For Quick Alerts
ALLOW NOTIFICATIONS  
For Daily Alerts

ಯೆಸ್‌ ಬ್ಯಾಂಕ್‌ಗೆ ಸಾಲ ಮರುಪಾವತಿಸಲು ಬದ್ಧ: ರಿಲಯನ್ಸ್ ಗ್ರೂಪ್

|

ಯೆಸ್ ಬ್ಯಾಂಕ್‌ನಿಂದ ಪಡೆದಿರುವ ಸಾಲವನ್ನು ಸಂಪೂರ್ಣ ಮರುಪಾವತಿಸಲು ಬದ್ಧ ಎಂದು ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಗ್ರೂಪ್ ಬುಧವಾರ ಹೇಳಿದೆ.

ಯೆಸ್‌ ಬ್ಯಾಂಕ್‌ನಿಂದ ಸಾಮಾನ್ಯ ವ್ಯವಹಾರದಲ್ಲಿಯೇ ಸಾಲ ಪಡೆಯಲಾಗಿದೆ. ಈ ಸಂಬಂಧ ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ಅಥವಾ ಕುಟುಂಬ , ಇತರೆ ಯಾವುದೇ ಸಂಬಂಧಿಗಳೊಂದಿಗೆ ನೇರ ಅಥವಾ ಪರೋಕ್ಷ ಸಂಪರ್ಕ ಹೊಂದಿಲ್ಲ ಎಂದು ರಿಲಯನ್ಸ್‌ ಗ್ರೂಪ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಯೆಸ್‌ ಬ್ಯಾಂಕ್‌ಗೆ ಸಾಲ ಮರುಪಾವತಿಸಲು ಬದ್ಧ: ರಿಲಯನ್ಸ್ ಗ್ರೂಪ್

ರಿಲಯನ್ಸ್‌ ಗ್ರೂಪ್ ಸೇರಿದಂತೆ 10 ಬೃಹತ್ ಸಂಸ್ಥೆಗಳು ಯೆಸ್‌ ಬ್ಯಾಂಕ್ ಈ ಆರ್ಥಿಕ ಮುಗ್ಗಟ್ಟಿಗೆ ಕಾರಣವಾಗಿದ್ದು, ಅನಿಲ್ ಅಂಬಾನಿ ಒಡೆತನದ ಕನಿಷ್ಟ ಒಂಬತ್ತು ಕಂಪನಿಗಳು 12,800 ಕೋಟಿ ಸಾಲ ಪಡೆದಿವೆ(ಕೆಟ್ಟ ಸಾಲ).

ರಿಲಯನ್ಸ್ ಅಷ್ಟೇ ಅಲ್ಲದೆ ಒಟ್ಟು 10 ದೊಡ್ಡ ಕಂಪೆನಿಗಳಿಗೆ ಸೇರಿದ 44 ಸಣ್ಣ ಕಂಪೆನಿಗಳು ಯೆಸ್ ಬ್ಯಾಂಕ್ ಒಟ್ಟು ಎನ್ಪಿಎ ಪೈಕಿ 34 ಸಾವಿರ ಕೋಟಿ ರೂಪಾಯಿಗೂ ಹೆಚ್ಚಾಗಿದೆ ಎಂದು ವರದಿ ಮಾಡಲಾಗಿದೆ.

ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಯೆಸ್ ಬ್ಯಾಂಕ್ ಈಗಾಗಲೇ ಆರ್‌ಬಿಐ ನಿಂದ ನಿರ್ಬಂಧಕ್ಕೊಳಪಟ್ಟಿದ್ದು, ಏಪ್ರಿಲ್ 3ರವರೆಗೆ ಗ್ರಾಹಕರು 50,000 ರುಪಾಯಿ ಮಾತ್ರ ವಿತ್‌ ಡ್ರಾ ಮಾಡಿಕೊಳ್ಳಬಹುದು.

English summary

Reliance Group Said Its Entire Debt Committed To Repay

Reliance Group has said it has no direct or indirect exposure to Rana Kapoor, his family or any entities controlled by them and that that its entire exposure to yes bank.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X