜೋತು ಬಿದ್ದಿರುವ ಹಿನ್ನೆಲೆಯಲ್ಲಿ ಈಗ ಯುಪಿಐ ವಹಿವಾಟು ಅಧಿಕವಾಗಿದೆ.

English summary

RBI Soon to Launch Digital Payments For Feature Phone Users

RBI Soon to Launch Digital Payments For Feature Phone Users.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X