For Quick Alerts
ALLOW NOTIFICATIONS  
For Daily Alerts

ಆ 'ಫ್ಯಾನ್ಸಿ ನಂಬರ್'ಗೆ ಆತ ಬಿಡ್ ಮಾಡಿದ್ದು 10 ಲಕ್ಷ ರುಪಾಯಿ

|

ಕೆಲವರಿಗೆ ವಾಹನಗಳ ನೋಂದಣಿ ಸಂಖ್ಯೆ ವಿಚಾರದಲ್ಲಿ ಅದೃಷ್ಟ ಎಂಬ ನಂಬಿಕೆ ಇರುತ್ತದೆ. ಮತ್ತೆ ಕೆಲವರಿಗೆ ಇಂಥದ್ದೇ ಸಂಖ್ಯೆ ಬೇಕು ಎಂಬ ಕಾರಣಕ್ಕೆ ಎಷ್ಟು ಹಣ ಕೊಟ್ಟಾದರೂ ಖರೀದಿ ಮಾಡುತ್ತಾರೆ. 'ಫ್ಯಾನ್ಸಿ ನಂಬರ್'ಗೆ ಸಾರಿಗೆ ಇಲಾಖೆಯಲ್ಲಿ ಬೇಡಿಕೆ ಹೆಚ್ಚು. ಕೆಲವು ಸಂಖ್ಯೆಗಳನ್ನು ಹರಾಜು ಕೂಡ ಹಾಕುತ್ತಾರೆ. ಹಾಗೆ ಹರಾಜು ಹಾಕಿದಾಗಲೇ ಕರ್ನಾಟಕ ಸಾರಿಗೆ ಇಲಾಖೆಗೆ 10 ಲಕ್ಷ ರುಪಾಯಿ ಸಂಗ್ರಹವಾಗಿದೆ.

ಯಾವುದು ಆ ಸಂಖ್ಯೆ ಅಂತೀರಾ? KA-01 MV 0001- ಇದೇ ಆ ಫ್ಯಾನ್ಸಿ ಸಂಖ್ಯೆ. ಬೆಂಗಳೂರಿನ ನಿವಾಸಿಯಾದ ಗುಲಾಮ್ ಮುಸ್ತಫಾ ಅವರು ಈ ಫ್ಯಾನ್ಸಿ ನಂಬರ್ ಅನ್ನು ತಮ್ಮ ಮರ್ಸಿಡಿಸ್ ಬೆಂಜ್ ಕಾರಿಗಾಗಿ ಖರೀದಿಸಿದ್ದಾರೆ. ಸೋಮವಾರದಂದು ಸಾರಿಗೆ ಇಲಾಖೆಯಿಂದ ಹರಾಜು ಆಯೋಜಿಸಲಾಗಿತ್ತು.

 

ಆಕ್ಸಿಸ್ ಬ್ಯಾಂಕ್ ನಿಂದ ಹಬ್ಬದ ಋತುವಿಗೆ ಸಾಲದ ಮೇಲೆ ಆಕರ್ಷಕ ಆಫರ್ ಗಳು

ಈ ಹರಾಜಿನ ಮೊತ್ತದಲ್ಲಿ ಠೇವಣಿ ಮೊತ್ತ 75,000 ಒಳಗೊಂಡಿಲ್ಲ. ಬಿಡ್ ಗೆದ್ದವರಿಗೆ ಹಣ ಹಿಂತಿರುಗಿಸುವುದಿಲ್ಲ. "ಕೋರಮಂಗಲ ಆರ್ ಟಿಒ ವ್ಯಾಪ್ತಿಯಲ್ಲಿ ನಾವು ನೋಂದಣಿ ಸಂಖ್ಯೆ ಹರಾಜು ಆಯೋಜಿಸಿದ್ದೆವು. ಕರ್ನಾಟಕದಲ್ಲಿ ಈ ವರೆಗೆ ಬಿಡ್ ಆದ ಅತಿ ದೊಡ್ಡ ಮೊತ್ತ 10 ಲಕ್ಷ ರುಪಾಯಿ. ಇದು ಕೂಡ ಆರ್ಥಿಕ ಚೇತರಿಕೆಯ ಲಕ್ಷಣ," ಎಂದು ಅಧಿಕಾರಿಗಳು ಹೇಳಿದ್ದಾರೆ.

ಆ 'ಫ್ಯಾನ್ಸಿ ನಂಬರ್'ಗೆ ಆತ ಬಿಡ್ ಮಾಡಿದ್ದು 10 ಲಕ್ಷ ರುಪಾಯಿ

ಇನ್ನೊಂದು ಸಂಖ್ಯೆಗೆ ಅತಿ ಹೆಚ್ಚು ಬಿಡ್ ಮಾಡಿದವರು ಭರತ್ ಕುಮಾರ್ ರೆಡ್ಡಿ. ಅವರು 9999 ಸಂಖ್ಯೆಗೆ 3.4 ಲಕ್ಷ ರುಪಾಯಿ ಪಾವತಿಸಿದ್ದಾರೆ. ಇನ್ನು ಜೆ ಕೃಷ್ಣಾರೆಡ್ಡಿ ಎಂಬುವರು 0009 ಸಂಖ್ಯೆಗೆ 3 ಲಕ್ಷ ಪಾವತಿಸಿದ್ದಾರೆ. ಇನ್ನು ಚಂದನ್ ರೆಡ್ಡಿ 1.3 ಲಕ್ಷ ರುಪಾಯಿ ಬಿಡ್ ಮಾಡಿ, 0999 ಸಂಖ್ಯೆ ಪಡೆದಿದ್ದಾರೆ.

ಒಟ್ಟು ಹದಿನೈದು ಯಶಸ್ವಿ ಬಿಡ್ ದಾರರಿಗೆ ಸಾರಿಗೆ ಇಲಾಖೆಯು 29.5 ಲಕ್ಷ ರುಪಾಯಿಗೂ ಹೆಚ್ಚು ಸಂಗ್ರಹಿಸಿದೆ.

English summary

Registration Number '0001' Fetches Record Bid Of Rs 10 Lakh In Karnataka

Bengaluru resident bid 10 lakh rupees for fancy number 0001. Here is the other fancy number bids.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X