For Quick Alerts
ALLOW NOTIFICATIONS  
For Daily Alerts

ಚೀನಾಕ್ಕೆ ತಿರುಗೇಟು : ರಿಲಯನ್ಸ್ - ಫೇಸ್‌ಬುಕ್‌ನಿಂದ 'ಸೂಪರ್' ಆ್ಯಪ್?

|

ಸಾಮಾಜಿಕ ಜಾಲತಾಣ ದಿಗ್ಗಜ ಫೇಸ್‌ಬುಕ್ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಒಟ್ಟಿಗೆ ಸೇರಿ ಸೂಪರ್ ಆ್ಯಪ್ ಒಂದನ್ನು ರಚಿಸಲು ಸಿದ್ಧತೆ ಮಾಡಿಕೊಂಡಿವೆ ಎಂದು ಎಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ. ಚೀನಾಕ್ಕೆ ವೀ ಚಾಟ್‌ಗೆ ಸೆಡ್ಡು ಹೊಡೆಯಲು ಈ 'ಸೂಪರ್' ಆ್ಯಪ್ ಬಿಡುಗಡೆ ಪ್ಲಾನ್‌ ಮಾಡಿಕೊಂಡಿದ್ದಾರೆ.

ಚೀನಾದ ಆ್ಯಪ್‌ ವೀಚಾಟ್‌ನಂತೆಯೇ(Wechat)ನಂತೆಯೇ ಅನೇಕ ಉದ್ದೇಶಗಳನ್ನು ಆಧರಿಸಿದ ಆ್ಯಪ್‌ ಅನ್ನು ಎರಡು ಸಂಸ್ಥೆಗಳು ಸೇರಿಕೊಂಡು ರೆಡಿಮಾಡುವ ಯೋಜನೆ ಮಾಡಿಕೊಂಡಿವೆ. ಅದರಲ್ಲೂ ಫೇಸ್‌ಬುಕ್ ಕಂಪನಿಯ ವಾಟ್ಸ್ಆ್ಯಪ್ ಮತ್ತು ಬಳಕೆದಾರರ ನೆಲೆಯನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಆ್ಯಪ್ ರಚಿಸಲು ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಕೊರೊನಾವೈಸ್‌ ಸಾಂಕ್ರಾಮಿಕ ರೋಗವಿಲ್ಲದಿದ್ದರೆ ಈ ಆ್ಯಪ್ ಬಹುಬೇಗನೆ ಸಿದ್ಧಗೊಳ್ಳುತ್ತಿತ್ತು, ಆದರೆ ಜಾಗತಿಕವಾಗಿ ಕೋವಿಡ್-19ನಿಂದಾಗಿ ಈ ಆ್ಯಪ್ ಕುರಿತು ಸಿದ್ಧತೆ ವಿಳಂಬವಾಗುತ್ತಿದೆ ಎನ್ನಲಾಗಿದೆ. ಈ ಆ್ಯಪ್‌ನಲ್ಲಿ ರಿಲಯನ್ಸ್ ಹಾಗೂ ಫೇಸ್‌ಬುಕ್ ಇಬ್ಬರು ಹೂಡಿಕೆ ಮಾಡುವ ಮೂಲಕ ಹೊಸ ಉದ್ಯಮ ಸಹಭಾಗಿತ್ವ ರಚನೆಗೆ ಮುಂದಾಗಬಹುದು.

ಸೂಪರ್ ಆ್ಯಪ್‌ನಲ್ಲಿ ಏನೇನಿರುತ್ತೆ?

ಸೂಪರ್ ಆ್ಯಪ್‌ನಲ್ಲಿ ಏನೇನಿರುತ್ತೆ?

ಸೂಪರ್ ಆ್ಯಪ್‌ನಲ್ಲಿ ಹಲವು ಉದ್ದೇಶಗಳನ್ನೊಳಗೊಂಡು ಮಾರುಕಟ್ಟೆ ಕಾಲಿಡಲಿದೆ. ಡಿಜಿಟಲ್ ಪಾವತಿಗಳು, ಸಾಮಾಜಿಕ ಜಾಲತಾಣ, ಗೇಮಿಂಗ್ ಜೊತೆಗೆ ವಿಮಾನ ಮತ್ತು ಹೋಟೆಲ್ ಬುಕಿಂಗ್ ಎಲ್ಲವನ್ನೂ ಒಳಗೊಂಡಿರುವ ವಿ ಚಾಟ್ ಮಾದರಿಯಲ್ಲಿ ಸೂಪರ್-ಆ್ಯಪ್ ಅನ್ನು ರಚಿಸುವ ಯೋಜನೆ ರಿಲಯನ್ಸ್ ಹಾಗೂ ಫೇಸ್‌ಬುಕ್‌ನದ್ದಾಗಿದೆ.

ಸೂಪರ್ ಆ್ಯಪ್ ಕುರಿತು ಬಾಯ್ಬಿಡದ ಫೇಸ್‌ಬುಕ್, ರಿಲಯನ್ಸ್

ಸೂಪರ್ ಆ್ಯಪ್ ಕುರಿತು ಬಾಯ್ಬಿಡದ ಫೇಸ್‌ಬುಕ್, ರಿಲಯನ್ಸ್

ಅಮೆರಿಕದ ಬಹುರಾಷ್ಟ್ರೀಯ ಹೂಡಿಕೆಯ ಬ್ಯಾಂಕ್‌ ಆಗಿರುವ ಮಾರ್ಗನ್ ಸ್ಟಾನ್ಲಿ ಈ ಯೋಜನೆಯ ಬ್ಯಾಂಕರ್ ಆಗಿ ನೇಮಿಸಲಾಗಿದೆ ಎಂದು ತಿಳಿದುಬಂದಿದೆ. ಈ ಯೋಜನೆಯ ವಾಣಿಜ್ಯ ಕಾರಣ ಪರಿಶ್ರಮ ಪ್ರಗತಿಯಲ್ಲಿದ್ದು, ಈ ಬಗ್ಗೆ ರಿಲಯನ್ಸ್ ಎಕನಾಮಿಕ್‌ ಟೈಮ್ಸ್‌ನ ಇ - ಮೇಲ್‌ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಫೇಸ್‌ಬುಕ್‌ ಸಹ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ಆದರೆ ಈ ಎರಡು ಕಂಪನಿಗಳು ಒಟ್ಟಾಗಿ ಮಾಡುವ ಈ ವ್ಯವಹಾರದಿಂದಾಗಿ ರಿಲಯನ್ಸ್, ಫೇಸ್‌ಬುಕ್ ಮೌಲ್ಯ ಹೆಚ್ಚಾಗಲಿದೆ ಎನ್ನಲಾಗುತ್ತಿದೆ.

 

 

ರಿಲಯನ್ಸ್ ಜಿಯೋನಲ್ಲಿ ಫೇಸ್‌ಬುಕ್ ಪಾಲು?

ರಿಲಯನ್ಸ್ ಜಿಯೋನಲ್ಲಿ ಫೇಸ್‌ಬುಕ್ ಪಾಲು?

ರಿಲಯನ್ಸ್ ಜಿಯೋನಲ್ಲಿ ಫೇಸ್‌ಬುಕ್ ಬಹುಕೋಟಿ ರುಪಾಯಿ ಹೂಡಿಕೆ ಮಾಡಲಿದೆ ಎಂಬ ಮಾತು ಈ ಹಿಂದೆಯೇ ಕೇಳಿಬಂದಿತ್ತು. ಸಂಸ್ಥೆಯಲ್ಲಿ 10 ಪರ್ಸೆಂಟ್‌ನಷ್ಟು ಪಾಲನ್ನು ಹೊಂದಲಿದೆ ಎಂದು ಕೂಡ ಇತ್ತೀಚೆಗೆ ವರದಿಯೊಂದು ಹೇಳಿತ್ತು. ಎರಡೂ ಕಂಪನಿಗಳು ಕಾನೂನು ಮತ್ತು ತೆರಿಗೆ ವಿಚಾರಗಳನ್ನು ಅನ್ವೇಷಿಸಲು ಅಮೆರಿಕಾ ಮೂಲದ ಉನ್ನತ ಸಲಹೆಗಾರರನ್ನು ಮತ್ತು ವಕೀಲರನ್ನು ನೇಮಿಸಿಕೊಂಡಿದೆ ಎಂದು ಮೂಲಗಳು ಹೇಳಿವೆ.

ಕೊರೊನಾ ಹಾವಳಿಯಿಂದ ಆ್ಯಪ್ ಬಿಡುಗಡೆ ವಿಳಂಬ

ಕೊರೊನಾ ಹಾವಳಿಯಿಂದ ಆ್ಯಪ್ ಬಿಡುಗಡೆ ವಿಳಂಬ

ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಒಪ್ಪಂದವು ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದು ಯೋಜನೆಯ ಬಗ್ಗೆ ತಿಳಿದುಕೊಂಡಿರುವವರು ಸುಳಿವು ನೀಡಿದ್ದಾರೆ. ಸದ್ಯ, ಗ್ರಾಹಕರು ಸರಬರಾಜು ಪಡೆಯಲು ಮಳಿಗೆಗಳನ್ನು ಚಾಲನೆಯಲ್ಲಿರಿಸಿಕೊಳ್ಳುವುದು ರಿಲಯನ್ಸ್ ರೀಟೇಲ್‌ನ ಆದ್ಯತೆಯಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಲಾಕ್‌ಡೌನ್‌ ಕಾರಣದಿಂದ ಪ್ರಯಾಣ ನಿರ್ಬಂಧಗಳಿರುವುದರಿಂದ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂದೂ ಹೇಳಲಾಗಿದೆ.

ರಿಲಯನ್ಸ್ ಜಿಯೋ ಮತ್ತು ರಿಲಯನ್ಸ್ ರಿಟೇಲ್‌ಗಾಗಿ ಹಣವನ್ನು ಹೂಡಿಕೆ ಮಾಡಲು ಕಂಪನಿಯು ಎದುರು ನೋಡುತ್ತಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಸಾರ್ವಜನಿಕವಾಗಿ ಹೇಳಿದೆ ಎಂದು ಕಾರ್ಯನಿರ್ವಾಹಕ ಹೇಳಿದರು. "ಹಣವು ಒಬ್ಬ ಹೂಡಿಕೆದಾರರಿಂದ ಅಥವಾ ಇನ್ನೊಬ್ಬರಿಂದ ಬಂದಿದೆಯೆ ಎಂಬುದು ಮುಖ್ಯವಲ್ಲ" ಎಂದು ಕೂಡ ತಿಳಿಸಿದ್ದಾರೆ.

ಈ ಮೂಲಕ ರಿಲಯನ್ಸ್‌ ಜಿಯೋ ಮೇಲೆ ಫೇಸ್‌ಬುಕ್ ಕೂಡ ಹಣ ಹೂಡಿಕೆ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿದ್ದು, ಇದರ ಜೊತೆಗೆ ಸೂಪರ್ ಆ್ಯಪ್ ತಯಾರಿಯ ನಡುವೆ ಕೊರೊನಾ ಅಡ್ಡಿಯಾಗಿದೆ.

 

English summary

Reliance Facebook Creating A Super App

Mukesh Ambani-led Reliance Industries and Facebook are exploring the possibility of creating a multipurpose app, similar to Chinese super-app WeChat
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X