For Quick Alerts
ALLOW NOTIFICATIONS  
For Daily Alerts

ಆ್ಯಪಲ್ ಕಂಪನಿಗೆ ಭರ್ಜರಿ ಆದಾಯ ತಂದುಕೊಟ್ಟ ಭಾರತ

|

ಐಫೋನ್ ತಯಾರಿಸುವ ಆ್ಯಪಲ್ ಸಂಸ್ಥೆಗೆ ಈ ವರ್ಷ ದಾಖಲೆಯ ಆದಾಯ ಲಭಿಸಿದೆ. ಸೆಪ್ಟೆಂಬರ್ ಅಂತ್ಯದವರೆಗಿನ ಒಂದು ವರ್ಷದಲ್ಲಿ ಆ್ಯಪಲ್ ಕಂಪನಿಯ ಆದಾಯ 394.3 ಬಿಲಿಯನ್ ಡಾಲರ್ ಆಗಿದೆ. ಅಂದರೆ ಸುಮಾರು 32 ಲಕ್ಷ ಕೋಟಿ ರೂಪಾಯಿ. ಕೊನೆಯ ತ್ರೈಮಾಸಿಕ ಅವಧಿಯೊಂದರಲ್ಲೇ 90.1 ಬಿಲಿಯನ್ ಡಾಲರ್ (7.43 ಲಕ್ಷ ಕೋಟಿ ರೂಪಾಯಿ) ಇದೆ ಎಂದು ಆ್ಯಪಲ್ ಕಂಪನಿಯ ಸಿಇಒ ಟಿಮ್ ಕುಕ್ ಸ್ವತಃ ಮಾಹಿತಿ ನೀಡಿದ್ದಾರೆ.

ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಆ್ಯಪಲ್ ಕಂಪನಿಯ ಉತ್ಪನ್ನಗಳಿಗೆ ಭಾರತ ಒಳ್ಳೆಯ ಮಾರುಕಟ್ಟೆಯಾಗಿದೆ. ಭಾರತದ ಜೊತೆ ಇತರ ಉದಯೋನ್ಮುಖ ಆರ್ಥಿಕತೆಯ ದೇಶಗಳಲ್ಲಿ ಐಫೋನ್ ಮತ್ತಿತರ ಉತ್ಪನ್ನಗಳು ಭರ್ಜರಿ ಮಾರಾಟ ಕಂಡಿವೆ. ಕಳೆದ ವರ್ಷದ ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕ ಅವಧಿಗೆ ಹೋಲಿಸಿದರೆ ಈ ಬಾರಿ ಶೇ. 8ರಷ್ಟು ಆದಾಯ ಹೆಚ್ಚಳವಾಗಿದೆ. ಇನ್ನು ವಾರ್ಷಿಕ ಆದಾಯವೂ ಕೂಡ ಹಿಂದಿನ ವರ್ಷದಕ್ಕಿಂತ ಶೇ. 8ರಷ್ಟು ಹೆಚ್ಚಾಗಿದೆ.

ಇಲಾನ್ ಮಸ್ಕ್‌ನಿಂದ ಟ್ಟಿಟ್ಟರ್ ಖರೀದಿ ಪೂರ್ಣ; ಕೆಲಸ ಬಿಟ್ಟ ಪರಾಗ್, ವಿಜಯಾ ಗಡ್ಡೆ ಮತ್ತಿತರರುಇಲಾನ್ ಮಸ್ಕ್‌ನಿಂದ ಟ್ಟಿಟ್ಟರ್ ಖರೀದಿ ಪೂರ್ಣ; ಕೆಲಸ ಬಿಟ್ಟ ಪರಾಗ್, ವಿಜಯಾ ಗಡ್ಡೆ ಮತ್ತಿತರರು

ಕೊನೆಯ ತ್ರೈಮಾಸಿಕದ ದಾಖಲೆ

ಕೊನೆಯ ತ್ರೈಮಾಸಿಕದ ದಾಖಲೆ

ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕ ಅವಧಿಯಲ್ಲಿ ಆ್ಯಪಲ್ ಗಳಿಸಿದ 90.1 ಬಿಲಿಯನ್ ಡಾಲರ್ ಆದಾಯ ಹೊಸ ದಾಖಲೆಯೇ ಆಗಿದೆ. ಹಿಂದೆಂದೂ ಯಾವ ವರ್ಷದಲ್ಲೂ ಈ ಅವಧಿಯಲ್ಲಿ ಇಷ್ಟು ಮಟ್ಟದ ಆದಾಯವನ್ನು ಆ್ಯಪಲ್ ಕಂಡಿದ್ದಿಲ್ಲ. ಭಾರತದಲ್ಲಿ ಆ್ಯಪಲ್ ಉತ್ಪನ್ನಗಳ ಮಾರಾಟದಲ್ಲಿ ಶೇ. 10ಕ್ಕಿಂತ ಹೆಚ್ಚು ಹೆಚ್ಚಳವಾಗಿದೆ.

"ಬಹುತೇಕ ಎಲ್ಲಾ ಭೂಭಾಗದಲ್ಲಿ ಈ ತ್ರೈಮಾಸಿಕ ಅವಧಿಯಲ್ಲಿ ನಮಗೆ ದಾಖಲೆಯ ಮೊತ್ತದ ಆದಾಯ ಸಿಕ್ಕಿದೆ. ಉದಯೋನ್ಮುಖ ಮಾರುಕಟ್ಟೆಗಳಲ್ಲಿ (Emerging Markets) ನಮ್ಮ ಉತ್ತಮ ಬೆಳವಣಿಗೆ ಮುಂದುವರಿದಿದೆ. ಭಾರತ, ಆಗ್ನೇಯ ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕ ಭಾಗಗಳಲ್ಲಿ ಡಬಲ್ ಡಿಜಿಟ್ ಪ್ರಗತಿ ಸಿಕ್ಕಿದೆ" ಎಂದು ನಿನ್ನೆ ಗುರುವಾರ ವಿಶ್ಲೇಷಕರ ಜೊತೆಗಿನ ಸಂವಾದದ ವೇಳೆ ಟಿಮ್ ಕುಕ್ ಹೇಳಿದ್ದಾರೆ.

ಅಮೆರಿಕದಲ್ಲಿ ಹಣಕಾಸು ವರ್ಷ ಶುರುವಾಗುವುದು ಅಕ್ಟೋಬರ್ 1ರಿಂದ. ಹೀಗಾಗಿ, ಸೆಪ್ಟೆಂಬರ್ 30ಕ್ಕೆ ಅದರ ಹಣಕಾಸು ವರ್ಷ ಮುಗಿಯುತ್ತದೆ. ಜುಲೈನಿಂದ ಸೆಪ್ಟೆಂಬರ್‌ವರೆಗಿನದ್ದು ಅಮೆರಿಕಕ್ಕೆ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕ ಅವಧಿಯಾಗಿರುತ್ತದೆ.

 ಚಿಪ್ ತಯಾರಿಕೆ ಬದಲು ಚಿಪ್ ಡಿಸೈನ್ ಉತ್ತಮವಲ್ಲವೇ?: ರಘುರಾಮ್ ರಾಜನ್ ಹೀಗೊಂದು ಹೋಲಿಕೆ ಚಿಪ್ ತಯಾರಿಕೆ ಬದಲು ಚಿಪ್ ಡಿಸೈನ್ ಉತ್ತಮವಲ್ಲವೇ?: ರಘುರಾಮ್ ರಾಜನ್ ಹೀಗೊಂದು ಹೋಲಿಕೆ

ಭಾರತದಲ್ಲಿ ಹೊಸ ದಾಖಲೆ
 

ಭಾರತದಲ್ಲಿ ಹೊಸ ದಾಖಲೆ

ಇದೇ ವೇಳೆ, ಆ್ಯಪಲ್ ಸಿಎಫ್‌ಒ ಲೂಕಾ ಮೀಸ್ಟ್ರಿ ಈ ಸಂವಾದದಲ್ಲಿ ಮಾತನಾಡುತ್ತಾ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಬಹುತೇಕ ಮಾರುಕಟ್ಟೆಗಳಲ್ಲಿ ದಾಖಲೆಯ ಅದಾಯ ಸಿಕ್ಕಿರುವುದನ್ನು ತಿಳಿಸಿದರು.

"ಹಲವು ಉದಯೋನ್ಮುಖ ದೊಡ್ಡ ಮಾರುಕಟ್ಟೆಗಳಲ್ಲಿ ನಮ್ಮ ಸಾಧನೆ ಬಹಳ ಉತ್ತಮವಾಗಿದೆ. ಭಾರತದಲ್ಲಿ ಸಾರ್ವಕಾಲಿಕ ದಾಖಲೆಯ ಆದಾಯ ಸಿಕ್ಕಿದೆ. ಥಾಯ್ಲೆಂಡ್, ವಿಯೆಟ್ನಾಂ, ಇಂಡೋನೇಷ್ಯಾ ಮತ್ತು ಮೆಕ್ಸಿಕೋದಲ್ಲಿ ವರ್ಷವಾರು ಗಣನೆಯಲ್ಲಿ ಈ ತ್ರೈಮಾಸಿಕ ಅವಧಿಯಲ್ಲಿ ಆದಾಯ ದ್ವಿಗುಣಗೊಂಡಿದೆ" ಎಂದು ಲೂಕಾ ಮಾಹಿತಿ ನೀಡಿದರು.

 

ಆ್ಯಪಲ್ ಮಾತ್ರ ಶೈನಿಂಗ್

ಆ್ಯಪಲ್ ಮಾತ್ರ ಶೈನಿಂಗ್

ಅಕ್ಟೋಬರ್ 1ರಿಂದ ಆರಂಭವಾಗುವ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ಅವಧಿಯಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ಬೇಡಿಕೆ ತಗ್ಗಿತ್ತು. ಆ್ಯಪಲ್ ಹೊರತುಪಡಿಸಿ ಬೇರೆಲ್ಲಾ ಕಂಪನಿಗಳ ಸ್ಮಾರ್ಟ್‌ಫೋನ್‌ಗಳ ಮಾರಾಟ ಈ ಅವಧಿಯಲ್ಲಿ ಕಡಿಮೆಯಾಗಿತ್ತು. ಒಟ್ಟಾರೆ ಮಾರಾಟ ಶೇ. 9ರಷ್ಟು ಕುಸಿದಿತ್ತು. ಅದರೆ, ಆ್ಯಪಲ್ ಕಂಪನಿ ಮಾತ್ರವೇ ಈ ಮೂರನೇ ತ್ರೈಮಾಸಿಕಲ್ಲಿ ಶೇ. 8ರಷ್ಟು ಆದಾಯ ಏಳ್ಗೆ ಕಂಡಿದ್ದು.

ಆ್ಯಪಲ್ ಕಂಪನಿಯ ಉತ್ಪನ್ನಗಳ ಪೈಕಿ ಅತೀ ಹೆಚ್ಚು ಮಾರಾಟವಾಗುವುದು ಮತ್ತು ಬಹುಪಾಲು ಆದಾಯ ಮೂಲವಾಗಿರುವುದು ಅದರ ಐಫೋನ್‌ಗಳೇ. ಈ ವರ್ಷ ಐಫೋನ್ 13 ಮತ್ತು ಐಫೋನ್ 14 ಮೊಬೈಲ್‌ಗಳು ಬಹಳ ಬೇಡಿಕೆ ಪಡೆದಿದ್ದು ಭರ್ಜರಿ ಮಾರಾಟ ಕಂಡಿವೆ. ಮೂರನೇ ತ್ರೈಮಾಸಿಕ ಅವಧಿಯಲ್ಲಿ ಈ ಐಫೋನ್‌ಗಳೇ ಆ್ಯಪಲ್ ಆದಾಯಕ್ಕೆ ಎಂಜಿನ್‌ಗಳಾಗಿದ್ದು.

ವಿಶ್ವದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿರುವುದು ಸ್ಯಾಮ್ಸುಂಗ್ ಮತ್ತು ಆ್ಯಪಲ್. ಅದಾದ ಬಳಿಕ ಚೀನಾದ ಸ್ಮಾರ್ಟ್‌ಫೋನ್ ಕಂಪನಿಗಳು ಮುಂಚೂಣಿಯಲ್ಲಿವೆ.

 

English summary

Record iPhone Sales in India Boost Apple's Revenue Growth

Apple has registered increase of 8% in its revenue this financial year, mainly due to extra-ordinary performance in emerging markets like India.
Story first published: Friday, October 28, 2022, 10:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X