For Quick Alerts
ALLOW NOTIFICATIONS  
For Daily Alerts

ರೆಪೋ ದರ ಮತ್ತೆ ಹೆಚ್ಚಳಕ್ಕೆ ಸಜ್ಜು: ಸಾಲದ ಇಎಂಐ ಹೊರೆ ಏರಿಕೆ

|

ಹಣದುಬ್ಬರವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಈಗಾಗಲೇ ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡಿದೆ. ಈಗ ಮತ್ತೆ ಬುಧವಾರ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೋ ದರವನ್ನು ಹೆಚ್ಚಳ ಮಾಡುವ ಸಿದ್ದತೆಯನ್ನು ಮಾಡಿಕೊಂಡಿದೆ.

ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡಿದ ಬೆನ್ನಲ್ಲೇ ಸಾಮಾನ್ಯವಾಗಿಯೇ ಬ್ಯಾಂಕುಗಳು ಸಾಲದ ಬಡ್ಡಿದರವನ್ನು, ಎಫ್‌ಡಿ ಮೇಲಿನ ಬಡ್ಡಿದರವನ್ನು ಏರಿಕೆ ಮಾಡುತ್ತದೆ. ಕಳೆದ ಬಾರಿ ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡಿದ ಹಿನ್ನೆಲೆ ಮೇ ತಿಂಗಳಲ್ಲಿಯೇ ಹಲವಾರು ಬ್ಯಾಂಕುಗಳು ಬ್ಯಾಂಕ್‌ಗಳು ತಮ್ಮ ಸಾಲ ಮತ್ತು ಠೇವಣಿ ದರಗಳನ್ನು ಹೆಚ್ಚಳ ಮಾಡಿದೆ.

 ರೆಪೋ ದರ ಏರಿಕೆಯಿಂದ ಎಫ್‌ಡಿ ರಿಟರ್ನ್ ಹೆಚ್ಚಳ ಸಾಧ್ಯತೆ: ಹೂಡಿಕೆಗೆ ಸುಸಮಯ ರೆಪೋ ದರ ಏರಿಕೆಯಿಂದ ಎಫ್‌ಡಿ ರಿಟರ್ನ್ ಹೆಚ್ಚಳ ಸಾಧ್ಯತೆ: ಹೂಡಿಕೆಗೆ ಸುಸಮಯ

ರೆಪೋ ದರವನ್ನು ಆರ್‌ಬಿಐ ಕಡಿತ ಮಾಡಿದಾಗ ಬ್ಯಾಂಕುಗಳು ಆ ದರ ಪಾಲನೆಯನ್ನು ಮಾಡಲು ಅಂದರೆ ಬ್ಯಾಂಕಿನಲ್ಲಿ ಸಾಲದ ದರ ಇಳಿಕೆ ಮಾಡಲು ಕೊಂಚ ಅಧಿಕ ಸಮಯವನ್ನು ತೆಗೆದುಕೊಳ್ಳುತ್ತದೆ. ಆದರೆ ರೆಪೋ ದರ ಅಧಿಕವಾದ ಸಂದರ್ಭದಲ್ಲಿ ಶೀಘ್ರವಾಗಿಯೇ ಸಾಲದ ಬಡ್ಡಿದರವನ್ನು ಏರಿಕೆ ಮಾಡುತ್ತದೆ.

 ರೆಪೋ ದರ ಮತ್ತೆ ಹೆಚ್ಚಳಕ್ಕೆ ಸಜ್ಜು: ಸಾಲದ ಇಎಂಐ ಹೊರೆ ಏರಿಕೆ

ಮತ್ತೆ ರೆಪೋ ದರ ಏರಿಕೆಗೆ ಆರ್‌ಬಿಐ ಸಜ್ಜು

ವಾರ ಕಳೆಯುತ್ತಿದ್ದಂತೆ ಬ್ಯಾಂಕ್‌ಗಳು ಆರ್‌ಬಿಐನ ನಿರೀಕ್ಷಿತ ದರ ಏರಿಕೆಯ ಹೊರೆಯನ್ನು ಜನರು ಮೇಲೆ ಹಾಕಿದೆ. ಇದರಿಂದಾಗಿ ಸಾಲಗಳ ಮೇಲಿನ ಮಾಸಿಕ ಇಎಂಐ ಕಂತು ಏರಿಕೆಯಾಗಿದೆ. ಇದು ಈಗಾಗಲೆ ಬೆಲೆ ಏರಿಕೆಯಿಂದ ತತ್ತಿರಿಸಿರುವ ಜನರ ಮೇಲೆ ಬರೆ ಎಳೆದಂತೆ ಆಗಿದೆ. ಹಣದುಬ್ಬರ ಮತ್ತಷ್ಟು ಏರಿಕೆ ಹೊಂದುತ್ತಿರುವ ನಡುವೆ ಆರ್‌ಬಿಐ ಮತ್ತೆ ರೆಪೋ ದರವನ್ನು ಹೆಚ್ಚಳ ಮಾಡಲು ಸಿದ್ಧವಾಗಿದೆ.

ಆಹಾರದಿಂದ ಹಿಡಿದು ಎಲ್ಲಾ ಸೇವೆಗಳ, ವಸ್ತುಗಳ ಬೆಲೆಯು ಈಗಾಗಲೇ ಗಗನಕ್ಕೆ ಏರಿದೆ. ಬಡ್ಡಿದರದಲ್ಲಿನ ಹೆಚ್ಚಳವು ಜನರ ಮಾಸಿಕ ಬಜೆಟ್ ಮೇಲೆ ಪರಿಣಾಮ ಬೀರಿದೆ. ಈ ನಡುವೆ ಈಗ ಜನರಿಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಆರ್ಥಿಕ ಬೆಳವಣಿಗೆಗೆ ಹಾನಿಯಾಗದಂತೆ ಏರುತ್ತಿರುವ ಹಣದುಬ್ಬರವನ್ನು ಎದುರಿಸುವ ಸಂದಿಗ್ಧತೆಯನ್ನು ಕೇಂದ್ರ ಬ್ಯಾಂಕ್ ಎದುರಿಸುತ್ತಿದೆ. ಕಳೆದ ತಿಂಗಳು ಆರ್‌ಬಿಐ ರೆಪೋ ದರವನ್ನು 40 ಬಿಪಿಎಸ್‌ನಿಂದ ಶೇಕಡ 4.40ಕ್ಕೆ ಏರಿಕೆ ಮಾಡಿತ್ತು. ಕೊನೆಯ ಬಾರಿಗೆ ರೆಪೋ ದರವನ್ನು ಮೇ 2020 ರಲ್ಲಿ ಇಳಿಕೆ ಮಾಡಲಾಗಿತ್ತು. ಅಂದಿನಿಂದ ಬದಲಾಗದೆ ಇರಿಸಲಾಗಿತ್ತು. ಆದರೆ ಹಣದುಬ್ಬರ ಹಿನ್ನೆಲೆ ಆರ್‌ಬಿಐ ರೆಪೋ ದರವನ್ನು ಹೆಚ್ಚಳ ಮಾಡಿತ್ತು.

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಕಳೆದ ತಿಂಗಳು ಈ ತಿಂಗಳು ಮತ್ತು ಮುಂದಿನ ಸಭೆಯಲ್ಲಿ ದರ ಏರಿಕೆಯ ಸುಳಿವು ನೀಡಿದ್ದರು. ಆದರೆ ಈ ಸಂದರ್ಭದಲ್ಲೇ ಸೆಂಟ್ರಲ್ ಬ್ಯಾಂಕ್‌ನ ಕಠಿಣ ಸಮತೋಲನ ಕಾಯಿದೆಯನ್ನು ಒಪ್ಪಿಕೊಂಡಿದ್ದಾರೆ.

English summary

RBI to Hike Interest Rates, Brace For Higher EMIs On Loans

The Reserve Bank of India (RBI) likely to hike interest rates on June 8, after an off-cycle increase last month to combat runaway inflation, Loan EMIs to increase. Know more.
Story first published: Monday, June 6, 2022, 11:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X