For Quick Alerts
ALLOW NOTIFICATIONS  
For Daily Alerts

ರಿಯಲ್ ಎಸ್ಟೇಟ್ ಬುಡ ಅಲುಗಾಡಿಸಿದ ವಾಣಿಜ್ಯ ಸಚಿವ ಗೋಯಲ್ ಹೇಳಿಕೆ

|

ನವದೆಹಲಿ, ಜೂನ್ 4: ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ನೀಡಿರುವ ಹೇಳಿಕೆ ದೇಶದ ರಿಯಲ್ ಎಸ್ಟೇಟ್ ಕ್ಷೇತ್ರದ ಬುಡವನ್ನೇ ಅಲುಗಾಡಿಸಿದೆ.

 

ಅಮೆಜಾನ್ 1 ಬಿಲಿಯನ್ ಡಾಲರ್ ಹೂಡಿಕೆಯಿಂದ ಭಾರತಕ್ಕೆ ಉಪಕಾರವಿಲ್ಲ : ಪಿಯೂಷ್ ಗೋಯೆಲ್ಅಮೆಜಾನ್ 1 ಬಿಲಿಯನ್ ಡಾಲರ್ ಹೂಡಿಕೆಯಿಂದ ಭಾರತಕ್ಕೆ ಉಪಕಾರವಿಲ್ಲ : ಪಿಯೂಷ್ ಗೋಯೆಲ್

ಇದರ ಪರಿಣಾಮವಾಗಿ ಅನೇಕ ರಿಯಲ್ ಎಸ್ಟೇಟ್ ಕಂಪೆನಿಗಳ ಷೇರುಗಳು ಇಂದು ದಿಢೀರ್ ಕುಸಿದು ಬಿದ್ದಿವೆ. ''ಸದ್ಯ ಕೋವಿಡ್ ಪರಿಣಾಮವಾಗಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಆಶಾದಾಯಕ ಬೆಳವಣಿಗೆ ಕಂಡು ಬರುತ್ತಿಲ್ಲ. ಕಂಪೆನಿಗಳು ದೊಡ್ಡ ಬೆಲೆಗಳಿಗೆ ಜೋತು ಬೀಳದೇ ಕಡಿಮೆ ದರಕ್ಕೆ ವ್ಯವಹಾರ ನಡೆಸಬೇಕು'' ಎಂದು ಪಿಯೂಷ್ ಗೋಯಲ್ ಹೇಳಿರುವುದು ದೊಡ್ಡ ಸಂಚಲನಕ್ಕೆ ಕಾರಣವಾಗಿದೆ.

ಇದರ ಪರಿಣಾಮವಾಗಿ ದೊಡ್ಡ ದೊಡ್ಡ ಕಂಪೆನಿಗಳ ಷೇರುಗಳು ಕುಸಿದು ಬಿದ್ದಿವೆ. ಮುಂದೆ ಓದಿ....

ಷೇರುಗಳ ಕುಸಿತ

ಷೇರುಗಳ ಕುಸಿತ

ಗೋದ್ರೆಜ್ ಪ್ರಾಪರ್ಟೀಸ್ (ಶೇ 4.12 ರಷ್ಟು), ಸುಂಟೆಕ್ ರಿಯಾಲ್ಟಿ (ಶೇ 1.88 ರಷ್ಟು), ಫೀನಿಕ್ಸ್ ಮಿಲ್ಸ್ (ಶೇ 1.81 ರಷ್ಟು), ಇಂಡಿಯಾಬುಲ್ಸ್ ರಿಯಲ್ ಎಸ್ಟೇಟ್ (ಶೇ 1.41 ರಷ್ಟು), ಶೋಭಾ (ಶೇ 0.86 ರಷ್ಟು) ಮತ್ತು ಡಿಎಲ್‌ಎಫ್ (ಶೇಕಡಾ 0.13) ಸೂಚ್ಯಂಕದಲ್ಲಿ ಹಿಂದುಳಿದಿವೆ. ನಿಫ್ಟಿ ಸೂಚ್ಯಂಕವು 197.40 ಕ್ಕೆ ಶೇ 1.72 ರಷ್ಟು ಕುಸಿದಿದೆ.

ಅವಸರದಲ್ಲಿ ಚೇತರಿಸಿಕೊಳ್ಳುವುದಿಲ್ಲ

ಅವಸರದಲ್ಲಿ ಚೇತರಿಸಿಕೊಳ್ಳುವುದಿಲ್ಲ

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು, ''ಮಾರುಕಟ್ಟೆಯಲ್ಲಿ ರಿಯಲ್ ಎಸ್ಟೇಟ್ ಅವಸರದಲ್ಲಿ ಚೇತರಿಸಿಕೊಳ್ಳುವುದಿಲ್ಲ ಮತ್ತು ವಾಸ್ತವಿಕ ಬೆಲೆಯಲ್ಲಿ ಮಾರಾಟ ಮಾಡುವುದು ಅತ್ಯುತ್ತಮ ಪರಿಹಾರವಾಗಿದೆ. ನಿಮ್ಮಲ್ಲಿ ಯಾರಾದರೂ ಸಮಯ ಹಿಡಿದಿಟ್ಟುಕೊಳ್ಳುವ ರೀತಿಯಲ್ಲಿ ಭಾವಿಸಿದರೆ, ಮಾರುಕಟ್ಟೆ ಅವಸರದಲ್ಲಿ ಸುಧಾರಿಸುತ್ತಿಲ್ಲ ಎಂದು ಹೇಳಿದರು.

ಬೇರೆ ಆಯ್ಕೆಗಳಿಲ್ಲ
 

ಬೇರೆ ಆಯ್ಕೆಗಳಿಲ್ಲ

"ನೀವು ಮಾರಾಟ ಮಾಡುವ ಮೊದಲು ನಿಮ್ಮ ಯೋಜನೆಗಳನ್ನು ಪೂರ್ಣಗೊಳಿಸಬೇಕು. ಏಕೆಂದರೆ ಖರೀದಿದಾರರು ನಿರ್ಮಾಣ ಹಂತದಲ್ಲಿದ್ದ ಯೋಜನೆಗಳನ್ನು ಖರೀದಿಸುವುದಿಲ್ಲ. ನನ್ನ ಜೀವನದಲ್ಲಿ, ನಾನು ಯಾರಿಂದಲೂ ನಿರ್ಮಾಣ ಹಂತದಲ್ಲಿದ್ದ ಫ್ಲಾಟ್ ಖರೀದಿಸಿರುವುದನ್ನು ನೋಡಿಲ್ಲ. ನಿಮ್ಮ ಯೋಜನೆಗಳನ್ನು ನೀವು ಪೂರ್ಣಗೊಳಿಸಬೇಕು, ಪಾಲುದಾರರನ್ನು ಕರೆತರಬೇಕು, ಹೂಡಿಕೆದಾರರನ್ನು ಪಡೆಯಬೇಕು. ಆದರೆ, ನಿರ್ಮಾಣವನ್ನು ಪೂರ್ಣಗೊಳಿಸದಿದ್ದರೆ, ವಾಸ್ತವಿಕ ಬೆಲೆಯಲ್ಲಿ ಮಾರಾಟ ಮಾಡಬೇಕು. ಬೇರೆ ಆಯ್ಕೆಗಳಿಲ್ಲ' ಎಂದು ಗೋಯಲ್ ಹೇಳಿದ್ದಾರೆ.

NAREDCO ಆಯೋಜಿಸಿದ್ದ ವೆಬಿನಾರ್

NAREDCO ಆಯೋಜಿಸಿದ್ದ ವೆಬಿನಾರ್

ಜೂನ್ 3 ರಂದು NAREDCO ಆಯೋಜಿಸಿದ್ದ ವೆಬಿನಾರ್‌ನಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಈ ಅಭಿಪ್ರಾಯಗಳನ್ನು ಹೊರಹಾಕಿದರು. ಇದರಿಂದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಬಿರುಗಾಳಿ ಎದ್ದಿದ್ದು, ಈ ಕ್ಷೇತ್ರ ಸದ್ಯ ಚೇತರಿಸಿಕೊಳ್ಳುವ ಲಕ್ಷಣವಿಲ್ಲ ಎಂದು ಹೇಳಲಾಗಿದೆ.

English summary

Real Estate Companies Shares Shaking After Minister Goyal Remark

Real Estate Companies Shares Shaking After Commerce Minister Piyush Goyal Remark On Real Estate.
Story first published: Thursday, June 4, 2020, 20:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X